Cess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?

GST Council Decision: 4 ಮೀಟರ್ ಉದ್ದ, 1500 ಸಿಸಿ ಎಂಜಿನ್ ಸಾಮರ್ಥ್ಯ ಹಾಗೂ 170 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಇರುವ ಎಲ್ಲಾ ವಾಹನಗಳ ಮೇಲೆ ಶೇ. 28ರಷ್ಟು ಜಿಎಸ್​ಟಿ ಜೊತೆಗೆ 22 ಪ್ರತಿಶತದಷ್ಟು ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ.

Cess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?
ಕಾರ್ ಶೋರೂಮ್ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2023 | 11:29 AM

ನವದೆಹಲಿ: 50ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಾಹನ ಕ್ಷೇತ್ರದಲ್ಲಿ ಕಾಂಪೆನ್ಸೇಶನ್ ತೆರಿಗೆ (Compensation Cess) ವಿಚಾರದಲ್ಲಿ ಸ್ಪಷ್ಟತೆ ನೀಡಲಾಗಿದೆ. ವಾಹನಗಳಿಗೆ ಇರುವ ಶೇ. 28ರಷ್ಟು ಜಿಎಸ್​ಟಿಗೆ ಹೆಚ್ಚುವರಿಯಾಗಿ ಕಾಂಪೆನ್ಸೇಶನ್ ಸೆಸ್ ಅನ್ನು ಶೇ. 22ರಷ್ಟರವರೆಗೂ ವಿಧಿಸಲಾಗುತ್ತಿತ್ತು. ಇದೀಗ ಎಸ್​ಯುವಿಯೂ ಒಳಗೊಂಡಂತೆ ಎಲ್ಲಾ ಮಲ್ಟಿ ಯುಟಿಲಿಟಿ ವಾಹನಗಳಿಗೆ (MUV) ಶೇ. 22ಎಷ್ಟು ಕಾಂಪೆನ್ಸೇಶನ್ ಸೆಸ್ ವಿಧಿಸಲು ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ (GST Council Meeting) ನಿರ್ಣಯಿಸಲಾಗಿದೆ. ಇಲ್ಲಿ ಮಹತ್ವದ ಸಂಗತಿ ಎಂದರೆ ಯಾವುದು ಎಸ್​ಯುವಿ ಕಾರೆಂದು ಪರಿಗಣಿಸಲಾಗುತ್ತದೆ ಎಂಬುದಕ್ಕೆ ಮೂರು ಮಾನದಂಡಗಳನ್ನು ನಿಗದಿ ಮಾಡಲಾಗಿದೆ.

ಎಸ್​ಯುವಿ ಕಾರು ಎನಿಸಲು 3 ಪ್ಯಾರಾಮೀಟರ್ಸ್

  1. ಕಾರಿನ ಉದ್ದ ಕನಿಷ್ಠ 4 ಮೀಟರ್
  2. ಎಂಜಿನ್ ಸಾಮರ್ಥ್ಯ 1,500 ಸಿಸಿ ಹಾಗೂ ಅದಕ್ಕಿಂತ ಹೆಚ್ಚು
  3. ಗ್ರೌಂಡ್ ಕ್ಲಿಯರೆನ್ಸ್ ಕನಿಷ್ಠ 170 ಮಿಮೀ

ಇದನ್ನೂ ಓದಿGST Council Meeting: ಹಲವು ವಸ್ತುಗಳ ಜಿಎಸ್​ಟಿ ಭಾರ ಇಳಿಸಿದ ನಿರ್ಮಲಾ ಸೀತಾರಾಮನ್; ಇಲ್ಲಿದೆ ವಿವರ

ಇಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಎಂದರೆ ಕಾರಿನ ಅತ್ಯಂತ ಕೆಳ ಭಾಗ (ಚಾಸಿಸ್) ಹಾಗು ನೆಲದ ನಡುವಿನ ಅಂತರ. ಇದು 170 ಮಿಲಿಮೀಟರ್ ಹಾಗೂ ಅದಕ್ಕಿಂತ ಹೆಚ್ಚು ಎತ್ತರವಾಗಿದ್ದರೆ ಅಂಥದು ಎಸ್​ಯುವಿ ಕಾರಿನ ಒಂದು ಪ್ಯಾರಾಮೀಟರ್ ಎಂದು ಪರಿಗಣಿಸಲಾಗಿದೆ.

