Gaming Tax: ಇಡೀ ಗೇಮಿಂಗ್ ಉದ್ಯಮವನ್ನೇ ಕೊಂದುಬಿಟ್ರಿ..! ಆನ್​ಲೈನ್ ಗೇಮಿಂಗ್​ಗೆ ಶೇ. 28 ಜಿಎಸ್​ಟಿ ವಿಧಿಸಿದ್ದಕ್ಕೆ ಉದ್ಯಮಿ ಅಶ್ನೀರ್ ಗ್ರೋವರ್ ಆಕ್ರೋಶ

Ashneer Grover Anger: ಆನ್​ಲೈನ್ ಗೇಮ್​ಗಳನ್ನು ಜೂಜಾಟಗಳಂತೆ ಪರಿಗಣಿಸಿ, ಶೇ. 28ರಷ್ಟು ಜಿಎಸ್​ಟಿ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಹಳಷ್ಟು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

Gaming Tax: ಇಡೀ ಗೇಮಿಂಗ್ ಉದ್ಯಮವನ್ನೇ ಕೊಂದುಬಿಟ್ರಿ..! ಆನ್​ಲೈನ್ ಗೇಮಿಂಗ್​ಗೆ ಶೇ. 28 ಜಿಎಸ್​ಟಿ ವಿಧಿಸಿದ್ದಕ್ಕೆ ಉದ್ಯಮಿ ಅಶ್ನೀರ್ ಗ್ರೋವರ್ ಆಕ್ರೋಶ
ಸಾಂದರ್ಭಿಕ ಚಿತ್ರ
Follow us
|

Updated on:Jul 13, 2023 | 11:43 AM

ನವದೆಹಲಿ: ಡ್ರೀಮ್ ಇಲವೆನ್ ಇತ್ಯಾದಿ ಕಂಪನಿಗಳು ನಡೆಸುವ ಆನ್​ಲೈನ್ ಫ್ಯಾಂಟಸಿ ಗೇಮ್ ಉದ್ಯಮಕ್ಕೆ (Online Gaming) ಶೇ. 28ರಷ್ಟು ಜಿಎಸ್​ಟಿ ವಿಧಿಸಿದ್ದಕ್ಕೆ ಮತ್ತು ಈ ಕೌಶಲ್ಯದ ಕ್ರೀಡೆಯನ್ನು (Skill Based Game) ಜೂಜಾಟಗಳೊಂದಿಗೆ (Chance Based Game) ಥಳುಕು ಹಾಕಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 11ರಂದು ಜಿಎಸ್​ಟಿ ಕೌನ್ಸಿಲ್ ಸಭೆಯ ಬಳಿಕ ನ್​ಲೈನ್ ಗೇಮಿಂಗ್ ಸೇರಿದಂತೆ ಒಟ್ಟಾರೆ ಗೇಮಿಂಗ್ ವಲಯಕ್ಕೆ ಶೇ. 28ರಷ್ಟು ಜಿಎಸ್​ಟಿ ವಿಧಿಸುತ್ತಿರುವುದಾಗಿ ಘೋಷಿಸಿದರು. ಕ್ರಿಕ್​ಪೆ ಎಂಬ ಫ್ಯಾಂಟಸಿ ಸ್ಪೋರ್ಟ್ಸ್ ಲೀಗ್ ಸ್ಥಾಪಕ ಅಶ್ನೀರ್ ಗ್ರೋವರ್ ಕೇಂದ್ರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೇಮಿಂಗ್ ಉದ್ಯಮ ಈಗಾಗಲೇ ಶೇ. 28ರಷ್ಟು ತೆರಿಗೆ ಕಟ್ಟುತ್ತಿದೆ. ಇದರ ಜೊತೆಗೆ ಮತ್ತೆ 28 ಪರ್ಸೆಂಟ್ ಜಿಎಸ್​ಟಿ ವಿಧಿಸಿ ಉದ್ಯಮವನ್ನೇ ಕೊಂದುಬಿಟ್ರಿ ಎಂದು ಗ್ರೋವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೇಮಿಂಗ್​ನ ಅನುಶಾಸನಗಳು ಪರಿವರ್ತನೆ ಕಂಡಿವೆ. ಆನ್​ಲೈನ್ ಗೇಮ್​ಗಳು ಜೂಜಾಟ ಅಲ್ಲ ಎಂದು ನಿರೂಪಿಸಿದ್ದೇವೆ. ಸುಪ್ರೀಂಕೋರ್ಟ್​ನಲ್ಲಿ ಅಗ್ನಿಪರೀಕ್ಷೆ ಗೆದ್ದಿದ್ದೇವೆ. ಆನ್​ಲೈನ್ ಗೇಮಿಂಗ್ ಎಂಬುದು ಕೌಶಲ್ಯತೆ ಬೇಡುವ ಆಟ ಎಂದು ಆಶ್ನೀರ್ ಗ್ರೋವರ್ ಸಿಡಿಮಿಡಿಗೊಂಡಿದ್ದಾರೆ.

