ಇಸ್ರೇಲ್​​​ – ಹಮಾಸ್​ ಸಂಘರ್ಷ: ವರಸೆ ಬದಲಿಸಿದ ಚೀನಾ, ಇಸ್ರೇಲ್​​​ಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ

ಪ್ರತಿಯೊಂದು ರಾಷ್ಟ್ರಗಳಿಗೂ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕು ಇದೆ. ಇದರ ಜತೆಗೆ ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರಬೇಕು ಮತ್ತು ನಾಗರಿಕರನ್ನು ರಕ್ಷಿಸಬೇಕು ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇಸ್ರೇಲ್​​ ವಿದೇಶಾಂಗ ಸಚಿವ ಕೌಂಟರ್‌ಪಾರ್ಟ್ ಎಲಿ ಕೊಹೆನ್‌ ಅವರಿಗೆ ಕರೆ ಮಾಡಿ ಹೇಳಿದ್ದಾರೆ.

ಇಸ್ರೇಲ್​​​ - ಹಮಾಸ್​ ಸಂಘರ್ಷ: ವರಸೆ ಬದಲಿಸಿದ ಚೀನಾ, ಇಸ್ರೇಲ್​​​ಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 24, 2023 | 11:15 AM

ಇಸ್ರೇಲ್ ಮತ್ತು ಹಮಾಸ್​​ (Israel – Hamas) ಉಗ್ರರ ನಡುವೆ ನಡೆಯುತ್ತಿರುವ ಘರ್ಷಣೆ ಬಗ್ಗೆ ಅನೇಕ ರಾಷ್ಟ್ರಗಳು ವಿಷಾದವನ್ನು ವ್ಯಕ್ತಪಡಿಸಿದೆ. ಭಾರತ ಸೇರಿಸಿದಂತೆ ಹಲವು ದೇಶಗಳು ಇಸ್ರೇಲ್​​​ ಪರ ನಿಂತಿದೆ. ಇನ್ನು ಕೆಲವು ರಾಷ್ಟ್ರಗಳು ಪ್ಯಾಲೇಸ್ಟಿನಿಯನ್ ಪರ ನಿಂತಿದೆ. ಆದರೆ ಇಲ್ಲಿ ಇಸ್ರೇಲ್​​ ಮತ್ತು ಹಮಾಸ್​​ ನಡುವೆ ನಡೆಯುತ್ತಿರುವ ಯುದ್ಧವಾಗಿದ್ದರು, ಪ್ಯಾಲೇಸ್ಟಿನಿಯನ್ ಪರ ನಿಂತಿರುವುದು ಆಶ್ಚರ್ಯವಾಗಿದೆ. ಏಷ್ಯಾ ಕೂಟಗಳು ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಅದರೂ ಕೆಲವೊಂದು ರಾಷ್ಟ್ರಗಳು ಪ್ಯಾಲೇಸ್ಟಿನಿಯನ್ ಪರ ಎಂದು ಹಮಾಸ್​​ಗೆ ಬೆಂಬಲ ನೀಡುತ್ತಿದೆ. ಈ ಸಾಲಿನ ಚೀನಾ ಕೂಡ ಒಂದಾಗಿತ್ತು. ಪ್ಯಾಲೇಸ್ಟಿನಿಯನ್ ಪರ ನಿಲ್ಲುವ ಭರದಲ್ಲಿ ಅಂತಾರಾಷ್ಟ್ರೀಯ ಒಕ್ಕೂಟ ರಾಷ್ಟ್ರಗಳ ಸಿದ್ಧಾಂತಗಳನ್ನು ಉಲ್ಲಂಘನೆ ಮಾಡಿತ್ತು. ಈ ಬಗ್ಗೆ ಅನೇಕ ಟೀಕೆಗಳು ಬಂದ ನಂತರ ಚೀನಾ ತನ್ನ ವರಸೆ ಬದಲಿಸಿದೆ. ಈಗ ಇಸ್ರೇಲ್​​​ಗೆ ತನ್ನ ರಾಷ್ಟ್ರದ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ಆದರೆ ಮಾನವೀಯ ನಿಟ್ಟಿನಲ್ಲಿ ಹಾಗೂ ನಾಗರಿಕರ ರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದೆ.

