ಮುಂಬೈ: 16 ತಿಂಗಳಲ್ಲಿ 5 ಬಾರಿ ಹೃದಯಾಘಾತವಾಗಿ ಬದುಕುಳಿದ 51 ವರ್ಷದ ಮಹಿಳೆ

ಈಕೆ 6 ಆಂಜಿಯೋಪ್ಲಾಸ್ಟಿ ಮತ್ತು ಒಂದು ಕಾರ್ಡಿಯಾಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಡಿಸೆಂಬರ್ 1 ಮತ್ತು 2 ರಂದು ಕ್ಯಾಥ್ ಲ್ಯಾಬ್‌ನಲ್ಲಿ ಕೊನೆಯದಾಗಿ ಶಸ್ತ್ರ ಚಿಕಿತ್ಸೆಗ ಒಳಗಾದ ರೇಖಾ (ಹೆಸರು ಬದಲಾಯಿಸಲಾಗಿದೆ), "ನನಗೇನಾಗಿದೆ? ಮೂರು ತಿಂಗಳಲ್ಲೊಮ್ಮೆ ಹೊಸ ಬ್ಲಾಕ್ ಆಗುತ್ತಿದೆ ಯಾಕೆ ಎಂದು ಕೇಳಿದ್ದಾರೆ.

ಮುಂಬೈ: 16 ತಿಂಗಳಲ್ಲಿ 5 ಬಾರಿ ಹೃದಯಾಘಾತವಾಗಿ ಬದುಕುಳಿದ 51 ವರ್ಷದ ಮಹಿಳೆ
ಹೃದಯಾಘಾತ
Follow us
ರಶ್ಮಿ ಕಲ್ಲಕಟ್ಟ
|

Updated on: Dec 07, 2023 | 3:12 PM

ಮುಂಬೈ ಡಿಸೆಂಬರ್ 07: ಮಹಾರಾಷ್ಟ್ರದ (Maharashtra) ಮುಲುಂಡ್​​ನಲ್ಲಿ (Mulund) ವಾಸಿಸುವ 51 ವರ್ಷದ ಮಹಿಳೆಯೊಬ್ಬರಿಗೆ ಕಳೆದ 16 ತಿಂಗಳುಗಳಲ್ಲಿ ಐದು ಹೃದಯಾಘಾತಗಳಾಗಿವೆ(heart attacks). ಆಕೆಗೆ ಐದು ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. ಈಕೆ 6 ಆಂಜಿಯೋಪ್ಲಾಸ್ಟಿ ಮತ್ತು ಒಂದು ಕಾರ್ಡಿಯಾಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಡಿಸೆಂಬರ್ 1 ಮತ್ತು 2 ರಂದು ಕ್ಯಾಥ್ ಲ್ಯಾಬ್‌ನಲ್ಲಿ ಕೊನೆಯದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದ ರೇಖಾ (ಹೆಸರು ಬದಲಾಯಿಸಲಾಗಿದೆ), “ನನಗೇನಾಗಿದೆ? ಮೂರು ತಿಂಗಳಲ್ಲೊಮ್ಮೆ ಹೊಸ ಬ್ಲಾಕ್ ಆಗುತ್ತಿದೆ ಯಾಕೆ ಎಂದು ಕೇಳಿದ್ದಾರೆ.

ಸೆಪ್ಟೆಂಬರ್ 2022 ರಲ್ಲಿ ಜೈಪುರದಿಂದ ಬೋರಿವ್ಲಿಗೆ ಹಿಂದಿರುಗುತ್ತಿದ್ದಾಗ ರೈಲಿನಲ್ಲಿ ಆಕೆಗೆ ಮೊದಲ ಬಾರಿ ಹೃದಯಾಘಾತ ಸಂಭವಿಸಿದ್ದು, ರೈಲ್ವೆ ಅಧಿಕಾರಿಗಳು ಅವಳನ್ನು ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದರು.

ನಾವು ಆಂಜಿಯೋಪ್ಲ್ಯಾಸ್ಟಿಗಾಗಿ ಮುಂಬೈಗೆ ಹೋಗಲು ಬಯಸಿದ್ದೇವೆ ಎಂದು ಮುಲುಂಡ್‌ನ ಫೋರ್ಟಿಸ್ ಆಸ್ಪತ್ರೆಯಿಂದ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ರೇಖಾ ಹೇಳಿದ್ದಾರೆ.

