ಜೀವವಿಲ್ಲದ ಹಾವು: ಇದರ ರಚನೆ ಮಸ್ತಾಗಿದೆ ನೋಡಿ, ನೀವು ಫುಲ್​​​ ಫಿದಾ ಆಗೋದು ಪಕ್ಕಾ

ನೀವು ಕಲಾಭಿಮಾನಿಗಳಾಗಿದ್ದರೆ ಈ ವಿಡಿಯೋ ನೋಡಲೇಬೇಕು. ಹಾವು ಯಾರಿಗೂ ಇಷ್ಟವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಕೂಡ ಹಾವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ನಿಜವಾದ ಹಾವಿನ ಬದಲು ಒಂದು ಚಿಕ್ಕ ಹಾವಿನ ರೀತಿ ಕಾಣುವ ರಬ್ಬರ್ ಪೀಸ್ ಕಂಡರೂ ಹಾವು ಎಂದು ತಿಳಿದು ಮಾರುದ್ದ ಹಾರುವ ಜನರಿರುವ ಕಾಲದಲ್ಲಿ ಇಲ್ಲೊಬ್ಬರ 3 ಜನರ ತಂಡ ಒಂದು ಹಾವಿನ ಆಕೃತಿಯನ್ನು ಮಾಡಿದ್ದಾರೆ. ಏನಿದು ವಿಡಿಯೋ ನೀವೇ ನೋಡಿ!.

ಜೀವವಿಲ್ಲದ ಹಾವು: ಇದರ ರಚನೆ ಮಸ್ತಾಗಿದೆ ನೋಡಿ, ನೀವು ಫುಲ್​​​ ಫಿದಾ ಆಗೋದು ಪಕ್ಕಾ
ವೈರಲ್​​ ವಿಡಿಯೋ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 17, 2023 | 3:01 PM

ಕಲೆ ಮತ್ತು ಪ್ರತಿಭೆ ಯಾರ ಸೊತ್ತು ಅಲ್ಲ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಸತ್ಯ ಎನಿಸುವಂತಹ ಅನೇಕ ದೃಶ್ಯಗಳನ್ನು ನೀವು ಕಣ್ಣಾರೆ ಕಂಡಿರಬಹುದು, ತೆರೆಮರೆಯಲ್ಲಿವಿದ್ದು ಗುರುತಿಸಿಕೊಳ್ಳದಿದ್ದರೂ, ತಮ್ಮ ಅಭಿರುಚಿಯನ್ನು ಬಿಡದೆಯೇ ಸಾಧನೆಯ ಮೆಟ್ಟಿಲು ಏರಲು ಪ್ರಯತ್ನಿಸುತ್ತಿರುವವರು ಲಕ್ಷಾಂತರ ಜನರಿದ್ದಾರೆ. ಇವರೆಲ್ಲರೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಉತ್ತಮ ಸಂದೇಶ ನೀಡುವವರಾಗಿದ್ದರೆ. ಅದರಲ್ಲಿಯೂ ಯಾರ ಬಳಿ ಯಾವ ರೀತಿಯ ವಿದ್ಯೆ ಅಥವಾ ಕಲೆ ಇದೆ ಎಂಬುದು ತಿಳಿದಿರುವುದಿಲ್ಲ.

ಇಷ್ಟೆಲ್ಲಾ ಪೀಠಿಕೆ ಕೇಳಿದ ಮೇಲೆ ಅದು ಯಾವ ರೀತಿಯ ಕಲೆಯ ಬಗ್ಗೆ ಮಾತನಾಡುತ್ತಿರಬಹುದು ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ನೀವು ಕೂಡ ಕಲಾಭಿಮಾನಿಗಳಾಗಿದ್ದರೆ ಈ ವಿಡಿಯೋ ನೋಡಲೇಬೇಕು. ಹಾವು ಯಾರಿಗೂ ಇಷ್ಟವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಕೂಡ ಹಾವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ನಿಜವಾದ ಹಾವಿನ ಬದಲು ಒಂದು ಚಿಕ್ಕ ಹಾವಿನ ರೀತಿ ಕಾಣುವ ರಬ್ಬರ್ ಪೀಸ್ ಕಂಡರೂ ಹಾವು ಎಂದು ತಿಳಿದು ಮಾರುದ್ದ ಹಾರುವ ಜನರಿರುವ ಕಾಲದಲ್ಲಿ ಇಲ್ಲೊಬ್ಬರ 3 ಜನರ ತಂಡ ಒಂದು ಹಾವಿನ ಆಕೃತಿಯನ್ನು ಮಾಡಿದ್ದಾರೆ. ಚಿತ್ರದಲ್ಲಿ ನೀವು ಹಾವನ್ನು ನೋಡಿರಬಹುದು ಅಥವಾ ಗೋಡೆಗಳ ಮೇಲೆ ಪೇಂಟಿಗ್ ಆಗಿ ನೋಡಿರಬಹುದು ಆದರೆ ತೋಟದಲ್ಲಿ ಥೇಟ್ ಹಾವು ಮಲಗಿದ ಹಾಗೆಯೇ ಆಕೃತಿ ಮಾಡುವುದನ್ನು ನೀವು ನೋಡಿದ್ದೀರಾ? ಹಾಗಾದರೆ ಈ ವಿಡಿಯೋ ತಪ್ಪದೇ ನೋಡಿ.

