ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ ಹೃದಯಸ್ತಂಭನ; ಐಸಿಯುನಲ್ಲಿ ಚಿಕಿತ್ಸೆ

Russia President Vladimir Putin Cardiac Arrest News: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೃದಯ ಸ್ತಂಭನವಾಗಿರುವ ಸುದ್ದಿ ಕೇಳಿಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ಭಾನುವಾರ (ಅ. 22) ಸಂಜೆ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ ಹೃದಯಸ್ತಂಭನ; ಐಸಿಯುನಲ್ಲಿ ಚಿಕಿತ್ಸೆ
ವ್ಲಾಡಿಮಿರ್‌ ಪುಟಿನ್‌
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 24, 2023 | 2:33 PM

ಮಾಸ್ಕೋ, ಅಕ್ಟೋಬರ್ 24: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರಿಗೆ ಹೃದಯ ಸ್ತಂಭನವಾಗಿರುವ (cardiac arrest) ಸುದ್ದಿ ಕೇಳಿಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ಭಾನುವಾರ (ಅ. 22) ಸಂಜೆ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಮಾಜಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸೇರಿದ ‘ಜನರಲ್ ಎಸ್​ವಿಆರ್’ ಎನ್ನುವ ಟೆಲಿಗ್ರಾಂ ಚಾನಲ್​ನಲ್ಲಿ ಈ ಸುದ್ದಿ ಮೊದಲು ಬಂದಿದೆ. ಆ ವರದಿ ಪ್ರಕಾರ, ಅಕ್ಟೋಬರ್ 22ರಂದು ರಾತ್ರಿ 9ಗಂಟೆಗೆ ವ್ಲಾದಿಮಿರ್ ಪುಟಿನ್ ಅವರು ತಮ್ಮ ಬೆಡ್​ರೂಮ್​ನಲ್ಲಿ ಮಲಗಿದ ಸ್ಥಿತಿಯಲ್ಲಿ ಸೆಕ್ಯೂರಿಟಿ ಅಧಿಕಾರಿಗಳಿಗೆ ಕಂಡಿದ್ದರು. ಆಹಾರ ಮತ್ತು ಡ್ರಿಂಕ್ಸ್ ಇದ್ದ ಟೇಬಲ್ ಕೆಳಗೆ ಬಿದ್ದಿತ್ತು.

‘ಅಧ್ಯಕ್ಷರು ಕೆಳಗೆ ಬಿದ್ದಾಗ ಟೇಬಲ್​ಗೆ ತಾಗಿ ಅದು ಬಿದ್ದು ಶಬ್ದ ಬಂದಿರಬಹುದು. ಪುಟಿನ್ ಅವರು ನೆಲದಲ್ಲಿ ಬಿದ್ದು ಒದ್ದಾಡಿದ್ದಾರೆ. ಅಲ್ಲೇ ಪಕ್ಕದ ರೂಮುಗಳಲ್ಲಿದ್ದ ಕರ್ತವ್ಯನಿರತ ವೈದ್ಯರನ್ನು ಕೂಡಲೇ ಕರೆಸಲಾಯಿತು’ ಎಂದು ಟೆಲಿಗ್ರಾಂ ಚಾನಲ್​ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆ ವರದಿ ಪ್ರಕಾರ, ವ್ಲಾದಿಮಿರ್ ಪುಟಿನ್ ಅವರನ್ನು ಅಲ್ಲೇ ವಿಶೇಷ ಕೋಣೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಐಸಿಯುಗೆ ದಾಖಲಿಸಲಾಯಿತಂತೆ. ಸಕಾಲದಲ್ಲಿ ಚಿಕಿತ್ಸೆ ದೊರೆತ ಪರಿಣಾಮ ರಷ್ಯಾ ಅಧ್ಯಕ್ಷರ ಹೃದಯ ಬಡಿತ ಮತ್ತೆ ಶುರುವಾಗಿ, ಅವರಿಗೆ ಪ್ರಜ್ಞೆ ಮರಳಿದೆ. ಹಾಗಂತ ಜನರಲ್ ಎಸ್​ವಿಆರ್ ಹೆಸರಿನ ಟೆಲಿಗ್ರಾಂ ಚಾನಲ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಇಸ್ರೇಲ್​​ಗೆ ಭೇಟಿ ನೀಡಿದ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್

