ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನ್ಮ ಜಾತಕ ವಿಶ್ಲೇಷಣೆ ಏನು ಹೇಳುತ್ತದೆ?

ಇಸ್ರೇಲ್​​​​ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜನ್ಮ ಜಾತಕ ವಿಶ್ಲೇಷಣೆಯನ್ನು ಮಾಡಲಾಗಿದೆ. ಜ್ಯೋತಿಷ್ಯ ಅಧ್ಯಯನ ಮಾಡುವಂಥವರು, ಆಸಕ್ತರಿಗೆ ಇದೊಳ್ಳೆ ಪಠ್ಯದಂತೆ ಆದೀತು. ಆದ್ದರಿಂದ ಆ ವ್ಯಕ್ತಿಯ ಜನ್ಮ ಜಾತಕ ಹೇಗಿದೆ ಮತ್ತು ಭವಿಷ್ಯದಲ್ಲಿ ಏನಿದೆ ಎಂಬುದನ್ನು ಓದಿಕೊಳ್ಳಿ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನ್ಮ ಜಾತಕ ವಿಶ್ಲೇಷಣೆ ಏನು ಹೇಳುತ್ತದೆ?
ಸಾಂದರ್ಭಿಕ ಚಿತ್ರ (ಟಿವಿ9 ಕನ್ನಡ ವೆಬ್​​​ಸೈಟ್​​)
Follow us
TV9 Web
| Updated By: Digi Tech Desk

Updated on:Oct 13, 2023 | 5:00 PM

ಹಿಂದೆಂದೂ ಕಂಡರಿಯದ ರೀತಿಯಲ್ಲಿ ತನ್ನ ದೇಶ- ನಾಗರಿಕರ ಮೇಲೆ ದಾಳಿ ಮಾಡಿದ ಹಮಾಸ್ ಸಂಘಟನೆಯನ್ನು ಹೇಳ ಹೆಸರಿಲ್ಲದಂತೆ ಮಾಡುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ( Benjamin Netanyahu) ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆ ವಿಶ್ವದಾದ್ಯಂತ ಭಾರೀ ಚರ್ಚೆಗೆ ಕಾರಣ ಆಗಿದೆ. ಇಂಥ ಸನ್ನಿವೇಶದಲ್ಲಿ ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜನ್ಮ ಜಾತಕದ ವಿಶ್ಲೇಷಣೆ ಮಾಡಿದ್ದಾರೆ. ಈ ಲೇಖನದಲ್ಲಿನ ಅಭಿಪ್ರಾಯವು ಲೇಖಕರದ್ದಾಗಿದೆ. ಇದು ಟಿವಿ9 ಕನ್ನಡ ವೆಬ್ ಸೈಟ್ ಅಭಿಪ್ರಾಯವಲ್ಲ ಮತ್ತು ಇದನ್ನು ಅನುಮೋದಿಸುವುದಿಲ್ಲಸಂಪಾದಕರು

ಇಸ್ರೇಲ್ ಬಗ್ಗೆ ವಿಶ್ವದಾದ್ಯಂತ ಚರ್ಚೆ ನಡೆಯುತ್ತಿದೆ. ಹಮಾಸ್ ಸಂಘಟನೆಯು ನಡೆಸಿದ ದಿಢೀರ್ ದಾಳಿಗೆ ಭಾರೀ ಸಾವು- ನೋವುಗಳನ್ನು ಇಸ್ರೇಲ್ ಕಂಡಿದೆ. ಆ ನಂತರದಲ್ಲಿ ಆ ದೇಶದ ಪ್ರಧಾನಿಯೂ ಮೊದಲುಗೊಂಡು ಎಲ್ಲ ನಾಗರಿಕರು ಕ್ರುದ್ಧರಾಗಿ ಸಮರಾಂಗಣದಲ್ಲಿ ಇಳಿದಿರುವ ರೀತಿಯನ್ನು ಇಡೀ ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ಇಂಥ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜನ್ಮ ಜಾತಕ ವಿಶ್ಲೇಷಣೆಯನ್ನು ಮಾಡಲಾಗಿದೆ. ಜ್ಯೋತಿಷ್ಯ ಅಧ್ಯಯನ ಮಾಡುವಂಥವರು, ಆಸಕ್ತರಿಗೆ ಇದೊಳ್ಳೆ ಪಠ್ಯದಂತೆ ಆದೀತು. ಆದ್ದರಿಂದ ಆ ವ್ಯಕ್ತಿಯ ಜನ್ಮ ಜಾತಕ ಹೇಗಿದೆ ಮತ್ತು ಭವಿಷ್ಯದಲ್ಲಿ ಏನಿದೆ ಎಂಬುದನ್ನು ಓದಿಕೊಳ್ಳಿ.

