ಇಸ್ರೇಲ್​ನಿಂದ ವೈಮಾನಿಕ ದಾಳಿ, 8 ಸಿರಿಯಾ ಸೈನಿಕರು ಸಾವು

ಸಿರಿಯಾ(Syria)ದ ದಾರಾದಲ್ಲಿನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್(Israel) ನಡೆಸಿರುವ ವೈಮಾನಿಕ ದಾಳಿಯಲ್ಲಿ 8 ಮಂದಿ ಸಿರಿಯಾ ಸೈನಿಕರು ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಂಗಳವಾರ ತಡರಾತ್ರಿ ಇಸ್ರೇಲ್​ನ ಖಾಲಿ ಪ್ರದೇಶಗಳಲ್ಲಿ ಸಿರಿಯಾದಿಂದ ರಾಕೆಟ್ ದಾಳಿ ನಡೆದಿತ್ತು. ಸಿರಿಯಾದಿಂದ ಇಸ್ರೇಲ್​ ಕಡೆಗೆ ರಾಕೆಟ್ ಉಡಾವಣೆಗೆ ಪ್ರತಿಯಾಗಿ ಇಸ್ರೇಲ್ ಸಿರಿಯಾ ಮೇಲೆ ದಾಳಿ ನಡೆಸಿದೆ.

ಇಸ್ರೇಲ್​ನಿಂದ ವೈಮಾನಿಕ ದಾಳಿ, 8 ಸಿರಿಯಾ ಸೈನಿಕರು ಸಾವು
ವೈಮಾನಿಕ ದಾಳಿ-ಸಾಂದರ್ಭಿಕ ಚಿತ್ರ
Image Credit source: Indian Express

Updated on: Oct 25, 2023 | 3:00 PM

ಸಿರಿಯಾ(Syria)ದ ದಾರಾದಲ್ಲಿನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್(Israel) ನಡೆಸಿರುವ ವೈಮಾನಿಕ ದಾಳಿಯಲ್ಲಿ 8 ಮಂದಿ ಸಿರಿಯಾ ಸೈನಿಕರು ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಂಗಳವಾರ ತಡರಾತ್ರಿ ಇಸ್ರೇಲ್​ನ ಖಾಲಿ ಪ್ರದೇಶಗಳಲ್ಲಿ ಸಿರಿಯಾದಿಂದ ರಾಕೆಟ್ ದಾಳಿ ನಡೆದಿತ್ತು. ಸಿರಿಯಾದಿಂದ ಇಸ್ರೇಲ್​ ಕಡೆಗೆ ರಾಕೆಟ್ ಉಡಾವಣೆಗೆ ಪ್ರತಿಯಾಗಿ ಇಸ್ರೇಲ್ ಸಿರಿಯಾ ಮೇಲೆ ದಾಳಿ ನಡೆಸಿದೆ.

ಮಿಲಿಟರಿ ತನ್ನ ಫೈಟರ್​ ಜೆಟ್​ಗಳು ಸಿರಿಯಾ ಸೇನೆಗೆ ಸೇರಿದ ಮಿಲಿಟರಿ ಮೂಲಸೌಕರ್ಯ ಮತ್ತು ಮಾರ್ಟರ್​ ಲಾಂಚರ್​ಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ಇಸ್ರೇಲಿ ಆಕ್ರಮಿತ ಗೋಲನ್ ಹೈಟ್ಸ್​ನಲ್ಲಿ ವೈಮಾನಿಕ ದಾಳಿ ಸೈರನ್​ಗಳನ್ನು ಹುಟ್ಟುಹಾಕಿದ ಎರಡು ರಾಕೆಟ್​ಗಳನ್ನು ಸಿರಿಯಾ ಸೇನೆಯೇ ಹಾರಿಸಿದೆಯೇ ಎಂಬುದರ ಕಡೆಗೆ ಇಸ್ರೇಲ್ ಹೆಚ್ಚಿನ ಮಾಹಿತಿ ನೀಡಿಲ್ಲ.

ಇಸ್ರೇಲ್ ಇತ್ತೀಚಿನ ದಿನಗಳಲ್ಲಿ ಹಿಜ್ಬುಲ್ಲಾ ಮತ್ತು ಸಿರಿಯಾದಲ್ಲಿನ ಉಗ್ರಗಾಮಿಗಳೊಂದಿಗೆ ಸಂಘರ್ಷದಲ್ಲಿ ತೊಡಗಿದೆ. ಇತ್ತೀಚಿನ ವಾರಗಳಲ್ಲಿ ಸಿರಿಯಾದ ಡಮಾಸ್ಕಸ್ ಮತ್ತು ಅಲೆಪ್ಪೊ ವಿಮಾನ ನಿಲ್ದಾಣಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಲಾಗಿದೆ.

ಮತ್ತಷ್ಟು ಓದಿ: ಹಮಾಸ್-ಇಸ್ರೇಲ್ ಸಂಘರ್ಷ: ಇಸ್ರೇಲ್​ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಬಹುದು ಎಂದ ಜೋ ಬೈಡನ್

ಮಂಗಳವಾರ ರಾತ್ರಿ ಸಿರಿಯಾದಿಂದ ರಾಕೆಟ್ ದಾಳಿಯು ಲೆಬನಾನ್ ಗಡಿಯಲ್ಲಿ ಕದನಗಳು ಮುಂದುವರೆದಿದ್ದು, ದಕ್ಷಿಣದ ಗಾಜಾ ಪಟ್ಟಿಯಲ್ಲಿ ಹಮಾಸ್ ಭಯೋತ್ಪಾದಕರೊಂದಿಗೆ ಇಸ್ರೇಲ್ ಯುದ್ಧವನ್ನು ಮುಂದುವರೆಸುತ್ತಿರುವುದರಿಂದ ನಿತ್ಯ ಹೊಸ ಆಯಾಮಗಳು ದೊರೆಯುತ್ತಿವೆ.

ಅಕ್ಟೋಬರ್ 7 ರ ಹಮಾಸ್ ದಾಳಿಯ ನಂತರ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಭಯೋತ್ಪಾದಕ ಗುಂಪು ಇಸ್ರೇಲಿ ಮಿಲಿಟರಿ ಸ್ಥಾನಗಳು ಮತ್ತು ಇಸ್ರೇಲಿ ಪಟ್ಟಣಗಳ ಮೇಲೆ ಡಜನ್‌ಗಟ್ಟಲೆ ಕ್ಷಿಪಣಿಗಳು, ರಾಕೆಟ್‌ಗಳನ್ನು ಹಾರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