‘ಜಿಎಸ್​ಟಿ ದರ ಹೆಚ್ಚಿಸುವುದರಿಂದ ಹೆಚ್ಚಿನ ತೆರಿಗೆ ಸಂಗ್ರಹ ಆಗುವುದಿಲ್ಲ. ನೀವು ಈ ನಿರ್ಧಾರ ಹಿಂಪಡೆಯದಿದ್ದರೆ ಇಡೀ ಉದ್ಯಮವೇ ಅಂತ್ಯಗೊಳ್ಳುತ್ತದೆ’ ಎಂದು ಕ್ರಿಕ್​ಪೇ ಸಂಸ್ಥಾಪಕರು ವ್ಯಾಕುಲಗೊಂಡಿದ್ದಾರೆ.

ಇದನ್ನೂ ಓದಿLithium Mining: ಲಿಥಿಯಂ ಮೈನಿಂಗ್ ಹರಾಜಿಗೆ ಕೇಂದ್ರ ಅನುಮೋದನೆ; ಆರು ಖನಿಜಗಳ ಗಣಿಗಾರಿಕೆಗೆ ಇದ್ದ ನಿಷೇಧ ಹಿಂತೆಗೆತ

ಆಶ್ನೀರ್ ಗ್ರೋವರ್ ಮಾತ್ರವಲ್ಲ ಮೋಹನ್ ದಾಸ್ ಪೈ ಸೇರಿದಂತೆ ಇತರ ವಲಯದ ಬಹಳಷ್ಟು ಉದ್ಯಮಿಗಳು ಗೇಮಿಂಗ್ ಉದ್ಯಮಕ್ಕೆ ಶೇ. 28ರಷ್ಟು ಜಿಎಸ್​ಟಿ ವಿಧಿಸಿರುವುದನ್ನು ವಿರೋಧಿಸಿದ್ದಾರೆ. ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕೇಂದ್ರದ ನಿರ್ಧಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಆನ್​ಲೈನ್ ಗೇಮ್​ಗಳಿಗೆ ಜಿಎಸ್​ಟಿ ಹೇಗೆ ಹೇರಿಕೆ?

ಗೇಮಿಂಗ್ ಉದ್ಯಮದಲ್ಲಿ ಪೂರ್ಣ ಫೇಸ್ ವ್ಯಾಲ್ಯೂ ಮೇಲೆ ಶೇ. 28ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇಲ್ಲಿ ಫೇಸ್​ವ್ಯಾಲ್ಯೂ ಎಂದರೆ ಗೇಮ್ ಆಡಲು ಆಟಗಾರ ತೆರುವ ಬೆಟ್ ಅಥವಾ ಎಂಟ್ರಿ ಫೀ ಅಂಥ ಯಾವುದಾದರೂ ಶುಲ್ಕ. ಈಗಿರುವ ವ್ಯವಸ್ಥೆಯಲ್ಲಿ ಗೇಮಿಂಗ್ ಕಂಪನಿಗಳು ಪ್ಲಾಟ್​ಫಾರ್ಮ್ ಶುಲ್ಕವಾಗಿ ಶೇ. 18ರಷ್ಟು ತೆರಿಗೆ ಪಾವತಿಸುತ್ತಿವೆ. ಈಗ ಮಾಡಲಾಗುತ್ತಿರುವ ಬದಲಾವಣೆ ಪ್ರಕಾರ ಇಡೀ ಗೇಮಿಂಗ್ ಹಣಕ್ಕೆ ಶೇ. 28ರಷ್ಟು ಜಿಎಸ್​ಟಿ ಇರುತ್ತದೆ.

ಇಲ್ಲಿ ಒಬ್ಬ ವ್ಯಕ್ತಿ ಕ್ಯಾಸಿನೋ, ಕುದುರೆ ಜೂಜು ಅಥವಾ ಆನ್​ಲೈನ್ ಗೇಮಿಂಗ್​ನಲ್ಲಿ ಗೆಲ್ಲುವ ಹಣಕ್ಕೆ ಪ್ರತ್ಯೇಕ ಶೇ. 30ರಷ್ಟು ಟಿಡಿಎಸ್ ಇರುತ್ತದೆ. ಅದರ ಜೊತೆಗೆ ಈಗ ಶುಲ್ಕ ಹಣಕ್ಕೆ ಶೇ. 28ರಷ್ಟು ಜಿಎಸ್​ಟಿಯೂ ಸೇರುತ್ತದೆ.

ಇದನ್ನೂ ಓದಿCess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?

ನಾವು ಉದ್ಯಮ ಕೊಲ್ಲುತ್ತಿಲ್ಲ, ಸರಳಗೊಳಿಸುತ್ತಿದ್ದೇವೆ ಎಂದ ನಿರ್ಮಲಾ ಸೀತಾರಾಮನ್

ಜಿಎಸ್​ಟಿ ಹೆಚ್ಚಳದಿಂದ ನಾವು ಆನ್​ಲೈನ್ ಗೇಮಿಂಗ್ ಆಗಲೀ, ಕ್ಯಾಸಿನೋ, ಕುದುರೆ ರೇಸಿಂಗ್ ಉದ್ಯಮವನ್ನಾಗಲೀ ಕೊಲ್ಲಲು ಹೊರಟಿಲ್ಲ. ಈ ಗೇಮ್​ಗಳು ಬಹಳ ಸಂಕೀರ್ಣಗೊಂಡಿವೆ. ಪಾರದರ್ಶಕತೆ ಇಲ್ಲದ ಈ ಉದ್ಯಮದ ಮುಸುಕನ್ನು ತೆಗೆಯುವುದು ಕಷ್ಟಸಾಧ್ಯ. ಅದ್ದರಿಂದ ನಾವು ಗೇಮಿಂಗ್ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಮೊನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆನ್​ಲೈನ್ ಗೇಮಿಂಗ್ ಅನ್ನು ಜೂಜಾಟಗಳ ಜೊತೆ ಸೇರಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ತೆರಿಗೆ ಉದ್ದೇಶಕ್ಕೆ ಮಾತ್ರ ಈ ವರ್ಗೀಕರಣ ಮಾಡಿದ್ದೇವೆಯೇ ಹೊರತು ಆನ್​ಲೈನ್ ಗೇಮಿಂಗ್ ಅನ್ನು ಜೂಜಾಟವೆಂದು ವ್ಯಾಖ್ಯಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿChip Enabled e-Passport: ಚಿಪ್ ಇರುವ ಇ-ಪಾಸ್​ಪೋರ್ಟ್; ಬೆಂಗಳೂರಿನಲ್ಲಿ ಮೊದಲ ಪ್ರಯೋಗ; ಎರಡೇ ದಿನದಲ್ಲಿ ಸಿಗುತ್ತಾ ಪಾಸ್​ಪೋರ್ಟ್?

ಬಹಳ ದೊಡ್ಡ ಉದ್ಯಮವಾಗುತ್ತಿದೆ ಗೇಮಿಂಗ್

ಭಾರತದ ಆನ್​ಲೈನ್ ಗೇಮಿಂಗ್ ಉದ್ಯಮ ಸದ್ಯ 1.5 ಬಿಲಿಯನ್ ಡಾಲರ್​ನಷ್ಟು ಬೃಹತ್ತಾಗಿದೆ. ಅಂದರೆ 12,000 ಕೋಟಿ ರೂ ಮೊತ್ತದ ಉದ್ಯಮ ಇದು. ಡ್ರೀಮ್11 ಸೇರಿದಂತೆ ಸಾವಿರಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟಪ್​ಗಳಿವೆ. ಜಾಗತಿಕವಾಗಿ 200 ಬಿಲಿಯನ್ ಡಾಲರ್​ನಷ್ಟು ಬೃಹತ್ತಾಗಿರುವ ಆನ್​ಲೈನ್ ಗೇಮಿಂಗ್ ಉದ್ಯಮ ಭಾರತದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಬೆಳೆಯುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Thu, 13 July 23

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?