ಬೆಂಜಮಿನ್ ನೆತನ್ಯಾಹು ಅವರದು ಚಿತ್ತಾ ನಕ್ಷತ್ರ ಕನ್ಯಾ ರಾಶಿ, ವೃಶ್ಚಿಕ ಲಗ್ನ. ಜನ್ಮ ಜಾತಕದಲ್ಲಿ ಲಗ್ನದಲ್ಲಿಯೇ ಶುಕ್ರ ಇದ್ದು, ಮಕರದಲ್ಲಿ ಗುರು, ಮೀನದಲ್ಲಿ ರಾಹು, ಸಿಂಹದಲ್ಲಿ ಶನಿಯೊಟ್ಟಿಗೆ ಕುಜ, ಕನ್ಯಾದಲ್ಲಿ ಕೇತುವಿನ ಜತೆಗೆ ಬುಧ, ಚಂದ್ರ ಹಾಗೂ ತುಲಾ ರಾಶಿಯಲ್ಲಿ ರವಿ ಗ್ರಹ ಇದೆ. ಹಾಗೆ ನೋಡಿದರೆ ಈ ಜಾತಕಕ್ಕೆ ಅದ್ಭುತ ಎನಿಸುವಂಥ ಯೋಗಗಳೇನೂ ಇಲ್ಲ. ಆದರೆ ಗ್ರಹಗಳ ಬಲ ಚೆನ್ನಾಗಿದೆ. ಏಕಾದಶದಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಬುಧನಿದ್ದು, ಹತ್ತನೇ ಮನೆ, ಅಂದರೆ ಕರ್ಮ ಸ್ಥಾನದಲ್ಲಿ ಶನಿಯ ಜತೆಗೆ ಇರುವಂಥ ಕುಜನು ಲಗ್ನದ ವೀಕ್ಷಣೆ ಮಾಡುತ್ತಾನೆ. ಈ ಜಾತಕಕ್ಕೆ ಭೃಗು- ಅಂಗಾರಕ ಯೋಗ ಇದೆ. ಇನ್ನು ಮಕರದಲ್ಲಿ ಗುರು ಇದ್ದರೂ ವರ್ಗೋತ್ತಮಾಂಶದಲ್ಲಿ ಇದೆ. ಆದರೆ ಈ ಜಾತಕಕ್ಕೆ ರವಿ ನೀಚ ಸ್ಥಾನದಲ್ಲಿದ್ದಾನೆ. ಸದ್ಯಕ್ಕೆ ಬುಧ ದಶೆ ನಡೆಯುತ್ತಿದ್ದು, 2025ನೇ ಇಸವಿಯ ತನಕ ಇದೇ ದಶೆ ಇರುತ್ತದೆ.

ಯಾರು ಏನು ಕೊಟ್ಟರೂ ಬಾಕಿ ತೀರಿಸುವ ವ್ಯಕ್ತಿ

ಈ ವ್ಯಕ್ತಿ ಕಿಂಗ್ ಹೌದು, ಕಿಂಗ್ ಮೇಕರ್ ಕೂಡ ಹೌದು. ಆದರೆ ಸದಾ ಒಂದಿಲ್ಲೊಂದು ಕೊರತೆ ಅನುಭವಿಸಿಯೇ ಅನುಭವಿಸುತ್ತಾರೆ. ಪಂಚಮದಲ್ಲಿ ಇರುವಂಥ ರಾಹು ಮಹತ್ವಾಕಾಂಕ್ಷೆಯನ್ನು ನೀಡುತ್ತಾನೆ. ಪಟ್ಟು ಹಿಡಿದು, ಕೆಲಸ ಮಾಡುವಂತೆ ಪ್ರೇರೇಪಿಸುತ್ತಾನೆ. ಈ ವ್ಯಕ್ತಿಯ ಅಹಂಭಾವಕ್ಕೆ ಸಣ್ಣ ಪೆಟ್ಟು ಬಿದ್ದರೂ ಸಹಿಸುವುದಿಲ್ಲ. ತಾನು ಪಡೆದಿದ್ದನ್ನು ಬಾಕಿ ಸಹಿತ ತೀರಿಸದೆ ವಿರಮಿಸದಂಥ ವ್ಯಕ್ತಿತ್ವ. ಅದು ಪ್ರೀತಿಯೇ ಇರಬಹುದು, ದ್ವೇಷವೇ ಇರಬಹುದು. ಸಾಲ, ಉಪಕಾರ ಸ್ಮರಣೆ ಎಲ್ಲವೂ ಇಷ್ಟೇ. ಅದನ್ನು ಹಿಂತಿರುಗಿಸುವ ತನಕ ಸಮಾಧಾನ ಇರುವುದಿಲ್ಲ. ಕೇತುವಿನ ಜತೆಗೆ ಚಂದ್ರ ಇರುವುದರಿಂದ ನಿದ್ರೆಯ ಸಮಸ್ಯೆ ಇರುತ್ತದೆ. ಇದಕ್ಕೆ ಈ ವ್ಯಕ್ತಿಯ ಸ್ವಭಾವವೂ ಒಂದು ಕಾರಣ. ಬೇಗ ಮಾನಸಿಕ ಖಿನ್ನತೆಗೆ ಗುರಿ ಆಗುತ್ತಾರೆ. ಸಣ್ಣ ಹಿನ್ನಡೆ, ಅವಮಾನ, ಟೀಕೆ ಯಾವುದನ್ನೂ ಸಹಿಸುವುದಕ್ಕೆ ಸಾಧ್ಯವಿಲ್ಲದ ವ್ಯಕ್ತಿ ಈತ ಎಂಬುದನ್ನು ಜಾತಕ ಸೂಚಿಸುತ್ತದೆ.