ರೇಖಾ ಅವರ ಹೃದಯ ಸಮಸ್ಯೆಗಳಿಗೆ ಕಾರಣ ಏನು ಎಂಬುದು ನಿಗೂಢವಾಗಿದೆ ಎಂದು ಹೃದ್ರೋಗ ತಜ್ಞೆಯಾಗಿರುವ ಡಾ. ಹಸ್ಮುಖ್ ರಾವತ್ ಹೇಳಿದ್ದಾರೆ. ರೇಖಾ ಅವರು 2 ಆಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಮುಖ್ಯ ಅಪಧಮನಿಗಳ ಟ್ರಿಫರ್ಕೇಶನ್‌ನಲ್ಲಿ ಸಂಕೀರ್ಣವಾದ ಗಾಯ ಹೊಂದಿದ್ದಾರೆ ಎಂದು ಡಾ. ರಾವತ್ ಹೇಳಿದ್ದಾರೆ. ರೇಖಾ ಅವರ ಫಿಮೋರಲ್ ಆರ್ಟರಿಯಲ್ಲಿ ಅನೇಕ ಪಂಕ್ಚರ್‌ಗಳನ್ನು ಹೊಂದಿದ್ದರಿಂದ, ಕೈಯ ಮೂಲಕ ( ಲೆಫ್ಟ್ ರೇಡಿಯಲ್ ಆರ್ಟರಿ) ಈ ಟ್ರಿಕಿ ಜಂಕ್ಷನ್ ಅನ್ನು ನಿಭಾಯಿಸಬೇಕಾಯಿತು.

ವೈದ್ಯರು ನನಗೆ ಸ್ಟೀರಾಯ್ಡ್‌ಗಳು ಮತ್ತು ಹೊಸ ಔಷಧಿಗಳನ್ನು ನೀಡಿದ್ದು ಇವು ಸಹಾಯ ಆಗಿವೆ ಎಂದು ರೇಖಾ ಹೇಳಿದ್ದಾರೆ.

ವೈದ್ಯಕೀಯವಾಗಿ ಹೇಳುವುದಾದರೆ, ರೇಖಾ ಅದೃಷ್ಟಶಾಲಿ. ಏಕೆಂದರೆ ಆಕೆಯ ಹೃದಯಾಘಾತವು NSTEMI ಅಥವಾ ಹೃದಯದ ಆಮ್ಲಜನಕದ ಅಗತ್ಯವನ್ನು ಪೂರೈಸಲು ಸಾಧ್ಯವಾಗದಿದ್ದಾಗ ಸಂಭವಿಸುವ ST-ಅಲ್ಲದ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಆಗಿರುತ್ತದೆ. “STEMI ಹೃದಯಾಘಾತವು ಹೋಲಿಸಿದರೆ ಅಪಾಯಕಾರಿ. ವಿವಿಧ ಎಂಟು ಕಾರ್ಯವಿಧಾನಗಳ ಹೊರತಾಗಿಯೂ, ಆಕೆಯ ಹೃದಯದ ಎಜೆಕ್ಷನ್ ಭಾಗವು 45% ಆಗಿದ್ದು ಅದು ಒಳ್ಳೆಯದು ಎಂದು ಡಾ ರಾವತ್ ಹೇಳಿದ್ದಾರೆ.

ಇಂತಹ  ಮಾರಣಾಂತಿಕ ಅಪಧಮನಿಗಳ ಗಟ್ಟಿಯಾಗುವಿಕೆ ಅಪರೂಪ. ವೈದ್ಯರು ಆಕೆಯ ಲಿಪಿಡ್‌ಗಳನ್ನು ತಿಂಗಳುಗಳವರೆಗೆ ಕಡಿಮೆ ಮಾಡಿದ್ದಾರೆ, ಆಕೆಗೆ ಸ್ಟೆಂಟಿಂಗ್ ಮತ್ತು ಬೈಪಾಸ್ ಮಾಡಲಾಗಿದೆ. ಆದರೂ ಸಮಸ್ಯೆ ಮರುಕಳಿಸುತ್ತದೆ ಎಂದು KEM ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಅಜಯ್ ಮಹಾಜನ್ ಹೇಳಿದ್ದಾರೆ.

