Horoscope: ರಾಶಿಭವಿಷ್ಯ, ನಿಮ್ಮ ಮುಂದಿನ ಕಾರ್ಯಗಳಿಗೆ ತೊಂದರೆಯಾಗುವಂತೆ ತೋರುವುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:47 ರಿಂದ 03:16ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53ರ ವರೆಗೆ.
ಧನು ರಾಶಿ : ನಿಮ್ಮ ಪ್ರೇಮವು ವಿಪರೀತ ಹೊದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಬಾರದಿರುವ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ವಿಧಿಚಿತ್ತದಂತೆ ಆಗುತ್ತದೆ ಎಂದು ಕೈ ಚೆಲ್ಲಿ ಕೂರುವಿರಿ. ಕಛೇರಿಯ ಒತ್ತಡದಿಂದ ಬೇರೆ ಯೋಚನೆಯ ಕಡೆ ಮನಸ್ಸು ಹೋಗದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯ ಸಂಭವವಿದೆ. ಪ್ರಭಾವೀ ವ್ಯಕ್ತಿಗಳನ್ನು ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಳ್ಳುವಿರಿ. ಕೆಟ್ಟ ಮಾರ್ಗವನ್ನು ನೀವು ಗೊತ್ತಿಲ್ಲದೇ ಅನುಸರಿಸುವಿರಿ.
ಮಕರ ರಾಶಿ : ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಸಮಾರಂಭದಲ್ಲಿ ನೀವು ಭಾಗವಹಿಸಲು ಉತ್ಸುಕರಾಗಿರುವಿರಿ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು. ದೂರ ಪ್ರಯಾಣದಿಂದ ಸುಖ ಪಡುವಿರಿ. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ವಿಳಂಬವಾಗಿ ನಿಮ್ಮ ಮುಂದಿನ ಕಾರ್ಯಗಳಿಗೆ ತೊಂದರೆಯಾಗುವಂತೆ ತೋರುವುದು. ಯಾರಿಂದಲೋ ಅಧ್ಯಾತ್ಮದ ಕಡೆ ಪ್ರಭಾವಿತರಾಗುವಿರಿ. ದೀರ್ಘಕಾಲದ ಗೆಳೆತನವು ಕಲಹದಲ್ಲಿ ಮುಕ್ತಾಯವಾಗಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಸೂಕ್ತ ಚಿಕಿತ್ಸೆ ನೀಡಿ. ಮಕ್ಕಳ ಏಕಾಗ್ರತೆಗೆ ತಜ್ಞರಿಂದ ಸಲಹೆ ಪಡೆಯಿರಿ.
ಕುಂಭ ರಾಶಿ : ಉದ್ಯೋಗದಲ್ಲಿ ಉನ್ನತ ಸ್ತರವನ್ನು ನೀವು ಏರುವ ಸನ್ನಿವೇಶವು ಸೃಷ್ಟಿಯಾಗುವುದು. ಎಲ್ಲರ ಒತ್ತಾಯಕ್ಕೆ ನೂತನ ವಾಹನದ ಖರೀದಿಗೆ ಮನಸ್ಸು ಮಾಡುವಿರಿ. ನಿಮ್ಮ ಔದಾರ್ಯವು ದುರ್ಬಳಕೆ ಆಗುವುದು. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಮಕ್ಕಳಿಗೆ ಭವಿಷ್ಯದ ಬಗ್ಗೆ ಕಲ್ಪನೆಯನ್ನು ಕೊಡುವಿರಿ. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು. ಆಸ್ತಿಯ ವಿಚಾರವಾಗಿ ವ್ಯರ್ಥ ವಾಗ್ವಾದಗಳನ್ನು ಮಾಡುವ ಬದಲು ಕಾನೂನಾತ್ಮಕ ಕ್ರಮಗಳಿಂದ ಅವುಗಳನ್ನು ಸರಿ ಮಾಡಿಕೊಳ್ಳಿ. ಔಚಿತ್ಯಯುಕ್ತವಾದ ಮಾತಿನಿಂದ ನಿಮಗೆ ಗೌರವವು ಸಿಗುವುದು. ನೀಲಕಂಠನ ಆರಾಧನೆಯನ್ನು ಮಾಡಿ.
ಮೀನ ರಾಶಿ : ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಬೇಡದ ವಿಚಾರಗಳನ್ನು ಮಾತನಾಡುತ್ತ ಇರುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ತೊಡಗಿ. ಪ್ರೀತಿಯಿಂದ ಹೇಳಿದರೆ ನಿಮ್ಮ ಕೆಲಸವು ಸಲೀಸಾಗಿ ಆಗುವುದು. ಅನ್ಯಾನ್ಯ ಆಲೋಚನೆಯನ್ನು ಮಾಡುವ ಮನಸ್ಸಿಗೆ ಸರಿಯಾದ ಕೆಲಸವನ್ನು ಕೊಡಿ. ಅನುರೂಪವಾದ ಸಂಗಾತಿಯ ಅನ್ವೇಷಣೆಯನ್ನು ಮಾಡುವಿರಿ. ವಿದ್ಯೆಯು ನಿಮ್ಮ ಬಳಕೆಗೆ ಬರಲಿದೆ.
-ಲೋಹಿತಶರ್ಮಾ – 8762924271 (what’s app only)