ಈ ಹುಡುಗಿಯ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ? ಈ ವಿಡಿಯೋ ನೋಡಿ
ಬಿಡುವಿಲ್ಲದ ಜೀವನಶೈಲಿಯಲ್ಲಿ ತೂಕ ಹೆಚ್ಚಾಗುವುದು, ಕೊಬ್ಬು ಸಂಗ್ರಹ ಹೀಗೆ ಹಲವಾರು ರೀತಿಯ ಸಮಸ್ಯೆ ಇಂದಿನ ದಿನಚರಿಗಳಲ್ಲಿ ಸಾಮಾನ್ಯವಾಗಿದೆ. ಹಾಗಾದರೆ ಇದಕ್ಕೆ ಪರಿಹಾರ ಏನು? ಈ ಪ್ರಶ್ನೆ ಮೂಡುವುದು ಸಾಮಾನ್ಯ. ಆದರೆ ಹೂಪ್ ಬಗ್ಗೆ ತಿಳಿದಿಲ್ಲದವರು ತೂಕ ಇಳಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ. ಹುಲಾ ಹೂಪ್ ಮಾಡುವುದರಿಂದ ಯಾವ ರೀತಿಯ ಫಿಟ್ನೆಸ್ ಕಾಯ್ದು ಕೊಳ್ಳಬಹುದು ಎಂಬುದನ್ನು ಈ ವಿಡಿಯೋದಲ್ಲಿರುವ ಹುಡುಗಿಯನ್ನು ನೋಡಿ ತಿಳಿದುಕೊಳ್ಳಬಹುದು.
ನೀವು ಹೂಪ್ ಅಥವಾ ಹುಲಾ ಹೂಪ್ (Hula Hoop) ಬಗ್ಗೆ ಕೇಳಿರಬಹುದು. ವಿದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶಕ್ಕೂ ಲಗ್ಗೆಯಿಟ್ಟಿದ್ದು ಫಿಟ್ನೆಸ್ ಪ್ರೀಯರನ್ನು ಆಕರ್ಷಿಸಿದೆ ಎಂದರೆ ತಪ್ಪಾಗಲಾರದು. ಬಿಡುವಿಲ್ಲದ ಜೀವನಶೈಲಿಯಲ್ಲಿ ತೂಕ ಹೆಚ್ಚಾಗುವುದು, ಕೊಬ್ಬು ಸಂಗ್ರಹ ಹೀಗೆ ಹಲವಾರು ರೀತಿಯ ಸಮಸ್ಯೆ ಇಂದಿನ ದಿನಚರಿಗಳಲ್ಲಿ ಸಾಮಾನ್ಯವಾಗಿದೆ. ಹಾಗಾದರೆ ಇದಕ್ಕೆ ಪರಿಹಾರ ಏನು? ಈ ಪ್ರಶ್ನೆ ಮೂಡುವುದು ಸಾಮಾನ್ಯ. ಆದರೆ ಹೂಪ್ ಬಗ್ಗೆ ತಿಳಿದಿಲ್ಲದವರು ತೂಕ ಇಳಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ. ಹುಲಾ ಹೂಪ್ ಕ್ಯಾಲೊರಿಗಳನ್ನು ಸುಡುತ್ತದೆ. ಹೊಟ್ಟೆಯ ಸುತ್ತವಿರುವ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಇದು ಉತ್ತಮ ಮಾರ್ಗವಾಗಿದೆ. ಒತ್ತಡ ಸೇರಿದಂತೆ ಮಾನಸಿಕ ಸಮಸ್ಯೆ ಹೋಗಲಾಡಿಸಿ ಆರೋಗ್ಯ ಕಾಪಾಡುವ ಕೆಲಸವನ್ನು ಇದು ಮಾಡುತ್ತದೆ.