ಇದನ್ನೂ ಓದಿ: ಶಾಲೆಗಳಲ್ಲಿ ಸಿಪಿಆರ್ ತರಬೇತಿಯ ತುರ್ತು ಅಗತ್ಯ: 6 ತಿಂಗಳ ಅವಧಿಯಲ್ಲಿ ಗುಜರಾತಿನಲ್ಲಿ 80% ಹೃದಯಾಘಾತ ಸಾವು

ಅವರು ಸಮಾಲೋಚಿಸಿದ ಅನೇಕ ವೈದ್ಯರು ಸೇರಿದಂತೆ ತಜ್ಞರು, ರಕ್ತನಾಳ ಸೋಂಕು ಮತ್ತು ಕಿರಿದಾಗುವ ವ್ಯಾಸ್ಕುಲೈಟಿಸ್‌ನಂತಹ ಸ್ವಯಂ-ನಿರೋಧಕ ಕಾಯಿಲೆಯು ಕಾರಣವಾಗಿರಬಹುದು ಎಂದು ನಂಬುತ್ತಾರೆ, ಆದರೆ ಪರೀಕ್ಷಾ ಫಲಿತಾಂಶಗಳು ಇಲ್ಲಿಯವರೆಗೆ ಯಾವುದೇ ಸ್ಪಷ್ಟ ರೋಗನಿರ್ಣಯವನ್ನು ತೋರಿಸಿಲ್ಲ.

ಫೆಬ್ರವರಿ, ಮೇ, ಜುಲೈ ಮತ್ತು ನವೆಂಬರ್‌ನಲ್ಲಿ ನನಗೆ ಹೃದಯಾಘಾತವಾಗಿದೆ” ಮತ್ತೊಂದು ಹೃದಯಾಘಾತಕ್ಕೆ ಹೆದರಿ ಗಾಬರಿಯಿಂದ ಆಸ್ಪತ್ರೆಗೆ ಧಾವಿಸಿದಾಗ ಮತ್ತೊಂದು ಸಂಗತಿ ಗೊತ್ತಾಯಿತು. ರೇಖಾ ಅವರಿಗೆ ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಮತ್ತು ಬೊಜ್ಜು ಮುಂತಾದ ದೀರ್ಘಕಾಲದ ಸಮಸ್ಯೆಗಳಿವೆ.

ಸೆಪ್ಟೆಂಬರ್ 2022 ರಲ್ಲಿ ಅವರು 107 ಕೆಜಿ ತೂಕವನ್ನು ಹೊಂದಿದ್ದರು. ಅಂದಿನಿಂದ ಆಕೆ 30 ಕೆಜಿಗಿಂತ ಹೆಚ್ಚು ಕಳೆದುಕೊಂಡಿದ್ದಾಳೆ. ಆಕೆಗೆ ‘ಪಿಸಿಎಸ್‌ಕೆ 9 ಇನ್‌ಹಿಬಿಟರ್’ ಚುಚ್ಚುಮದ್ದು ನೀಡಲಾಯಿತು, ಇದು ತುಲನಾತ್ಮಕವಾಗಿ ಹೊಸ ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಔಷಧವಾಗಿದೆ. ಅದು ಆಕೆಯ ಮಟ್ಟವನ್ನು ಕಡಿಮೆ ಮಾಡಿದೆ ಮತ್ತು ಆಕೆಯ ಸಕ್ಕರೆ ಸಹ ನಿಯಂತ್ರಣದಲ್ಲಿದೆ. ಆದರೆ ಹೃದಯಾಘಾತವು ಆಗುತ್ತಲೇ ಇದೆ. ರೋಗಿಗಳಿಗೆ ಈ ರೀತಿ ಒಂದೇ ಸ್ಥಳದಲ್ಲಿ ಪುನರಾವರ್ತಿತ ಬ್ಲಾಕ್ ಯಾಕೆ ಬರುತ್ತದೆ ಎಂದು ತಿಳಿದಿಲ್ಲವಾದರೂ, ರೇಖಾ ಅವರ ದೇಹದ ವಿವಿಧ ಸ್ಥಳಗಳಲ್ಲಿ ಹೊಸ ಬ್ಲಾಕ್ ಕಂಡುಬರುತ್ತದೆ ಎಂದು ಡಾ ರಾವತ್ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