ರಷ್ಯಾ ಸರ್ಕಾರದಿಂದ ಅಥವಾ ಅದರ ವಕ್ತಾರರಿಂದ ಈ ಬಗ್ಗೆ ಯಾವ ಮಾಹಿತಿಯೂ ಬಂದಿಲ್ಲ. ಜನರಲ್ ಎಸ್​ವಿಆರ್ ಎಂಬ ಈ ಟೆಲಿಗ್ರಾಂ ಚಾನಲ್ ದೃಢೀಕೃತ ಖಾತೆ ಅಲ್ಲ ಎಂಬುದು ಇಲ್ಲಿ ಗಮನಾರ್ಹ. ಆದರೆ, ಈ ಚಾನಲ್ ನೀಡಿರುವ ಮಾಹಿತಿ ಪ್ರಕಾರ, ಭಾನುವಾರದ ಆ ಘಟನೆ ಬಳಿಕ ಸಾರ್ವಜನಿಕವಾಗಿ ರಷ್ಯಾ ಅಧ್ಯಕ್ಷರಂತೆ ಕಾಣಿಸಿಕೊಳ್ಳುತ್ತಿರುವುದು ವ್ಲಾದಿಮಿರ್ ಪುಟಿನ್ ಅವರ ಬಾಡಿ ಡಬಲ್ ಅಥವಾ ತದ್ರೂಪು ವ್ಯಕ್ತಿ ಎನ್ನಲಾಗಿದೆ.

ಪುಟಿನ್ ಸತ್ತರೆ ಮುಂದೇನು?

ವ್ಲಾದಿಮಿರ್ ಪುಟಿನ್ ಆರೋಗ್ಯದ ಬಗ್ಗೆ ಹಲವು ವರ್ಷಗಳಿಂದ ಊಹಾಪೋಹದ ಸುದ್ದಿಗಳು ಚಾಲನೆಯಲ್ಲಿವೆ. ಪುಟಿನ್ ಅವರಿಗೆ ಸಾಕಷ್ಟು ಆರೋಗ್ಯ ಸಮಸ್ಯೆ ಇದೆ. ಅವರು ಆಸ್ಪತ್ರೆಯಲ್ಲೇ ಹೆಚ್ಚು ಕಾಲ ಇರುತ್ತಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಬಾಡಿ ಡಬಲ್​ಗಳು ಎಂಬಂತಹ ಸುದ್ದಿ ಬಹಳ ಕೇಳಿಬಂದಿವೆ. ಅದರಲ್ಲೂ ಉಕ್ರೇನ್ ಮೇಲೆ ರಷ್ಯಾ ಯುದ್ಧಕ್ಕೆ ಏರಿಹೋದ ಬಳಿಕ ಇಂತಹ ಸುದ್ದಿಗಳು ದಟ್ಟಗೊಂಡಿವೆ.

ಇದನ್ನೂ ಓದಿ: ಇಸ್ರೇಲ್​​​ – ಹಮಾಸ್​ ಸಂಘರ್ಷ: ವರಸೆ ಬದಲಿಸಿದ ಚೀನಾ, ಇಸ್ರೇಲ್​​​ಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ

ಈಗ ನಡೆದಿದೆ ಎನ್ನಲಾದ ಘಟನೆಯ ಬಳಿಕ ಪುಟಿನ್ ಆಪ್ತರು ಪರಸ್ಪರ ಸಂಪರ್ಕಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಪುಟಿನ್ ನಿಧನ ಹೊಂದಿದರೆ ಏನು ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ಮಾಡಲಾಗಿದೆಯಂತೆ. ಹಾಗಂತ ಜನರಲ್ ಎಸ್​ವಿಆರ್ ಎಂಬ ಆ ಟೆಲಿಗ್ರಾಂ ಚಾನಲ್​ನಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Tue, 24 October 23