ಲಗ್ನಕ್ಕೆ ಹನ್ನೆರಡನೇ ಮನೆಯ ರವಿಯ ಕಾರಣಕ್ಕೆ ಈತನ ಜೀವನದಲ್ಲಿ ಯಾವುದೂ ಸಲೀಸಾಗಿ ಸಿಗುವುದಿಲ್ಲ. ಪ್ರತಿಯೊಂದಕ್ಕೂ ದೊಡ್ಡ ಯುದ್ಧವನ್ನೇ ಎದುರಿಸಬೇಕು. ಜತೆಗೆ ಸಿಗುವಂಥ ಅವಧಿ ಸಹ ಒತ್ತಡದಿಂದಲೇ ಇರುತ್ತದೆ. ಅಧಿಕಾರದ ಅವಧಿಯಲ್ಲಿ ಒಂದಿದ್ದರೆ ಇನ್ನೊಂದಿಲ್ಲ ಎಂಬಂಥ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಲಗ್ನದ ಮೇಲೆ ಕುಜನ ದೃಷ್ಟಿ ಇದೆ ಮತ್ತು ಕುಜ ಇರುವುದು ಶನಿಯ ಜತೆಗೆ. ಆದ್ದರಿಂದ ಈತನಲ್ಲಿ ಕಾಠಿಣ್ಯ ಜಾಸ್ತಿ ಇರುತ್ತದೆ. ಸ್ವಭಾವತಃ ಸೈನಿಕ ಹಾಗೂ ಜತೆಗೆ ಕರುಣೆ- ಕಕ್ಕುಲಾತಿ ಇದ್ಯಾವುದೂ ಇರುವುದಿಲ್ಲ. ಚಂದ್ರ ಮತ್ತು ಕೇತು ಈತನ ಲಗ್ನಕ್ಕೆ ಏಕಾದಶದಲ್ಲಿ ಇದ್ದಾರೆ. ಆ ಕಾರಣಕ್ಕೆ ಮೊದಲು ಆಲೋಚನೆ ಬರುವುದು ನೀರು, ಎಲೆಕ್ಟ್ರಿಸಿಟಿ ಬಗ್ಗೆಯೇ. ಹಮಾಸ್ ವಿರುದ್ಧ ಯುದ್ಧದಲ್ಲಿ ಮಾತ್ರವಲ್ಲ, ಈತನನ್ನು ಎದುರು ಹಾಕಿಕೊಳ್ಳುವ ಯಾವುದೇ ಶತ್ರುವಿಗೆ ನೀರು, ವಿದ್ಯುತ್ ಸಿಗದಂತೆ ಮಾಡುವುದು ಸ್ಟ್ರಾಟೆಜಿಯೂ ಹೌದು, ಅದೇ ಈ ವ್ಯಕ್ತಿಯ ಮೂಲ ಸ್ವಭಾವವೂ ಹೌದು.

