Viral Brain Teaser: ಕಿರೀಟ ಇಲ್ಲೇ ಎಲ್ಲೋ ಕಳೆದುಹೋಗಿದೆ, ಹುಡುಕುವಿರಾ?
Crown: ಕೆಲವರು, ಈ ಚಿತ್ರವು ನನ್ನ ಮೆದುಳಿಗೆ ಕಣ್ಣಿಗೆ ಕಷ್ಟವೆನ್ನಿಸುತ್ತಿದೆ, ಕಿರೀಟವನ್ನು ಹುಡುಕಲು ನನಗೆ ಸಾಧ್ಯವೇ ಆಗುತ್ತಿಲ್ಲ ಎನ್ನುತ್ತಿದ್ದಾರೆ. ನನಗೆ ಕಿರೀಟವು ಸಿಕ್ಕಿತು, ಇಲ್ಲಿರುವ ಎಲ್ಲಾ ವಸ್ತುಗಳನ್ನು ಹುಡುಕಿ ಪಟ್ಟಿಯನ್ನೂ ಮಾಡಿದೆ ಎನ್ನುತ್ತಿದ್ದಾರೆ ಇನ್ನೂ ಕೆಲವರು. ವೈರಲ್ ಆಗಿರುವ ಈ ಚಿತ್ರವನ್ನು ನೋಡಿದ ನೀವು ಏನು ಹೇಳುತ್ತೀರಿ ಎನ್ನುವ ಕುತೂಹಲ ನಮ್ಮದು.
Weekend : ಅಬ್ಬಾ! ವಾರಾಂತ್ಯ ಬಂದೇಬಿಟ್ಟಿತು. ನಿಧಾನವಾಗಿ ದಿನ ಆರಂಭವಾಗಿದೆ. ಇನ್ನೂ ಸ್ವಲ್ಪ ನಿದ್ರೆ ಕಣ್ಣಲ್ಲಿ ಹಾಗೇ ಇದೆ. ಪೂರ್ತಿ ಎಚ್ಚರಗೊಳ್ಳೋದಕ್ಕೆ ಈ ಬ್ರೇನ್ ಟೀಸರ್ ಸಹಾಯವಾಗಬಹುದಾ ನೋಡಿ. ನಿಮ್ಮ ಮೆದುಳನ್ನು ಚುರುಕುಗೊಳಿಸುವ ಉಪಾಯ ಇದರೊಳಗೆ ಅಡಗಿದೆ. ಈ ಚಿತ್ರದಲ್ಲಿ ಅನೇಕ ವಸ್ತುಗಳಿವೆ. ಕಿರೀಟವನ್ನು (Crown) ಒಳಗೊಂಡಂತೆ ಅಡಗಿರುವ ಇನ್ನುಳಿದ ವಸ್ತುಗಳನ್ನು ಹುಡುಕುವುದೇ ನೀವು ನಿಮ್ಮ ಮೆದುಳಿಗೆ ಕೊಡುವ ಕೆಲಸ. ರೆಡ್ಡಿಟ್ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಕಿರೀಟವನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ. ನೀವು?
ಇದನ್ನೂ ಓದಿ : Viral Brain Teaser: ಅರ್ಧ ತೆಂಗಿನಕಾಯಿ, ಒಂದು ಸೇಬು ಮತ್ತು ಒಂದು ಬಾಳೆಯ ಮೌಲ್ಯ ಎಷ್ಟು?
ಕಿರೀಟ ಹುಡುಕಲು ನಿಜಕ್ಕೂ ಬಹಳ ಕಷ್ಟಪಟ್ಟೆ. ನನ್ನ ಕಣ್ಣುಗಳು ಇಲ್ಲಿಯ ಈ ರೇಖೆಗಳ ವಿನ್ಯಾಸಕ್ಕೆ ಯಾಕೋ ಹೊಂದಿಕೊಳ್ಳಲಿಲ್ಲ. ನಾನಂತೂ ಸೋತೆ, ನೀವು ಪತ್ತೆ ಹಚ್ಚಿ ನನಗೆ ತಿಳಿಸಿ ಎಂದಿದ್ದಾರೆ ಒಬ್ಬರು. ಕಿರೀಟದೊಂದಿಗೆ ಮರೆಮಾಡಲಾಗಿರುವ ಇನ್ನೂ ಅನೇಕ ವಸ್ತುಗಳನ್ನು ಹುಡುಕುವುದೇ ಇಲ್ಲಿರುವ ಸವಾಲು.
ಈ ಚಿತ್ರದಲ್ಲಿ ಕಿರೀಟವನ್ನು ಪತ್ತೆ ಹಚ್ಚಿ
ಒಂದು ದಿನದ ಹಿಂದೆ ಪೋಸ್ಟ್ ಮಾಡಲಾದ ಈ ಚಿತ್ರವನ್ನು ಈತನಕ ಸುಮಾರು 100 ಜನರು ಲೈಕ್ ಮಾಡಿದ್ದಾರೆ. ಅನೇಕರು ಸವಾಲಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ನನಗೆ ಕಿರೀಟ ಸಿಕ್ಕಿತು ಆದರೆ ಯಾವುದು ಎಂದು ಸರಿಯಾಗಿ ಹೇಳಲಾಗುತ್ತಿಲ್ಲ. ಎರಡು ಮೂರು ಕಡೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ಇಲ್ಲಿರುವ ಸಾಮಾನುಗಳನ್ನೆಲ್ಲ ಬರೆಯಲು ನಾನು ನನ್ನ ಮಗಳಿಗೆ ಹೇಳಿದೆ ಎಂದಿದ್ದಾರೆ ಇನ್ನೊಬ್ಬರು. ನಾನು ಇಲ್ಲಿರುವ ಸಾಮಾನುಗಳನ್ನೆಲ್ಲ ಬರೆದಿಟ್ಟೆ. ಆದರೆ ಕಿರೀಟ ಸಿಗಲೇ ಇಲ್ಲ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಮಾತ್ರೆ, ಟಿಷ್ಯೂ,ನೀರು, ಚಾಕೋಲೇಟ್, ಹೇರ್ಬ್ಯಾಂಡ್! ಏನೇನಿಲ್ಲ ಈ ಕ್ಯಾಬ್ನಲ್ಲಿ
ನನಗೆ ಹತ್ತು ಕಿರೀಟಗಳು ಸಿಕ್ಕವು ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನನಗೆ ಇದು ಬಹಳ ಗೋಜಲು ಎನ್ನಿಸುತ್ತಿದೆ, ಈ ಚಿತ್ರ ನನ್ನ ಕಣ್ಣಿಗೆ ಮೆದುಳಿಗೆ ಕಷ್ಟ ಕೊಡುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ನನಗೆ ಪುಟ್ಟಪುಟ್ಟ ವಸ್ತುಗಳನ್ನು ಹುಡಕುವುದು ಆಸಕ್ತಿಕರ ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.
ನಿಮಗೆ ಕಿರೀಟ ಮತ್ತು ಇನ್ನಿತರೇ ವಸ್ತುಗಳ ಪಟ್ಟಿ ಮಾಡಲು ಸುಲಭವೆನ್ನಿಸಬಹುದೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:52 am, Sat, 18 November 23