ಗಾಜಾದಲ್ಲಿ ಮೂವರು ಒತ್ತೆಯಾಳುಗಳನ್ನು ಆಕಸ್ಮಿಕವಾಗಿ ಹತ್ಯೆಗೈದ ಇಸ್ರೇಲ್ ಸೇನೆ, ನೇತನ್ಯಾಹು ಹೇಳಿದ್ದೇನು?

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಶುಕ್ರವಾರ (ಡಿಸೆಂಬರ್ 15) ಇಸ್ರೇಲ್ ಸೇನೆಯು ಆಕಸ್ಮಿಕವಾಗಿ ತನ್ನದೇ ದೇಶದ ಮೂವರು ಒತ್ತೆಯಾಳುಗಳನ್ನು ಹತ್ಯೆಗೈದಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಈ ಮಾಹಿತಿ ನೀಡಿದ್ದಾರೆ. ಇಸ್ರೇಲಿ ಸೈನಿಕರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ತಮಗೆ ಅಪಾಯ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಗಾಜಾದಲ್ಲಿ ಮೂವರು ಒತ್ತೆಯಾಳುಗಳನ್ನು ಆಕಸ್ಮಿಕವಾಗಿ ಹತ್ಯೆಗೈದ ಇಸ್ರೇಲ್ ಸೇನೆ, ನೇತನ್ಯಾಹು ಹೇಳಿದ್ದೇನು?
ಬೆಂಜಮಿನ್ ನೇತನ್ಯಾಹು
Image Credit source: Hindustan Times

Updated on: Dec 16, 2023 | 8:08 AM

ಇಸ್ರೇಲ್(Israel) ಮತ್ತು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಶುಕ್ರವಾರ (ಡಿಸೆಂಬರ್ 15) ಇಸ್ರೇಲ್ ಸೇನೆಯು ಆಕಸ್ಮಿಕವಾಗಿ ತನ್ನದೇ ದೇಶದ ಮೂವರು ಒತ್ತೆಯಾಳುಗಳನ್ನು ಹತ್ಯೆಗೈದಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಈ ಮಾಹಿತಿ ನೀಡಿದ್ದಾರೆ. ಇಸ್ರೇಲಿ ಸೈನಿಕರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ತಮಗೆ ಅಪಾಯ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದು ನಮಗೆಲ್ಲರಿಗೂ ದುಃಖಕರ ಮತ್ತು ನೋವಿನ ಘಟನೆಯಾಗಿದೆ ಮತ್ತು ಈ ಘಟನೆಗೆ ಎಲ್ಲದಕ್ಕೂ IDF ಕಾರಣವಾಗಿದೆ ಎಂದು ಹಗರಿ ಹೇಳಿದ್ದಾರೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಮಾರಣಾಂತಿಕ ದಾಳಿಯನ್ನು ನಡೆಸಿತು, ಇದರಲ್ಲಿ ಅನೇಕ ಜನರು ಸಾವನ್ನಪ್ಪಿದರು ಮತ್ತು ಇನ್ನೂರಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು.

ಮತರನ್ನು ಸಮರ್ ತಲಲ್ಕಾ, 22, ಯೋಟಮ್ ಹೈಮ್, 28, ಮತ್ತು ಅಲೋನ್ ಶಮ್ರಿಜ್, 26 ಎಂದು ಗುರುತಿಸಲಾಗಿದೆ. ದೊಡ್ಡ ಪ್ರಮಾದ ನಡೆದುಹೋಗಿದೆ, ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮನೆಗೆ ಹಿಂದಿರುಗಿಸುವ ಅತ್ಯುನ್ನತ ಪ್ರಯತ್ನದೊಂದಿಗೆ ಮುಂದುವರಿಯುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪ್ರತಿಜ್ಞೆ ಮಾಡಿದರು.

ಮತ್ತಷ್ಟು ಓದಿ: ಗಾಜಾ ಪಟ್ಟಿಯಲ್ಲಿ ಹಮಾಸ್​ 16 ವರ್ಷಗಳ ಆಳ್ವಿಕೆ ಅಂತ್ಯ, ಗಾಜಾ ನಮ್ಮ ವಶ: ಇಸ್ರೇಲ್​​ ರಕ್ಷಣಾ ಸಚಿವ

ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿತು. ಅಂದಿನಿಂದ, ಒಂದು ವಾರದ ಕದನ ವಿರಾಮ ಹೊರತುಪಡಿಸಿ ಯುದ್ಧ ಮುಂದುವರೆದಿದೆ.

ಅಕ್ಟೋಬರ್ 7 ರಿಂದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 18,787 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಇಸ್ರೇಲ್​ನಲ್ಲಿ ಸಾವಿನ ಸಂಖ್ಯೆ ಸುಮಾರು 1,200 ಆಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