ಸದನದಲ್ಲಿ ಇಸ್ರೇಲ್ಗೆ ಶಾಪ ಹಾಕುತ್ತಿದ್ದ ಸಮಯದಲ್ಲೇ ಹೃದಯಘಾತದಿಂದ ಟರ್ಕಿ ಸಂಸದ ಸಾವು
ಇಸ್ರೇಲ್ಗೆ ಶಾಪ ಹಾಕುತ್ತಿದ್ದ ಸಮಯದಲ್ಲೇ ಟರ್ಕಿಯ ಸಂಸದರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಂಸದ ಹಸನ್ ಬಿಟ್ಮೆಜ್ ಸದನದಲ್ಲಿ ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂದು ಊಹಿಸುವುದು ತುಂಬಾ ಕಷ್ಟ.
ಇಸ್ರೇಲ್ಗೆ ಶಾಪ ಹಾಕುತ್ತಿದ್ದ ಸಮಯದಲ್ಲೇ ಟರ್ಕಿಯ ಸಂಸದರೊಬ್ಬರು ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಂಸದ ಹಸನ್ ಬಿಟ್ಮೆಜ್(Hasan Bitmez) ಸದನದಲ್ಲಿ ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂದು ಊಹಿಸುವುದು ತುಂಬಾ ಕಷ್ಟ.
ಈ ಯುದ್ಧದಿಂದಾಗಿ, ಗಾಜಾದಲ್ಲಿ ಇದುವರೆಗೆ 18 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ದಾಳಿಗೆ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗಿದೆ. ಏತನ್ಮಧ್ಯೆ, ಗಾಜಾವನ್ನು ಬೆಂಬಲಿಸುವ ಟರ್ಕಿಶ್ ದೇಶದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟರ್ಕಿ ಸಂಸದ ಹಸನ್ ಬಿಟ್ಮೆಜ್ ಭಾಷಣವನ್ನು ನೀಡುತ್ತಿದ್ದರು ಮತ್ತು ಬಿಟ್ಮೆಜ್ ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಬಲವಾಗಿ ಟೀಕಿಸುತ್ತಿದ್ದರು. ಅಲ್ಲಾನ ಕೋಪದಿಂದ ಯಾರೂ ತಪ್ಪಿಸಿಕೊಳ್ಳಲಾಗದು ಎಂದು ಹೇಳುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿರೋಧ ಪಕ್ಷ ಫೆಲಿಸಿಟಿಯ ಸಂಸದ ಹಸನ್ ಅವರನ್ನು ಅಂಕಾರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ತಿಳಿಸಿದ್ದಾರೆ. ಕೈರೋದ ಅಲ್ ಅಜರ್ ವಿಶ್ವವಿದ್ಯಾನಿಲಯದ ಪದವೀಧರರಾದ ಬಿಟ್ಮೆಜ್ ಅವರು ಇಸ್ಲಾಮಿಕ್ ಯೂನಿಯನ್ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದರು. ಈ ಹಿಂದೆ ಇಸ್ಲಾಮಿಕ್ ಸರ್ಕಾರೇತರ ಸಂಸ್ಥೆಗಳಿಗೆ ಕೆಲಸ ಮಾಡಿದ್ದರು ಎಂದು ಅವರ ಸಂಸತ್ತಿನ ಪರಿಚಯ ಪತ್ರದಲ್ಲಿ ತಿಳಿಸಲಾಗಿದೆ. ಬಿಟ್ಮೆಜ್ ಅವರಿಗೆ ಒಂದು ಮಗು ಇದೆ.
Turkish MP Hasan Bitmez talks sh*t about Israel then gets a heart attack and dies on the spot after saying Israel “can’t escape the wrath of Allah.” pic.twitter.com/xryKoJzyg4
— Diliman Abdulkader (@D_abdulkader) December 14, 2023
ಇಸ್ರೇಲ್ ದುಷ್ಕೃತ್ಯಗಳು ಮತ್ತು ಹತ್ಯಾಕಾಂಡಗಳನ್ನು ಮಾಡಿದ್ದು ಇಡೀ ಮಾನವಕುಲವನ್ನು ನಾಚಿಕೆಗೇಡು ಮಾಡಿದೆ. ಅಲ್ಲಾ ಇಸ್ರೇಲ್ಗೆ ತಕ್ಕ ಪಾಠ ಕಲಿಸುತ್ತಾನೆ ಎಂದು ಹೇಳುತ್ತಾ ಕುಸಿದುಬಿದ್ದಿದ್ದಾರೆ.
ಬಿಟ್ಮೆಜ್ ಮಧುಮೇಹಿ 54 ವರ್ಷದ ಸಂಸದ ಬಿಟ್ಮೆಜ್ ಮಧುಮೇಹಿ, ಸಂಸತ್ತಿನಲ್ಲಿ ಹಠಾತ್ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