ಎರಡು ಯುವಕರು ಮತ್ತು ಒಬ್ಬಳು ಯುವತಿ ಸೇರಿಕೊಂಡು ಒಂದು ತೋಟದಲ್ಲಿ ಥೇಟ್ ಹಾವಿನ ಹಾಗೆಯೇ ಕಾಣುವ ಒಂದು ಕಲಾಕೃತಿ ಮಾಡಿದ್ದಾರೆ. ಇದರಲ್ಲಿ ಏನಿದೆ ವಿಶೇಷ ಅಂತೀರಾ. ಇದು ಸಣ್ಣ ಪುಟ್ಟ ಹಾವಲ್ಲ. ಹೆಬ್ಬಾವಿಗಿಂತಲೂ ದಪ್ಪ ಮತ್ತು ಉದ್ದವಾಗಿರುವ ಹಾವು. ಈ ಹಾವಿನ ಆಕೃತಿ ಮಾಡಲು ಮಣ್ಣು, ಒಣಗಿದ ಬಾಳೆ ಎಲೆ, ಹುಲ್ಲು ಎಲ್ಲವನ್ನೂ ಸೇರಿಸಿಕೊಂಡಿದ್ದಾರೆ. ಈ ವಿಡಿಯೋ ನಿಮಗೆ ಮೊದ ಮೊದಲು ತುಂಬಾ ಫನ್ನಿ ಆಗಿದೆ ಎಂದು ಅನಿಸಿದರೂ ಕೂಡ ಮುಂದೆ ಹಾವಿನ ಆಕೃತಿ ಶುರುವಾಗುತ್ತಿದ್ದಂತೆ ಈ ವಿಡಿಯೋಗಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ನಿಮಗೆ ಅರಿವಾಗುತ್ತದೆ. ನೋಡ ನೋಡುತ್ತಿದ್ದಂತೆ ಹಾವಿನ ಆಕೃತಿ ಸಿದ್ದವಾಗುತ್ತದೆ ಅದಕ್ಕೆ ಹಾವಿನ ರೀತಿಯಲ್ಲಿ ಬಣ್ಣ ಬಳಿದು ಅದೇ ರೀತಿಯಲ್ಲಿ ಶೇಪ್ ನೀಡಲಾಗುತ್ತದೆ. ದೂರದಲ್ಲಿ ನಿಂತು ನೋಡಿದಾಗ ಹಾವೊಂದು ಮಲಗಿದೆ ಎಂಬ ರೀತಿಯಲ್ಲಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿ: ನೋ ವಿಡಿಯೋ ಪ್ಲೀಸ್​, ಪರ್ಸನಲ್​ ಸ್ಪೇಸ್​ ಕೊಡಿ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ

ಈ ವಿಡಿಯೋ ವನ್ನು g_j_mowgli__ ಎಂಬ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 1.7 ಮಿಲಿಯನ್​​​ಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವು ಕಾಮೆಂಟ್ ಗಳು ಹರಿದು ಬರುತ್ತಿದೆ. ಈ ಕಲಾಕೃತಿಯನ್ನು ಸಾವಿರಾರು ಜನ ಮೆಚ್ಚಿಕೊಂಡಿದ್ದು ಅವರ ಸಾಹಸಕ್ಕೆ ಭೇಷ್ ಎಂದಿದ್ದಾರೆ. ಇನ್ನು ಕೆಲವರು, “ಬೆಳಿಗ್ಗೆ ಈ ಭಾಗದಲ್ಲಿ ಅಚಾನಕ್ಕಾಗಿ ವಾಕಿಂಗ್ ಅಥವಾ ಕೆಲಸಕ್ಕೆ ಬಂದವರು ಇದನ್ನು ನೋಡಿ ಬೆಚ್ಚಿ ಬೀಳದಿದ್ದರೆ ಸಾಕು!” ಎಂದಿದ್ದಾರೆ. ಮತ್ತೆ ಕೆಲವು ಮಂದಿ ಅವರ ಕಲೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಈ ರೀತಿಯ ವಿಡಿಯೋ ಹೆಚ್ಚು ಹೆಚ್ಚು ನಮ್ಮನ್ನು ತಲುಪುವಂತಾಗಲಿ ಎಂದಿದ್ದಾರೆ. ಏನೇ ಇರಲಿ ಇವರ ಪರಿಶ್ರಮಕ್ಕೆ ಮೆಚ್ಚುಗೆ ತಿಳಿಸಲೇಬೇಕು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