ಹಲವು ವರದಿಗಳ ಪ್ರಕಾರ ನೀವು ದಿನಕ್ಕೆ ಕೇವಲ 30 ನಿಮಿಷಗಳ ಕಾಲ ಹುಲಾ ಹೂಪ್ ವ್ಯಾಯಾಮವನ್ನು ಮಾಡುವುದರಿಂದ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಎಂದು ತಿಳಿದು ಬಂದಿದೆ. ನೀವು ಹಲವು ಕಡೆಗಳಲ್ಲಿ ಒಂದು ರೀತಿಯ ಗೋಳಾಕೃತಿಯ ರಿಂಗ್ ತೆಗೆದುಕೊಂಡು ದೇಹದ ಸುತ್ತ ತಿರುಗಿಸುವುದನ್ನು ನೋಡಿರಬಹುದು ಇದನ್ನೇ ಹೂಪ್ ಅಥವಾ ಹುಲಾ ಹೂಪ್ ಎಂದು ಕರೆಯಲಾಗುತ್ತದೆ. ಇದನ್ನು ಮಾಡುವುದು ನಾವು ತಿಳಿದುಕೊಂಡಷ್ಟು ಸುಲಭವಲ್ಲ. ಆದರೆ ಶತ ಪ್ರಯತ್ನ ಮಾಡುವುದರಿಂದ ನಿಮಗೆ ಫಲ ಲಭಿಸುತ್ತದೆ.
ವೈರಲ್ ವಿಡಿಯೋ ಇಲ್ಲಿದೆ:
ಇದನ್ನೂ ಓದಿ: ಕಡಲ ತೀರದಲ್ಲಿ ಪತ್ತೆಯಾದ ಮತ್ಸ್ಯಕನ್ಯೆ, ತಜ್ಞರು ಹೇಳಿದ್ದೇನು?
ಇದಕ್ಕೆ ಪೂರಕವೆಂಬ ಹಾಗೆ ಒಂದು ವಿಡಿಯೋ ವೈರೆಲ್ ಆಗಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಬಯಸುತ್ತಿರುವವರು, ಈ ವ್ಯಾಯಾಮದ ಮಾದರಿಯನ್ನು ಅನುಸರಿಸಬಹುದಾಗಿದೆ. ಈ ವಿಡಿಯೋದಲ್ಲಿ ಏನಿದೆ ವಿಶೇಷ ಅಂತೀರಾ? ಒಂದು ಹುಡುಗಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 100 ಹೂಪ್ ತೆಗೆದುಕೊಂಡು ಸ್ಪಿನ್ನಿಂಗ್ ಮಾಡಿದ್ದಾಳೆ. ಅದು ಕೂಡ ಯಾವುದೇ ರೀತಿಯ ಅಳುಕಿಲ್ಲದೆ ಅದನ್ನು ನಿಭಾಯಿಸಿದ್ದಾಳೆ. ಈ ವಿಡಿಯೋವನ್ನು @richabhatia6303 ಎಂಬ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು 4.7M ವೀಕ್ಷಣೆ ಗಿಟ್ಟಿಸಿಕೊಂಡಿದೆ. ಜೊತೆಗೆ ಅವಳ ಆ ಧೈರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, “ರಿಂಗ್ ಗಳನ್ನು ಅವಳು ತಿರುಗಿಸುತ್ತಿಲ್ಲ, ಬದಲಾಗಿ ರಿಂಗ್ ಗಳೇ ಅವಳನ್ನು ತಿರುಗಿಸುತ್ತಿವೆ” ಎಂದಿದ್ದಾರೆ. ಇನ್ನು ಕೆಲವರು “ನಾವು ಅವಳಿಗಿಂತಲೂ ದೊಡ್ಡವರು ಆದರೆ ಅದರಲ್ಲಿ ಒಂದು ರಿಂಗ್ ಅನ್ನು ಕೂಡ ನಮ್ಮಿಂದ ತಿರುಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಏನೇ ಇರಲಿ ಈ ಹುಡುಗಿಯ ಫಿಟ್ನೆಸ್ ಗೆ ಪಿಧಾ ಆಗುವುದಂತೂ ಸತ್ಯ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: