Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿನೊಳಗೆ ಜಾದು ಪ್ರದರ್ಶನ, ವಿಶ್ವ ದಾಖಲೆ ಬರೆದ 13 ವರ್ಷದ ಪೋರಿ

ಜಾದು ಎನ್ನುವುದು ಎಲ್ಲರ ಕಣ್ಸೆಳೆಯುವ ಒಂದು ಅದ್ಭುತ ಕಲೆ.  ತನ್ನ ಈ ಜಾದು ಕಲೆಯ ಮೂಲಕ ಜಾದೂಗಾರನೂ  ಕ್ಷಣದಲ್ಲಿ ವಸ್ತುಗಳನ್ನು ಕಣ್ಮರೆ ಮಾಡಿ, ಮರು ಕ್ಷಣವೇ ಆ ವಸ್ತುಗಳನ್ನು ಮರಳಿ ತರುತ್ತಾನೆ. ಹೀಗೆ ಹಲವಾರು ರೀತಿಯ ಭಿನ್ನ ವಿಭಿನ್ನ ಜಾದು ತಂತ್ರಗಳ ಪ್ರದರ್ಶನಗಳನ್ನು ನಾವು ನೋಡಿರುತ್ತೇವೆ.  ಆದರೆ ನೀವು ಎಂದಾದರೂ ನೀರೊಳಗಿನ ಮ್ಯಾಜಿಕ್ ಶೋ ನೋಡಿದ್ದೀರಾ…. ಇಲ್ಲೊಬ್ಬಳು 13 ವರ್ಷದ ಪುಟ್ಟ ಬಾಲಕಿ ನೀರೊಳಗೆ ಜಾದು ಪ್ರದರ್ಶನವನ್ನು ಮಾಡುವ ಮೂಲಕ ವಿಶ್ವ ದಾಖಲೆಯನ್ನೇ ಮಾಡಿದ್ದಾಳೆ. 

ನೀರಿನೊಳಗೆ ಜಾದು ಪ್ರದರ್ಶನ, ವಿಶ್ವ ದಾಖಲೆ ಬರೆದ 13 ವರ್ಷದ ಪೋರಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 18, 2023 | 3:21 PM

ವಿಶ್ವ ದಾಖಲೆಗಳನ್ನು ರಚಿಸಲು ಜನರು ವಿವಿಧ ರೀತಿಯ ಸಾಹಸಗಳನ್ನು ಮಾಡುತ್ತಾರೆ. ಕೆಲವರು ತಮ್ಮ ಕೂದಲುಗಳನ್ನು ಅತೀ ಉದ್ದವಾಗಿ ಬೆಳೆಸಿಕೊಂಡರೆ, ಕೆಲವರು ಶಸ್ತ್ರ ಚಿಕಿತ್ಸೆಯ ಮೂಲಕ ದೇಹವನ್ನು ವಿಚಿತ್ರ ರೂಪಕ್ಕೆ ಪರಿವರ್ತಿಸುತ್ತಾರೆ. ಇನ್ನೂ ಕೆಲವರು ಬೃಹದಾಕಾರದ ಕೇಕ್,  ಪಿಜ್ಜಾ ಇತ್ಯಾದಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಇಂತಹ ಚಿತ್ರವಿಚಿತ್ರ ವಿಶ್ವ ದಾಖಲೆಗಳ ಸುದ್ದಿಗಳನ್ನು ನಾವು ಆಗಾಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು  13 ವರ್ಷ ವಯಸ್ಸಿನ ಪುಟ್ಟ ಪೋರಿ ನೀರಿನೊಳಗೆ ಸ್ಕೂಬಾ ಡೈವಿಂಗ್ ಮಾಡುತ್ತಲೇ, ಜಾದು ಪ್ರದರ್ಶನವನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾಳೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಾಲಕಿಯ ಮ್ಯಾಜಿಕ್ ಶೋ ವಿಡಿಯೋವನ್ನು ಹಂಚಿಕೊಂಡಿದ್ದು, ಆಕೆ ನೀರಿನೊಳಗೆ 3 ನಿಮಿಷಗಳಲ್ಲಿ ಸುಮಾರು 38 ಬಗೆಯ ಜಾದು ತಂತ್ರಗಳನ್ನು ಪ್ರದರ್ಶಿಸುವ ಮೂಲಕ 2020 ರಲ್ಲಿ ಬ್ರಿಟನ್ನ ಜಾದೂಗಾರ ಮಾರ್ಟಿನ್ ರೀಸ್ ನಿರ್ಮಿಸಿದ ದಾಖಲೆಯನ್ನು ಮುರಿದಿದ್ದಾಳೆ.

ವೈರಲ್ ವೀಡಿಯೋದಲ್ಲಿ ಪುಟ್ಟ ಬಾಲಕಿ ಸ್ಕೂಬಾ ಡೈವಿಂಗ್ ಸೂಟ್, ಗೇರ್ಗಳನ್ನು ಧರಿಸಿ ನೀರಿನೊಳಗೆ ಹಲವು ಬಗೆಯ ಜಾದು ಕೌಶಲ್ಯಗಳನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಚಿಕ್ಕ ವಯಸ್ಸಿನಲ್ಲಿಯೇ ಈಕೆಯ ಈ ಕಲೆ ಮತ್ತು ಸಾಹಸವನ್ನು ಕಂಡು ಹಲವರು ಬೆರಗಾಗಿದ್ದಾರೆ.

ಇಲ್ಲಿದೆ ವೈರಲ್​​ ವಿಡಿಯೋ

ಅಷ್ಟಕ್ಕೂ ಈ ಪುಟ್ಟ ಬಾಲಕಿ ಯಾರು?

13 ವರ್ಷ ವಯಸ್ಸಿನ ಈ ಪುಟ್ಟ ಬಾಲಕಿಯ ಹೆಸರು ಆವೆರಿ ಎಮರ್ಸನ್ ಫಿಶರ್. ಅಮೇರಿಕಾ ಮೂಲದವಳಾದ  ಈಕೆ 10 ವರ್ಷ ವಯಸ್ಸಿನವಳಾಗಿದ್ದಾಗ ಅಂದರೆ  ಕೊರೋನಾ ಲಾಕ್ಡೌನ್ ಸಮಯದಲ್ಲಿ,  ಜಾದೂ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದಳು. ಅಲ್ಲದೆ ಆಕೆ ಸ್ಕೂಬಾ ಡೈವಿಂಗ್ನಲ್ಲಿಯೂ ಬಹಳ ಆಸಕ್ತಿ ಹೊಂದಿದ್ದಳು.  ಸ್ಕೂಬಾ ಡೈವಿಂಗ್ ಸಾಹಸದಲ್ಲಿ ಹಲವು ದಾಖಲೆಗಳನ್ನು ಕೂಡಾ ಈಕೆ ಮಾಡಿದ್ದಾಳೆ.  ತನ್ನ ಈ ಎರಡೂ ಕಲೆಯನ್ನು ಒಟ್ಟಿಗೆ ಪ್ರದರ್ಶನ ಮಾಡಬೇಕೆಂದು ಇದೀಗ ನೀರಿನೊಳಗೆ ಸ್ಕೂಬಾ ಡೈವಿಂಗ್ ಮಾಡುತ್ತಲೇ, ಮೂರು ನಿಮಿಷಗಳಲ್ಲಿ 38 ಜಾದೂ ತಂತ್ರಗಳನ್ನು ಪ್ರದರ್ಶನ ಮಾಡಿ, ಇದೀಗ ವಿಶ್ವ ದಾಖಲೆಯನ್ನು ಬರೆದಿದ್ದಾಳೆ.

ಇದನ್ನೂ ಓದಿ: ಕೃಷ್ಣ ಭಕ್ತರೊಂದಿಗೆ ಕುಣಿದ ಸ್ಪೈಡರ್ ಮ್ಯಾನ್ 

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪುಟ್ಟ ಬಾಲಕಿಯ ವಿಡಿಯೋ 310 ಸಾವಿರ ವೀಕ್ಷಣೆಗಳನ್ನು  7.6 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈಕೆಯ ಕಲೆ ಮತ್ತು ಸಾಹಸವನ್ನು ಕಂಡು ಹಲವರು ನಿಬ್ಬೆರಗಾಗಿದ್ದಾರೆ.  ಇನ್ನೂ ಅನೇಕರು ಚಿಕ್ಕ ವಯಸ್ಸಿನಲ್ಲಿಯೇ ಈಕೆಯ ಈ ಸಾಧನೆಗೆ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:19 pm, Sat, 18 November 23

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