ಈಗ ಎಸ್​ಯುವಿ, ಎಂಯುವಿ ಮತ್ತು ಎಕ್ಸ್​ಯುವಿ ಕಾರುಗಳೆಲ್ಲವಕ್ಕೂ ಏಕರೀತಿಯ ಜಿಎಸ್​ಟಿ ದರ ಅನ್ವಯ ಆಗುತ್ತದೆ. ಇದರೊಂದಿಗೆ ಕಾರುಗಳಿಗೆ ವಿಧಿಸಲಾಗುವ ತೆರಿಗೆ ದರ ವಿಚಾರದಲ್ಲಿ ಸ್ಪಷ್ಟತೆ ಸಿಕ್ಕಂತಾಗಿದೆ.

ಇದೀಗ 22 ಪ್ರತಿಶತದಷ್ಟು ಕಾಂಪೆನ್ಸೇಶನ್ ಸೆಸ್ ಅನ್ನು ವಿಧಿಸಲಾಗುವುದರಿಂದ ಹಲವು ವಾಹನಗಳ ಬೆಲೆ ಹೆಚ್ಚಳವಾಗಲಿದೆ. ಎಸ್​ಯುವಿಗಳಿಗೆ ಜಿಎಸ್​ಟಿ ಮತ್ತು ಕಾಂಪೆನ್ಸೇಶನ್ ಸೆಸ್ ಸೇರಿ ಶೇ. 50ರಷ್ಟು ತೆರಿಗೆ ಬೀಳುತ್ತದೆ. ವಾಹನ ತಯಾರಕರು ಈ ಸೆಸ್ ಅನ್ನು ಸಹಜವಾಗಿ ಗ್ರಾಹಕರಿಗೆ ವರ್ಗಾಯಿಸುತ್ತಾರೆ.

ಇದನ್ನೂ ಓದಿStrict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಏನಿದು ಕಾಂಪೆನ್ಸೇಶನ್ ಸೆಸ್?

ಕಾಂಪೆನ್ಸೇಶನ್ ಸೆಸ್ ಎಂಬುದು ರಾಜ್ಯಗಳಿಗೆ ಸಿಗುವ ಪರಿಹಾರ ತೆರಿಗೆ. ಜಿಎಸ್​ಟಿ ಜಾರಿಯಾಗುವ ಮುನ್ನ ರಾಜ್ಯಗಳು ಪ್ರತ್ಯೇಕವಾಗಿ ವಿವಿಧ ತೆರಿಗೆಗಳನ್ನು ವಿಧಿಸಿ ಆದಾಯ ಪಡೆಯುತ್ತಿದ್ದವು. ಜಿಎಸ್​ಟಿ ಜಾರಿಯಾದ ಬಳಿಕ ಆ ತೆರಿಗೆಗಳೆಲ್ಲವೂ ರದ್ದಾಗಿ ಏಕರೂಪದ ತೆರಿಗೆ ಬಂದಿತು. ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆಯಾಗುತ್ತದೆ. ಇದರಿಂದ ರಾಜ್ಯಗಳಿಗೆ ಸಿಗುತ್ತಿದ್ದ ಹೆಚ್ಚುವರಿ ತೆರಿಗೆ ನಿಂತಂತಾಗಿದೆ. ಇದನ್ನು ಸರಿದೂಗಿಸಲು ಕೆಲ ವಸ್ತುಗಳ ಮೇಲೆ ಜಿಎಸ್​ಟಿ ಜೊತೆಗೆ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ. ಈ ಸೆಸ್​ನ ಹಣವನ್ನು ರಾಜ್ಯಗಳಿಗೆ ಹಂಚಲಾಗುತ್ತದೆ.

ತಂಬಾಕು ಉತ್ಪನ್ನಗಳು, ಸೋಡಾ, ಕೋಲಾ, ಲೆಮೊನೇಡ್ ಇತ್ಯಾದಿ ಕಾರ್ಬೊನೇಟೆಡ್ ಪಾನೀಯಗಳು, 350 ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್, ಖಾಸಗಿ ಬಳಕೆಯ ವಿಮಾನ, ಯಾಚ್, ಸಣ್ಣ ಸಾರಿಗೆ ವಾಹನಗಳು ಇತ್ಯಾದಿಗಳಿಗೆ ವಿವಿಧ ದರಗಳ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್