ಇಸ್ರೇಲ್ಗೆ ಭೇಟಿ ನೀಡಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ದಾಳಿ ಮಾಡಿದ ಹಮಾಸ್ ಕೃತ್ಯವನ್ನು ಹಲವು ದೇಶಗಳು ಖಂಡಿಸಿದೆ. ಈ ಪೈಕಿ ಫ್ರೆಂಚ್ ಕೂಡ ಒಂದು. ಇಸ್ರೇಲ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸಂಪೂರ್ಣ ಬೆಂಬಲ ನೀಡಿದರು. ಇದೀಗ ಯುದ್ಧ ಭೂಮಿ ಇಸ್ರೇಲ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭೇಟಿ ನೀಡಿದ್ದಾರೆ. ಈ ಹಿಂದೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದರು. ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕೂಡ ಭೇಟಿ ನೀಡಿದ್ದರು.
ಇಸ್ರೇಲ್ (Israel) ಮೇಲೆ ಅಕ್ಟೋಬರ್ 7ರಂದು ದಾಳಿ ಮಾಡಿದ ಹಮಾಸ್ ಕೃತ್ಯವನ್ನು ಹಲವು ದೇಶಗಳು ಖಂಡಿಸಿದೆ. ಈ ಪೈಕಿ ಫ್ರೆಂಚ್ ಕೂಡ ಒಂದು. ಇಸ್ರೇಲ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಸಂಪೂರ್ಣ ಬೆಂಬಲ ನೀಡಿದರು. ಇದೀಗ ಯುದ್ಧ ಭೂಮಿ ಇಸ್ರೇಲ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭೇಟಿ ನೀಡಿದ್ದಾರೆ. ಈ ಹಿಂದೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದರು. ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕೂಡ ಭೇಟಿ ನೀಡಿದ್ದರು. ಇದೀಗ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಸ್ರೇಲ್ನ ಟೆಲ್ ಅವಿವ್‌ಗೆ ಆಗಮಿಸಿದ್ದಾರೆ.
ಇಸ್ರೇಲ್ ಅಧಿಕಾರಗಳ ವರದಿ ಪ್ರಕಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಯುದ್ಧದ ಎರಡು ವಾರಗಳ ನಂತರ ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಹಮಾಸ್ ಉಗ್ರರು ಗಾಜಾಪಟ್ಟಿ ಮೇಲೆ ದಾಳಿ ಮಾಡಿದಾಗ 1,400 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಫ್ರೆಂಚ್ನ 30 ನಾಗರಿಕರು ಇದ್ದರು ಎಂದು ಹೇಳಲಾಗಿದೆ. ಈ ದಾಳಿಯ ನಂತರ ಫ್ರೆಂಚ್ ಇಸ್ರೇಲ್ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಜತೆಗೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇಸ್ರೇಲ್ ಭೇಟಿ ನೀಡಲಿದ್ದಾರೆ ಎಂದು ಫ್ರೆಂಚ್ ಪ್ರೆಸಿಡೆನ್ಸಿ ಹೇಳಿತ್ತು.
ಹಮಾಸ್ ಪ್ರಕಾರ ಇಸ್ರೇಲ್ ನಡೆಸಿದ ದಾಳಿಯಿಂದ 5,000 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಹೆಚ್ಚಿವರು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗಿದೆ. ಇನ್ನು ಇಸ್ರೇಲ್ ವಶದಲ್ಲಿರುವ ಗಾಜಾ ಪಟ್ಟಿಯ 2.4 ಮಿಲಿಯನ್ ಜನರು ನೀರು, ಆಹಾರ, ವಿದ್ಯುತ್ ಮತ್ತು ಇತರ ಮೂಲಭೂತ ಸರಬರಾಜುಗಳಿಂದ ವಂಚಿತರಾಗಿದ್ದಾರೆ. ಇದೀಗ ಅವರಿಗೆ ಮಾನವೀಯತೆ ದೃಷ್ಟಿಯಿಂದ ಕೆಲವೊಂದು ಸಹಾಯವನ್ನು ಮಾಡಲು ಫ್ರೆಂಚ್ ಮುಂದಾಗಿದೆ.
ಇದನ್ನೂ ಓದಿ: ವರಸೆ ಬದಲಿಸಿದ ಚೀನಾ, ಇಸ್ರೇಲ್ಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ
ಮ್ಯಾಕ್ರನ್ ಮತ್ತು ನೆತನ್ಯಾಹು ಮಧ್ಯಾಹ್ನ 1:00 ಗಂಟೆಗೆ (1000 GMT) ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಸ್ರೇಲ್ ಅಧ್ಯಕ್ಷ ಸೇರಿದಂತೆ ವಿರೋಧ ಪಕ್ಷದ ನಾಯಕರಾದ ಬೆನ್ನಿ ಗ್ಯಾಂಟ್ಜ್ ಮತ್ತು ಯೈರ್ ಲ್ಯಾಪಿಡ್ ಅವರನ್ನು ಜೆರುಸಲೆಮ್‌ನಲ್ಲಿ ಭೇಟಿಯಾಗಲಿದ್ದಾರೆ. ಇದರ ಜತೆಗೆ ಹಮಾಸ್ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಫ್ರೆಂಚ್ ನಾಗರಿಕರು ಹಾಗೂ ಫ್ರೆಂಚ್ – ಇಸ್ರೇಲ್ ಒತ್ತೆಯಾಳುಗಳಾಗಿರುವವರ ಕುಟುಂಬದವರವನ್ನು ಭೇಟಿ ಮಾಡಲಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇಸ್ರೇಲ್ಗೆ ಭೇಟಿ ವಿಡಿಯೋ ಇಲ್ಲಿದೆ ನೋಡಿ
#WATCH French President Emmanuel Macron arrives in Tel Aviv, Israel amid the ongoing Israel-Hamas conflict
(Video source: Reuters) pic.twitter.com/GNlPer38CX
— ANI (@ANI) October 24, 2023
ಇನ್ನು ಎಮ್ಯಾನುಯೆಲ್ ಮ್ಯಾಕ್ರೋನ್ ಫೆಲೆಸ್ತೀನ್ ಅಧ್ಯಕ್ಷ ಮಹ್ಮದ್ ಅಬ್ಬಾಸ್, ಜೋರ್ಡಾನ್ ರಾಜ ಅಬ್ದುಲ್ಲಾ II, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮತ್ತು ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಇಸ್ರೇಲ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಭೇಟಿ ನೀಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Tue, 24 October 23