ಪ್ರತಿಯೊಂದು ರಾಷ್ಟ್ರಗಳಿಗೂ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕು ಇದೆ. ಇದರ ಜತೆಗೆ ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರಬೇಕು ಮತ್ತು ನಾಗರಿಕರನ್ನು ರಕ್ಷಿಸಬೇಕು ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇಸ್ರೇಲ್​​ ವಿದೇಶಾಂಗ ಸಚಿವ ಕೌಂಟರ್‌ಪಾರ್ಟ್ ಎಲಿ ಕೊಹೆನ್‌ ಅವರಿಗೆ ಕರೆ ಮಾಡಿ ಹೇಳಿದ್ದಾರೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ವರದಿ ಮಾಡಿದೆ. ಇದೀಗ ಯುಎಸ್ ಮತ್ತು ಯುರೋಪಿಯನ್ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಿದ ಹಮಾಸ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಇಸ್ರೇಲ್ ಹೊಂದಿದೆ ಎಂದು ಚೀನಾ ಒಪ್ಪಿಕೊಂಡಿದೆ.

ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇಸ್ರೇಲ್ ಮತ್ತು ಹಮಾಸ್​​ ಸಂಘರ್ಷದ ಬಗ್ಗೆ ಮಾತನಾಡಿದ್ದು. ​​ಈಜಿಪ್ಟ್ ಮತ್ತು ಇತರ ಅರಬ್ ರಾಷ್ಟ್ರಗಳೊಂದಿಗೆ ಸಾಧ್ಯವಾದಷ್ಟು ಬೇಗ ಪ್ಯಾಲೇಸ್ಟಿನಿಯನ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು, ತನ್ನ ಹಕ್ಕು ಮತ್ತು ಗಡಿಯ ಬಗ್ಗೆ ನ್ಯಾಯಯುತ ಹಾಗೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಜತೆಗೆ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿ ಎಂದು ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಅಂತಾರಾಷ್ಟ್ರೀಯವಾಗಿ ವಿರೋಧಗಳು ವ್ಯಕ್ತವಾಗಿತ್ತು. ಇದೀಗ ತನ್ನ ಹೇಳಿಕೆಯನ್ನು ಬದಲಾಯಿಸಿಕೊಂಡ ಚೀನಾ, ಇಸ್ರೇಲ್​​ಗೆ​​​ ತನ್ನ ಆತ್ಮ ರಕ್ಷಣೆ ಮಾಡಿಕೊಳ್ಳುವ ಅಧಿಕಾರ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಅಕ್ಟೋಬರ್​ 7ರಂದು ಹಮಾಸ್​​ ಇಸ್ರೇಲ್​​ ಮೇಲೆ ದಾಳಿ ಮಾಡಿತ್ತು, ಹಮಾಸ್​ ಮಾಡಿದ ದಾಳಿಯಿಂದ 1,400 ಇಸ್ರೇಲಿಗರು ಸಾವನ್ನಪ್ಪಿದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್​​ ಕೂಡ ಗಾಜಾಪಟ್ಟಿ ಸೇರಿದಂತೆ ಹಮಾಸ್​​ ಉಗ್ರರ ತಾಣಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ 4,700 ಹಮಾಸ್​​ ಉಗ್ರರು ಸೇರಿದಂತೆ ಪ್ಯಾಲೇಸ್ಟಿನಿಯರು ಕೂಡ ಸಾವನ್ನಪ್ಪಿದ್ದರು. ಆದರೆ ಚೀನಾ ಹಮಾಸ್​​ ಉಗ್ರರ ಸಾವಿನ ಬಗ್ಗೆ ಖಂಡಿಸಿದೆ. ನಂತರ ಸೆನೆಟ್ ನಾಯಕ ಚಕ್ ಶುಮರ್ ಚೀನಾವನ್ನು ಇಸ್ರೇಲ್​​ ಪರ ನಿಲ್ಲುವಂತೆ ಹಾಗೂ ಹಮಾಸ್​​ ಉಗ್ರರ ದಾಳಿಯನ್ನು ಖಂಡಿಸಬೇಕು ಎಂದು ಹೇಳಿದ್ದಾರೆ.

ಇನ್ನು ಚೀನಾದ ಈ ಹೇಳಿಕೆಯನ್ನು ಇಸ್ರೇಲ್​​ ಖಂಡಿಸಿದೆ. ಚೀನಾ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹೆಚ್ಚಿನ ನಾಗರಿಕರ ಸಾವು-ನೋವಿನಿಂದ ದುಃಖವಾಗಿದೆ. ನಾಗರಿಕರಿಗೆ ಹಾನಿ ಮಾಡುವ ಮತ್ತು ಅಂತರಾಷ್ಟ್ರೀಯ ಕಾನೂನುಗಳ ಯಾವುದೇ ಉಲ್ಲಂಘನೆಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಅಕ್ಟೋಬರ್​ 26 ಮತ್ತು 27ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದು, ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರನ್ನು ಭೇಟಿಯಾಗಿ ಈ ಯುದ್ಧ ಬಗ್ಗೆ ಮಾತನಾಡಲಿದ್ದಾರೆ ಎಂದು ವೈಟ್​​ಹೌಸ್​​ ಅಧಿಕಾರಿಗಳು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