ಜನರ ಕಣ್ಣೆದುರೇ ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಗೆ ಚಾಕು ಇರಿತ

|

Updated on: Oct 13, 2023 | 5:26 PM

 ರಾಯಭಾರ ಕಚೇರಿಯ ಉದ್ಯೋಗಿಯ ಮೇಲೆ ದಾಳಿ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಭಾರ ಕಚೇರಿಯ ಆವರಣದಲ್ಲಿ ಈ ದಾಳಿ ನಡೆದಿಲ್ಲ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆ ನೀಡಿದೆ. ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ.

ಜನರ ಕಣ್ಣೆದುರೇ ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಗೆ ಚಾಕು ಇರಿತ
ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗೆ ಇರಿತ
Follow us on

ಬೀಜಿಂಗ್: ಚೀನಾದ (China) ರಾಜಧಾನಿ ಬೀಜಿಂಗ್‌ನಲ್ಲಿ (Beijing) ಶುಕ್ರವಾರ ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗೆ (Israeli diplomat) ಸಾರ್ವಜನಿಕರ ಮುಂದೆಯೇ ಹಲವು ಬಾರಿ ಇರಿದಿದ್ದು, ದಾಳಿಕೋರ ಮಧ್ಯಪ್ರಾಚ್ಯ ಮೂಲದವನೆಂದು ಕೆಲವು ವರದಿಗಳು ಹೇಳಿವೆ. ದಾಳಿಯ ಆಘಾತಕಾರಿ ದೃಶ್ಯಾವಳಿಗಳು ನೋಡಿದಾಗ, ಪಾದಚಾರಿ ಮಾರ್ಗದ ಮೇಲೆ ಮಲಗಿರುವ ಅಧಿಕಾರಿ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಬಿಳಿ ಶರ್ಟ್ ಮತ್ತು ಸನ್‌ಗ್ಲಾಸ್‌ನ ವ್ಯಕ್ತಿಯೊಬ್ಬ ಜನರು ನಿಂತು ನೋಡುತ್ತಿರುವಾಗ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.

ರಾಯಭಾರ ಕಚೇರಿಯ ಉದ್ಯೋಗಿಯ ಮೇಲೆ ದಾಳಿ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಭಾರ ಕಚೇರಿಯ ಆವರಣದಲ್ಲಿ ಈ ದಾಳಿ ನಡೆದಿಲ್ಲ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆ ನೀಡಿದೆ. ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ.


ಘಟನೆಯ ಬಗ್ಗೆ ಚೀನಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಾಳಿಯ ನಂತರ ಬೀಜಿಂಗ್‌ನಲ್ಲಿರುವ ರಾಯಭಾರ ಕಚೇರಿ ಶುಕ್ರವಾರ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಎಎಫ್‌ಪಿ ಪತ್ರಕರ್ತರನ್ನು ಭದ್ರತಾ ಸಿಬ್ಬಂದಿ ಆವರಣದ ಸುತ್ತ ಚಿತ್ರೀಕರಣ ಮಾಡದಂತೆ ಕೇಳಿಕೊಂಡರು.

ಇಸ್ರೇಲ್ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಹಮಾಸ್

ಶುಕ್ರವಾರದಂದು ಇಸ್ರೇಲಿ ಸ್ಥಾಪನೆಗಳ ವಿರುದ್ಧ ಮತ್ತು ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಪ್ರತಿಭಟಿಸುವಂತೆ ಹಮಾಸ್‌ನ ಮಾಜಿ ಮುಖ್ಯಸ್ಥ ಅರಬ್ ರಾಷ್ಟ್ರಗಳಿಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಯಹೂದಿ ಸಮುದಾಯದ ವಿರುದ್ಧದ ದಾಳಿಯ ಕಳವಳದ ಬಗ್ಗೆ ವಿಶ್ವಾದ್ಯಂತ ಎಚ್ಚರಿಕೆಯನ್ನು ನೀಡಲಾಗಿದೆ.

ಇಸ್ರೇಲಿ ಪಡೆಗಳು ಗಾಜಾವನ್ನು ವೈಮಾನಿಕ ದಾಳಿಯೊಂದಿಗೆ ಹೊಡೆದುರುಳಿಸಿದಾಗ ಕಳೆದ ಶನಿವಾರ ಪ್ಯಾಲೆಸ್ತೀನ್ ಗುಂಪಿನ ಹಠಾತ್ ದಾಳಿಯು ಪೂರ್ಣ ಪ್ರಮಾಣದ ಸಂಘರ್ಷವನ್ನು ಉಂಟುಮಾಡಿದ ನಂತರ ಹಮಾಸ್‌ನೊಂದಿಗಿನ ಇಸ್ರೇಲ್‌ನ ಯುದ್ಧವು ಶುಕ್ರವಾರ ಆರನೇ ದಿನಕ್ಕೆ ಪ್ರವೇಶಿಸಿದೆ. ಈಗ ನಡೆಯುತ್ತಿರುವ ಘರ್ಷಣೆಯಲ್ಲಿ ಎರಡೂ ಕಡೆಯಿಂದ 2,800 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಇದು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:  ಇಸ್ರೇಲ್​​​ ವೈಮಾನಿಕ ದಾಳಿ: ಹಮಾಸ್​​ ಉಗ್ರರ ಒತ್ತೆಯಾಳಾಗಿದ್ದ 13 ಇಸ್ರೇಲಿಗರು ಸಾವು

“ಇಸ್ರೇಲಿಗಳು ಮತ್ತು ಯಹೂದಿಗಳ ಮೇಲೆ ದಾಳಿ ಮಾಡಲು” ಶುಕ್ರವಾರದಂದು ‘ಕ್ರೋಧದ ದಿನ’ (Day of Rage )ವನ್ನು ನಡೆಸಲು ಹಮಾಸ್ ಪ್ರಪಂಚದಾದ್ಯಂತದ ತನ್ನ ಎಲ್ಲಾ ಬೆಂಬಲಿಗರಿಗೆ ಕರೆ ನೀಡಿದೆ ಎಂದು ಇಸ್ರೇಲ್ ಪ್ರಪಂಚದಾದ್ಯಂತದ ಯಹೂದಿಗಳಿಗೆ ಎಚ್ಚರಿಕೆ ನೀಡಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Fri, 13 October 23