Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್​ಪೋರ್ಟ್​ನಲ್ಲಿ ಆನ್​ಲೈನ್​ ಶಾಪಿಂಗ್​ನಲ್ಲಿ ಕಳೆದು ಹೋಗಿ ವಿಮಾನ ತಪ್ಪಿಸಿಕೊಂಡ ಯುವತಿ

ಬೇಗ ತಾವಂದುಕೊಂಡ ಸ್ಥಳವನ್ನು ತಲುಪಬಹುದು ಎನ್ನುವ ಕಾರಣದಿಂದ ಎಲ್ಲರೂ ಹಣ ಹೆಚ್ಚಾದರೂ ತೊಂದರೆಯಿಲ್ಲ ಎಂದು ವಿಮಾನವನ್ನು ಆಯ್ಕೆ ಮಾಡುತ್ತಾರೆ. ನೀವು ರೈಲು ಅಥವಾ ಬಸ್​ನಲ್ಲಿ ಪ್ರಯಾಣಿಸಬೇಕಿದ್ದರೆ ಒಂದೊಮ್ಮೆ ನೀವು ತಡವಾಗಿ ಆಗಮಿಸಿದರೂ ಬಸ್​, ರೈಲು ಚಲಿಸುತ್ತಿರುವಾಗಲೂ ಓಡಿ ಹೋಗಿ ಹತ್ತಬಹುದು.

ಏರ್​ಪೋರ್ಟ್​ನಲ್ಲಿ ಆನ್​ಲೈನ್​ ಶಾಪಿಂಗ್​ನಲ್ಲಿ ಕಳೆದು ಹೋಗಿ ವಿಮಾನ ತಪ್ಪಿಸಿಕೊಂಡ ಯುವತಿ
ಚೀನಾ ಮಹಿಳೆ
Follow us
ನಯನಾ ರಾಜೀವ್
|

Updated on:Nov 19, 2023 | 10:54 AM

ಬೇಗ ತಾವಂದುಕೊಂಡ ಸ್ಥಳವನ್ನು ತಲುಪಬಹುದು ಎನ್ನುವ ಕಾರಣದಿಂದ ಎಲ್ಲರೂ ಹಣ ಹೆಚ್ಚಾದರೂ ತೊಂದರೆಯಿಲ್ಲ ಎಂದು ವಿಮಾನವನ್ನು ಆಯ್ಕೆ ಮಾಡುತ್ತಾರೆ. ನೀವು ರೈಲು ಅಥವಾ ಬಸ್​ನಲ್ಲಿ ಪ್ರಯಾಣಿಸಬೇಕಿದ್ದರೆ ಒಂದೊಮ್ಮೆ ನೀವು ತಡವಾಗಿ ಆಗಮಿಸಿದರೂ ಬಸ್​, ರೈಲು ಚಲಿಸುತ್ತಿರುವಾಗಲೂ ಓಡಿ ಹೋಗಿ ಹತ್ತಬಹುದು.

ಆದರೆ ವಿಮಾನದಲ್ಲಿ ಪ್ರಯಾಣಿಸಬೇಕಿದ್ದರೆ ಗಂಟೆಗಟ್ಟಲೆ ಮೊದಲೇ ವಿಮಾನ ನಿಲ್ದಾಣವನ್ನು ತಲುಪಬೇಕು. ತಪಾಸಣೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಆದರೆ ವಿಮಾನವನ್ನು ತಪ್ಪಿಸಿಕೊಂಡರೆ ಓಡಿ ಹೋಗಿ ಹಿಡಿಯಲು ಸಾಧ್ಯವಿಲ್ಲವಲ್ಲವೇ.

ಯುವತಿಯೊಬ್ಬರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಇವರು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಎಲ್ಲಾ ಪ್ರಕ್ರಿಯೆಗಳು ಮುಗಿದಿತ್ತು ಆದರೂ ವಿಮಾನವನ್ನು ತಪ್ಪಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ನೀರಿನೊಳಗೆ ಜಾದು ಪ್ರದರ್ಶನ, ವಿಶ್ವ ದಾಖಲೆ ಬರೆದ 13 ವರ್ಷದ ಪೋರಿ

ಆಕೆ ಬೋರ್ಡಿಂಗ್​ ಗೇಟ್​ನಲ್ಲಿ ಕುಳಿತಿದ್ದಳು, ಹೇಗೂ ವಿಮಾನ ಹೊರಡುವುದು ತಡವಿದೆ ಎಂದು ಆನ್​ಲೈನ್ ಶಾಪಿಂಗ್ ಮಾಡೋಣವೆಂದು ಶಾಪಿಂಗ್ ಆ್ಯಪ್​ನಲ್ಲಿ ಕಳೆದುಹೋಗಿದ್ದಳು. ವಿಮಾನ ಬಂದ ಪರಿವೇ ಆಕೆಗಿರಲಿಲ್ಲ.

ಶಾಂಘೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ಬಹಳ ಸಮಯದ ನಂತರ ಪ್ರಯಾಣಿಕರು ಆಕೆಯನ್ನು ಮಾತನಾಡಿಸಿದ್ದಾರೆ, ಆಕೆ ಎಷ್ಟು ಸಮಯ ಆನ್​ಲೈನ್​ ಶಾಪಿಂಗ್​ನಲ್ಲಿ ಕಳೆದಿದ್ದಾಳೆ ಎಂಬುದೂ ಕೂಡ ಅರ್ಥವಾಗಲಿಲ್ಲ. ಶಾಪಿಂಗ್​ ಮಾಡುವ ಉತ್ಸಾಹದಲ್ಲಿ ವಿಮಾನವನ್ನು ತಪ್ಪಿಸಿಕೊಡಿರುವ ವಿಚಾರ ತಿಳಿದು, ವಿಮಾನ ನಿಲ್ದಾಣದಲ್ಲಿ ಬಿದ್ದು ಹೊರಳಾಡಿ ಅತ್ತಿರುವ ವಿಡಿಯೋ ವೈರಲ್ ಆಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:53 am, Sun, 19 November 23