ಇದನ್ನೂ ಓದಿ: ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಸೈನಿಕರಿಗೆ ಸಹಾಯ ಮಾಡಲು ಯುದ್ಧ ನೌಕೆ ಕಳುಹಿಸಿದ ಅಮೆರಿಕ

ಈ ಯುದ್ಧವನ್ನು ತುಂಬ ದೂರಕ್ಕೆ ಒಯ್ಯುತ್ತಾರೆ

ಬೆಂಜಮಿನ್ ನೆತನ್ಯಾಹು ಈಗ ಘೋಷಿಸಿರುವ ಯುದ್ಧವನ್ನು ತುಂಬ ದೂರಕ್ಕೆ ಒಯ್ಯುತ್ತಾರೆ. ಹಮಾಸ್​​​ಗೆ ಇಸ್ರೇಲ್ ವಿರುದ್ಧ ದಾಳಿ ಮಾಡುವುದಕ್ಕೆ ಸಹಾಯ ಮಾಡಿದ ಕಟ್ಟ ಕಡೆಯ ವ್ಯಕ್ತಿ, ಸಂಸ್ಥೆ, ದೇಶ ಯಾವುದನ್ನೂ ಬಿಡದೆ ನಾಶ ಮಾಡುವ ತನಕ ಸುಮ್ಮನೆ ಕೂರುವ ಪೈಕಿ ಈ ವ್ಯಕ್ತಿ ಅಲ್ಲ. ಅದಕ್ಕೆ ಕಾರಣ ಏನೆಂದರೆ ಜಾತಕದಲ್ಲಿನ ಕುಜನ ಸ್ಥಿತಿ ಮತ್ತು ದೃಷ್ಟಿ. ಈ ವ್ಯಕ್ತಿಗೆ ಮೂತ್ರಕ್ಕೆ ಅಥವಾ ಮೂತ್ರಕೋಶಕ್ಕೆ ಸಂಬಂಧಿಸಿದ ಅನಾರೋಗ್ಯ ಇರಬಹುದು. ಜತೆಗೆ ಮಾನಸಿಕ ಖಿನ್ನತೆಯಿಂದ ಸಹ ಆಗಾಗ ಬಳಲುತ್ತಾರೆ. ಯುದ್ಧ ಮಾಡಬೇಕು ಎಂದಾದಲ್ಲಿ ಎರಡನೇ ಆಲೋಚನೆಯನ್ನೇ ಮಾಡದ ಸ್ವಭಾವ ಕಂಡುಬರುತ್ತದೆ. ಇನ್ನು ಕೇತುವಿನ ಜತೆಗೆ ಬುಧ ಗ್ರಹ ಲಗ್ನದಿಂದ ಹನ್ನೊಂದನೇ ಮನೆಯಲ್ಲಿ ಇದೆ. ಈ ವ್ಯಕ್ತಿ ಯಾರನ್ನೂ ನಂಬುವುದಿಲ್ಲ. ಅಥವಾ ಯಾರದೇ ಸ್ವಭಾವ, ನಿರ್ಧಾರ, ತೀರ್ಮಾನಗಳನ್ನು ಸಂದೇಹದಿಂದಲೇ ನೋಡುತ್ತಾರೆ.

ಇನ್ನು 2 ವರ್ಷ ಬೆಂಜಮಿನ್ ನೆತನ್ಯಾಹು ಯಾವುದೇ ಸವಾಲನ್ನು ಮೆಟ್ಟಿ ನಿಲ್ಲುವಂಥ ಗ್ರಹ ಬಲಗಳನ್ನು ಪಡೆದುಕೊಳ್ಳಲಿದ್ದಾರೆ. ಎರಡು ವರ್ಷದ ನಂತರ ಈ ವ್ಯಕ್ತಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಗೋಚಾರದಲ್ಲಿನ ಎಂಟನೆ ಮನೆಯ ರಾಹು- ಗುರು ಸವಾಲುಗಳನ್ನು ಒಡ್ಡುತ್ತಿದ್ದಾರೆ. ಇವರ ಜನ್ಮ ರಾಶಿಯಲ್ಲೇ ಸಂಭವಿಸಲಿರುವ ಕೇತು ಗ್ರಸ್ತ ಸೂರ್ಯ ಗ್ರಹಣ ಮತ್ತು ಎಂಟನೇ ಮನೆಯಲ್ಲಿ ಸಂಭವಿಸುವ ರಾಹು ಗ್ರಸ್ತ ಚಂದ್ರ ಗ್ರಹಣದಿಂದ ಹಿನ್ನಡೆ ಆಗುವಂತೆ ಮಾಡಿರಬಹುದು. ಆದರೆ ಸದ್ಯಕ್ಕೆ ನಡೆಯುತ್ತಿರುವ ದಶಾ- ಭುಕ್ತಿಯಿಂದಾಗಿ ಈ ವ್ಯಕ್ತಿಯು ಶತ್ರುಗಳನ್ನು ನಾಮಾವಶೇಷ ಮಾಡುವ ಮೂಲಕ ತನ್ನ ವರ್ಚಸ್ಸು, ಕೀರ್ತಿಯನ್ನು ಉಳಿಸಿಕೊಳ್ಳಲಿದ್ದಾರೆ.

ಇರಾನ್ ಪಾಲಿಗೆ ಭವಿಷ್ಯ ಭಯಾನಕ

ಮಧ್ಯಪ್ರಾಚ್ಯದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಇರಾನ್ ಪಾಲಿಗೆ ಭವಿಷ್ಯ ಭಯಾನಕವಾಗಿ ಇರಲಿದೆ. ಮೇಲುನೋಟಕ್ಕೆ ಇಸ್ರೇಲ್- ಪ್ಯಾಲಸ್ತೀನ್ ಮಧ್ಯದ ಕದನದಂತೆ ಸದ್ಯಕ್ಕೆ ಕಾಣುತ್ತಿದೆ. ಆದರೆ ಬೆಂಜಮಿನ್ ನೆತನ್ಯಾಹು ಜಾತಕ ಪರಾಮರ್ಶೆ ಮಾಡಿದಲ್ಲಿ ಇದು ವಿಪರೀತಕ್ಕೆ ಹೋಗುತ್ತದೆ ಮತ್ತು ನಾಶವನ್ನು- ಅದರಲ್ಲೂ ಸಂಪೂರ್ಣ ವಿನಾಶವನ್ನು ಸೂಚಿಸುತ್ತದೆ. ಆದ್ದರಿಂದ ಅಂತ್ಯವೊಂದರ ಆರಂಭಕ್ಕೆ ನಾವೆಲ್ಲ ಸಾಕ್ಷಿ ಆಗುತ್ತೇವೆ ಅಂತ ಹೇಳಬಹುದು.

ಈ ಜಾತಕದ ವಿಶ್ಲೇಷಣೆಯನ್ನು ಹೊರತುಪಡಿಸಿದಂತಹ ವಿಚಾರವೊಂದನ್ನು ಹೇಳಬೇಕಿದೆ. ಅದೇನೆಂದರೆ ಶನಿಯು ವೃಷಭ ರಾಶಿಯನ್ನು ದಾಟುವ ತನಕ ಇಡೀ ಜಗತ್ತು ಜನಾಂಗೀಯ ಕಲಹಗಳಿಗೆ ಸಾಕ್ಷಿ ಆಗಲಿದೆ. 2032ನೇ ಇಸವಿಯಲ್ಲಿ ಈ ಕದನಗಳೆಲ್ಲ ನಿಂತು, ಶಾಂತಿ ನೆಲೆಸಲಿದೆ. ಅಲ್ಲಿಯ ತನಕ ಜಗತ್ತಿನ ಒಂದಲ್ಲ ಒಂದು ಕಡೆ ಜನಾಂಗೀಯ ಕದನಗಳು, ಯುದ್ಧಗಳು ಆಗುತ್ತಲೇ ಇರುತ್ತವೆ. ಇದಕ್ಕೆ ಪರಿಹಾರವೇ ಇಲ್ಲವಾ ಅಂತ ಕೇಳಬಹುದು, ಪರಿಹಾರ ಇದೆ.

ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಮೇಲುನೋಟಕ್ಕೆ ಇದೆಲ್ಲಿಂದ ಎಲ್ಲಿಯ ಸಂಬಂಧ ಎನಿಸುತ್ತದೆ. ಆದರೆ ರಾಹು ಮತ್ತು ಕೇತು ಈ ಎರಡು ಗ್ರಹದಿಂದ ಯುದ್ಧ ಸ್ವಭಾವಕ್ಕೆ ಉತ್ತೇಜನ ದೊರೆಯುತ್ತಿದೆ. ಇವರು ರಾಸಾಯನಿಕ ಪದಾರ್ಥಗಳನ್ನು ಸೂಚಿಸುತ್ತಾರೆ. ನಾವು ಬಳಸುವ ಆಹಾರದಲ್ಲಿನ ರಾಸಾಯನಿಕ ಅಂಶಗಳು ಮನಸ್ಸು ಹಾಗೂ ಬುದ್ಧಿಯ ಮೇಲೆ ಪರಿಣಾಮ ಬೀರಿ, ನಮ್ಮ ನಿರ್ಧಾರ- ತೀರ್ಮಾನಗಳನ್ನು ಪ್ರಭಾವಿಸುತ್ತವೆ. ಆದ್ದರಿಂದ ಸಾತ್ವಿಕ- ಸಾವಯವ ಆಹಾರ ಸೇವನೆಯು ಕೂಡ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಣಮಿಸುತ್ತದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:15 pm, Fri, 13 October 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್