Horoscope: ರಾಶಿಭವಿಷ್ಯ, ಈ ರಾಶಿಯವರು ಅಲ್ಪ ಲಾಭಕ್ಕೆ ತೃಪ್ತಿ ಪಡಬೇಕಾಗುವುದು, ಸ್ತ್ರೀಯರ ವಿಚಾರದಲ್ಲಿ ಜಾಗ್ರತೆ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರು ಅಲ್ಪ ಲಾಭಕ್ಕೆ ತೃಪ್ತಿ ಪಡಬೇಕಾಗುವುದು, ಸ್ತ್ರೀಯರ ವಿಚಾರದಲ್ಲಿ ಜಾಗ್ರತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 14 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:47 ರಿಂದ 03:16ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53ರ ವರೆಗೆ.

ಮೇಷ ರಾಶಿ: ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತೊಂದರೆ ಆದೀತು.‌ ಮನೆಯನ್ನು ಬದಲಿಸಬೇಕಾಗುವುದು. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು. ನಿಮ್ಮದಲ್ಲದ ದ್ರವ್ಯವನ್ನು ನೀವು ಇಟ್ಟುಕೊಳ್ಳಲು ಬಯಸುವುದಿಲ್ಲ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಆಗದು. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸುವಿರಿ. ಯಾರಾದರೂ ನಿಮ್ಮನ್ನು ಕೆರಳಿಸುವಂತೆ ಮಾಡಿಯಾರು. ಕಾರ್ತಿಕೇಯನ ಸ್ಮರಣೆ ಅತ್ಯವಶ್ಯಕ.

ವೃಷಭ ರಾಶಿ: ನಿಮಗೆ‌ ಇಷ್ಟವಾದ ಸ್ಥಳಕ್ಕೆ ನೀವು ಹೋಗಲಿದ್ದೀರಿ. ಸಮಯವನ್ನು ನೀವು ವ್ಯರ್ಥ ಮಾಡಿಕೊಳ್ಳುವಿರಿ. ಸದುಪಯೋಗ‌ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು.‌ ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ‌ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳಬಹುದು. ಕಛೇರಿಯ ಕೆಲಸಗಳನ್ನು ಮುಗಿಸಲು ಹೆಚ್ಚು ಸಮಯವನ್ನು ತೆಗದುಕೊಳ್ಳುವಿರಿ. ನಿಮ್ಮ ಹಳೆಯ ವಸ್ತುಗಳನ್ನು ಯಾರಿಗಾದರೂ ನಿಶ್ಶುಲ್ಕವಾಗಿ ಕೊಡುವಿರಿ. ನಿಮ್ಮ ವಿವಾಹದ ಬಗ್ಗೆ ಬಿಸಿಬಿಸಿ ಚರ್ಚೆಯು ಮನೆಯಲ್ಲಿ ನಡೆಯುವುದು. ಇಂದು ಯಾರಾದರೂ ನಿಮ್ಮ ಸಹಾಯಕ್ಕೆ ಬರಬಹುದು.

ಮಿಥುನ ರಾಶಿ: ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಹಿಳೆಯರು ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುವುದು. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು. ಕುಟುಂಬದ ಜೊತೆ ಬಹಳ ದಿನಗಳ ಅನಂತರ ಸಂಯೋಷದ ಸಮಯವನ್ನು ಕಳೆಯುವಿರಿ. ಸಂಗಾತಿಯನ್ನು ಹೂಡಿಕೆಗೆ ಪ್ರೇರಿಸುವಿರಿ. ವಿದ್ಯಾರ್ಥಿಗಳ ಪ್ರತಿಭೆ ಪುರಸ್ಕಾರವು ಲಭ್ಯವಾಗುವುದು. ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಪ್ರಾಮಾಣಿಕತೆಯು ನಿಮ್ಮನ್ನು ಗೆಲ್ಲಿಸುವುದು.

ಕರ್ಕ ರಾಶಿ: ಮಕ್ಕಳ ವಿದ್ಯಾಭ್ಯಾಸವು ನಿಮಗೆ ಸಮಾಧಾನ ತರದು. ‌ಸಮಾರಂಭಗಳಿಗೆ ಹೋಗುವ ಮನಸ್ಸಾದೀತು.‌ ನಿಮ್ಮ ಭಾವನೆಗಳನ್ನು ಯಾರ ಜೊತೆಯೂ ಪ್ರಕಟಗೊಳಿಸುವುದಿಲ್ಲ. ಅಲ್ಪ ಲಾಭಕ್ಕೆ ನೀವು ತೃಪ್ತಿ ಪಡಬೇಕಾಗುವುದು. ಸ್ತ್ರೀಯರ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರಬೇಕಾಗುವುದು. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ. ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆಗಳು ಆಗಬಹುದು. ಇಂದು ನೀವು ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ. ಅತಿಥಿ ಸತ್ಕಾರವನ್ನು ಮಾಡಲು ಉತ್ಸಾಹವಿರುವುದು. ಉದ್ಯಮಕ್ಕೆ ಸಂಬಂಧಿಸಿದಂತೆ ನಿಮ್ಮ ಯೋಜನೆಯನ್ನು ಯಾರಾದರೂ ಬದಲಿಸಿಯಾರು.

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