Viral Video: ನೀ ಸನಿಹಕೆ ಬಂದರೆ; ಆಕ್ಟೋಪಸ್ ಈಕೆಯನ್ನು ಸ್ವೀಕರಿಸಿದ ರೀತಿ ನೋಡಿ
Sea: ಸಮುದ್ರದಾಳದ ಜೀವಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಅತ್ಯಂತ ಕಷ್ಟ. ಎಷ್ಟೋ ಸಲ ಮನುಷ್ಯನನ್ನು ನೋಡಿ ಅವು ಗಾಬರಿಯಿಂದ ದೂರ ಓಡುತ್ತವೆ. ಇಲ್ಲವೇ ದಾಳಿ ಮಾಡಲು ನೋಡುತ್ತವೆ. ಆದರೆ ಇಲ್ಲಿರುವ ಆಕ್ಟೋಪಸ್ ಬ್ಲಾಗರ್ ಒಬ್ಬರಿಗೆ ಹೇಗೆ ಸಹಕರಿಸಿದೆ ನೋಡಿ. ಅತ್ಯಂತ ಶಾಂತವಾಗಿ ಅವಳ ಬಳಿ ಓಡಾಡಿ, ತನ್ನನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಟ್ಟಿದೆ!
Octopus : ಸಮುದ್ರಜೀವಿಗಳ ಬಗ್ಗೆ ಯಾರಿಗೆ ಕುತೂಹಲವಿಲ್ಲ? ಸಮುದ್ರದಾಳಕ್ಕಿಳಿದು ಆ ಜೀವಿಗಳನ್ನು ಸೆರೆಹಿಡಿಯುವುದರಲ್ಲಿ ಅನೇಕರಿಗೆ ಆಸಕ್ತಿ ಇರುತ್ತದೆ. ಅವುಗಳನ್ನು ಹತ್ತಿರದಿಂದ ನೋಡುವ, ಸ್ಪರ್ಶಿಸುವ ಆಸೆ ಇದ್ದೇ ಇರುತ್ತದೆ. ಆದರೆ ಆ ಜೀವಿಗಳು ತಾವಾಗಿಯೇ ಅವರ ಬಳಿ ಬಂದರೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಮಹಿಳೆಯೊಬ್ಬಳು ಸಮುದ್ರದಾಳಕ್ಕಿಳಿದಿದ್ದಾಳೆ. ಅಲ್ಲೊಂದು ಆಕ್ಟೋಪಸ್ ಈಜಾಡುತ್ತ ಶಾಂತವಾಗಿ (Calm) ಆಕೆಯ ಬಳಿ ಸಾಗಿದೆ. ಈ ಅಪರೂಪದ ದೃಶ್ಯವನ್ನು ನೋಡಿದ ನೆಟ್ಟಿಗರು ಬೆರಗಾಗಿದ್ದಾರೆ.
ಇದನ್ನೂ ಓದಿ : Viral Brain Teaser: ಕಿರೀಟ ಇಲ್ಲೇ ಎಲ್ಲೋ ಕಳೆದುಹೋಗಿದೆ, ಹುಡುಕುವಿರಾ?
Instagram ನ zanzibar_mermaid ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. “ಆಕ್ಟೋಪಸ್‌ಗಳು 3 ಹೃದಯಗಳನ್ನು, 9 ಮೆದುಳುಗಳನ್ನು ಮತ್ತು ನೀಲಿ ರಕ್ತವನ್ನು ಹೊಂದಿರುತ್ತವೆ ಎಂಬ ವಿಷಯ ನಿಮಗೆ ತಿಳಿದಿದೆಯೇ?” ಎಂದು ಆಕೆ ಒಕ್ಕಣೆಯನ್ನು ಈ ವಿಡಿಯೋಗೆ ಬರೆದಿದ್ದಾಳೆ.
ಆಕ್ಟೋಪಸ್ ಅನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವ ಮಹಿಳೆ
View this post on Instagram
ಈ ವಿಡಿಯೋವನ್ನು ಈತನಕ ಸುಮಾರು 2.7 ಲಕ್ಷ ಜನರು ನೋಡಿದ್ದಾರೆ. 15,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಆಕ್ಟೋಪಸ್ ಯಾವಾಗಲೂ ನೀರಿನಲ್ಲಿ ಅಡಗಿರುವುದಿಲ್ಲ, ಅವು ಈಜಾಡಿಕೊಂಡಿರುತ್ತವೆ ಎಂದಿದ್ದಾರೆ ಒಬ್ಬರು. ನಾನು ಕೊರೊನಾ ಸಂದರ್ಭದಲ್ಲಿ ಮರಳಿನಿಂದ ಸ್ವಲ್ಪ ದೂರದಲ್ಲಿ ನೀರಿನಲ್ಲಿ ಶಾಂತವಾಗಿ ತೇಲಾಡಿಕೊಂಡಿರುವುದನ್ನು ನೋಡಿದ್ದೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Brain Teaser: ಅರ್ಧ ತೆಂಗಿನಕಾಯಿ, ಒಂದು ಸೇಬು ಮತ್ತು ಒಂದು ಬಾಳೆಯ ಮೌಲ್ಯ ಎಷ್ಟು?
ಇದು ಬುದ್ಧಿವಂತ ಜೀವಿ ಎಂದಿದ್ದಾರೆ ಮತ್ತೊಬ್ಬರು. ಇದು ಅತ್ಯದ್ಭುತವಾಗಿದೆ ಎಂದಿದ್ದಾರೆ ಮಗದೊಬ್ಬರು. ನಿಜಕ್ಕೂ ಇದು ತುಂಬಾ ಸುಂದರವಾದ ದೃಶ್ಯ ಮತ್ತು ಅನುಭವ ಎಂದಿದ್ದಾರೆ ಇನ್ನೂ ಒಬ್ಬರು. ಇದು ನಿಮ್ಮನ್ನು ಸ್ವೀಕರಿಸಿದ ರೀತಿ ಅನನ್ಯ ಎಂದಿದ್ದಾರೆ ಹಲವಾರು ಜನರು. ಈ ಜೀವಿ ಅತ್ಯಂತ ಸುಂದರವಾಗಿದೆ, ಅದರ ಬಳಕು ನನಗಿಷ್ಟ ಎಂದಿದ್ದಾರೆ ಒಂದಿಷ್ಟು ಜನ. ಇದರ ಶಾಂತತೆಯಿಂದಾಗಿ ಮತ್ತೆ ಮತ್ತೆ ಈ ವಿಡಿಯೋ ನೋಡಬೇಕೆನ್ನಿಸುತ್ತಿದೆ ಎಂದಿದ್ದಾರೆ ಮತ್ತೊಂದಿಷ್ಟು ಜನ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:44 pm, Sat, 18 November 23