AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chip Enabled e-Passport: ಚಿಪ್ ಇರುವ ಇ-ಪಾಸ್​ಪೋರ್ಟ್; ಬೆಂಗಳೂರಿನಲ್ಲಿ ಮೊದಲ ಪ್ರಯೋಗ; ಎರಡೇ ದಿನದಲ್ಲಿ ಸಿಗುತ್ತಾ ಪಾಸ್​ಪೋರ್ಟ್?

Passport Revolution By PSP 2.0: ಭಾರತದಲ್ಲಿ ಈಗ ಹೊಸ ಆವೃತ್ತಿಯ ಪಾಸ್​ಪೋರ್ಟ್ ಸೇವಾ ಯೋಜನೆ ಜಾರಿಗೆ ಬರಲಿದ್ದು, ಬೆಂಗಳೂರನಲ್ಲಿ ಮೊದಲ ಪ್ರಾಯೋಗಿಕ ಚಾಲನೆ ಪಡೆಯಲಿದೆ. ಚಿಪ್ ಇರುವ ಇ-ಪಾಸ್​ಪೋರ್ಟ್ ವ್ಯವಸ್ಥೆ ಬರಲಿದೆ.

Chip Enabled e-Passport: ಚಿಪ್ ಇರುವ ಇ-ಪಾಸ್​ಪೋರ್ಟ್; ಬೆಂಗಳೂರಿನಲ್ಲಿ ಮೊದಲ ಪ್ರಯೋಗ; ಎರಡೇ ದಿನದಲ್ಲಿ ಸಿಗುತ್ತಾ ಪಾಸ್​ಪೋರ್ಟ್?
ಪಾಸ್​ಪೋರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2023 | 12:19 PM

Share

ಬೆಂಗಳೂರು: ಶೀಘ್ರದಲ್ಲೇ ಜಾರಿಯಾಗಲಿರುವ ಎರಡನೇ ಆವೃತ್ತಿಯ ಪಾಸ್​ಪೋರ್ಟ್ ಸೇವಾ ಯೋಜನೆಯಿಂದ (PSP v2.0- Passport Seva Programme) ಪಾಸ್​ಪೋರ್ಟ್ ವಿತರಣಾ ಸೇವೆಯಲ್ಲಿ ಬಹಳ ದೊಡ್ಡ ಪರಿವರ್ತನೆಗಳಾಗುವ ಸಾಧ್ಯತೆ ಇದೆ. ಪಾಸ್​ಪೋರ್ಟ್ ಸೇವಾ ಯೋಜನೆಯ ಭಾಗವಾಗಿ ಚಿಪ್ ಜೋಡಿತ ಇ–ಪಾಸ್​ಪೋರ್ಟ್ ಬರಲಿದ್ದು, ಪಾಸ್​ಪೋರ್ಟ್ ವಿತರಣೆಯ ಸಮಯ ಅರ್ಧದಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಹೊಸ ಪಾಸ್​ಪೋರ್ಟ್ ಸೇವಾ ಯೋಜನೆಯ ಪ್ರಯೋಗ ಮೊದಲು ಬೆಂಗಳೂರಿನಲ್ಲೇ ಆಗುತ್ತಿರುವುದು ವಿಶೇಷ.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆ ತಾಂತ್ರಿಕವಾಗಿ ಅಭಿವೃದ್ಧಿಪಡಿಸಿರುವ ಹೊಸ ಪಾಸ್​ಪೋರ್ಟ್ ಸೇವಾ ಯೋಜನೆ ಬೆಂಗಳೂರಿನ ಎರಡು ಪಾಸ್​ಪೋರ್ಟ್ ಸೇವಾ ಕೇಂದ್ರಗಳಲ್ಲಿ ಅಳವಡಿಕೆ ಆಗಲಿದೆ. ಈ ಎರಡು ಸೆಂಟರ್​ಗಳಲ್ಲಿ ಸಾಫ್ಟ್​ವೇರ್ ಅಪ್​ಗ್ರೇಡ್ ಇತ್ಯಾದಿ ಸೌಕರ್ಯ ವ್ಯವಸ್ಥೆ ಬದಲಿಸಲಾಗುತ್ತಿದೆ. ಇದು ಈ ವರ್ಷದೊಳಗೆ ಮುಗಿಯುವ ನಿರೀಕ್ಷೆ ಇದೆ. ಒಂದು ಅಂದಾಜು ಪ್ರಕಾರ ಈ ನವೆಂಬರ್ ಅಥವಾ ಡಿಸೆಂಬರ್​ವೊಳಗೆ ಹೊಸ ಆವೃತ್ತಿಯ ಸಾಫ್ಟ್​ವೇರ್ ಅಳವಡಿಕೆ ಆಗಲಿದೆ.

ಇದನ್ನೂ ಓದಿ: Cess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?

15 ವರ್ಷಗಳ ಮುನ್ನ ಪಾಸ್​ಪೋರ್ಟ್ ಮಾಡಿಸಲು ತಿಂಗಳುಗಳೇ ಆಗುತ್ತಿದ್ದವು. ನಂತರ ಕ್ರಮೇಣವಾಗಿ ಪಾಸ್​ಪೋರ್ಟ್ ನೀಡುವ ವ್ಯವಸ್ಥೆಯನ್ನು ಸರಳಗೊಳಿಸುತ್ತಾ ಬರಲಾಗಿದೆ. ಸದ್ಯ ನಾಲ್ಕೈದು ಕೆಲಸದ ದಿನಗಳಲ್ಲಿ ಪಾಸ್​ಪೋರ್ಟ್ ಸಿಗುತ್ತದೆ. ಈಗ ಹೊಸ ಪಾಸ್​ಪೋರ್ಟ್ ಸೇವಾ ಯೋಜನೆ ಅಳವಡಿಕೆ ಆದರೆ ಎರಡು ಅಥವಾ ಮೂರು ದಿನದೊಳಗೆ ಪಾಸ್​ಪೋರ್ಟ್ ಸಿಗಬಹುದು.

2010ರಲ್ಲೂ ಬೆಂಗಳೂರೇ, 2023ರಲ್ಲೂ ಬೆಂಗಳೂರೇ…

ಕುತೂಹಲವೆಂದರೆ ಪಾಸ್​ಪೋರ್ಟ್ ಸೇವಾ ಪ್ರೋಗ್ರಾಮ್ 2012ರಲ್ಲಿ ಜಾರಿಗೆ ಬಂದಿತ್ತು. ಆದರೆ, ಅದಕ್ಕೆ ಮುನ್ನ 2010ರ ಮೇ ತಿಂಗಳಲ್ಲಿ ಬೆಂಗಳೂರು ಮತ್ತು ಚಂಡೀಗಡದಲ್ಲಿ ಇದರ ಪ್ರಾಯೋಗಿಕ ಯೋಜನೆ ನಡೆಸಲಾಗಿತ್ತು. ಅಲ್ಲಿ ಯಶಸ್ವಿಯಾದ ಬಳಿಕ 2012ರಲ್ಲಿ ದೇಶಾದ್ಯಂತ ಚಾಲನೆಗೊಳಿಸಲಾಯಿತು.

ಇದನ್ನೂ ಓದಿ: Strict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಈಗ ಎರಡನೇ ಆವೃತ್ತಿಯ ಪಾಸ್​ಪೋರ್ಟ್ ಸೇವಾ ಯೋಜನೆಯ ಪೈಲಟ್ ಪ್ರಾಜೆಕ್ಟ್ ಬೆಂಗಳೂರಿನಲ್ಲಿ ಮೊದಲು ನಡೆಯಲಿದೆ. ಬೆಂಗಳೂರಿನಲ್ಲಿ ಎರಡು ಪಾಸ್​ಪೋರ್ಟ್ ಸೇವಾ ಕೇಂದ್ರಗಳಿವೆ. ಲಾಲ್​ಬಾಗ್ ರಸ್ತೆಯಲ್ಲಿ ಒಂದು, ಮಾರತಹಳ್ಳಿಯಲ್ಲಿ ಇನ್ನೊಂದು ಇದೆ. ಲಾಲ್​ಬಾಗ್ ರಸ್ತೆಯಲ್ಲಿರುವ ಪಾಸ್​ಪೋರ್ಟ್ ಸೆಂಟರ್​ನಲ್ಲಿ 1,700 ಅರ್ಜಿಗಳು ಬರುತ್ತವೆ. ಮಾರತ್ತಹಳ್ಳಿಯಲ್ಲಿರುವ ಪಾಸ್​ಪೋರ್ಟ್ ಸೇವಾ ಕೇಂದ್ರದಲ್ಲಿ 900 ಅರ್ಜಿಗಳು ಬರುತ್ತವೆ.

ಬೆಂಗಳೂರನಲ್ಲಿ ಪ್ರಯೋಗ ಯಶಸ್ವಿಯಾದ ಬಳಿಕ ಹೊಸ ಪಾಸ್​ಪೋರ್ಟ್ ಸೇವಾ ಯೋಜನೆಯನ್ನು ದೇಶಾದ್ಯಂತ ಎಲ್ಲಾ ಪಾಸ್​ಪೋರ್ಟ್ ಸೇವಾ ಕೇಂದ್ರಗಳಲ್ಲೂ ವಿಸ್ತರಿಸಲಾಗುತ್ತದೆ. 2014ರಲ್ಲಿ ಭಾರತದಲ್ಲಿ 77 ಪಾಸ್​ಪೋರ್ಟ್ ಸೇವಾ ಕೇಂದ್ರಗಳಿದ್ದವು. ಈಗ 9 ವರ್ಷದಲ್ಲಿ ಏಳು ಪಟ್ಟು ಹೆಚ್ಚಾಗಿದ್ದು, 523 ಸರ್ವಿಸ್ ಸೆಂಟರ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