ಗಾಜಾದಲ್ಲಿ ಹಮಾಸ್​ ಸೇನಾ ಕಮಾಂಡರ್​ನ ಗುರಿಯಾಗಿಸಿಕೊಂಡು ಇಸ್ರೇಲ್​ ದಾಳಿ, 90 ಮಂದಿ ಸಾವು

|

Updated on: Jul 14, 2024 | 9:21 AM

ಗಾಜಾ ಪಟ್ಟಿಯ ದಕ್ಷಿಣ ಖಾನ್ ಯೂನಿಸ್​ ನಗರದ ಮೇಲೆ ಶನಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್​ನ ಸಶಸ್ತ್ರ ವಿಭಾಗದ ಮುಖ್ಯಸ್ಥ ಮುಹಮ್ಮದ್ ದೀಫ್​ ಸೇರಿದಂತೆ 90ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಸ್ಪಷ್ಟವಾಗಿಲ್ಲ.

ಗಾಜಾದಲ್ಲಿ ಹಮಾಸ್​ ಸೇನಾ ಕಮಾಂಡರ್​ನ ಗುರಿಯಾಗಿಸಿಕೊಂಡು ಇಸ್ರೇಲ್​ ದಾಳಿ, 90 ಮಂದಿ ಸಾವು
ಇಸ್ರೇಲ್ ಸೇನೆ
Follow us on

ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮುಂದುವರೆದಿದೆ. ಇಸ್ರೇಲ್ ದಕ್ಷಿಣ ಗಾಜಾ ಪಟ್ಟಿಯಲ್ಲಿ ಹಮಾಸ್‌ನ ಮಿಲಿಟರಿ ಕಮಾಂಡರ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು 90 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಸ್ರೇಲ್ ದಾಳಿ ನಡೆದ ಪ್ರದೇಶದಲ್ಲಿ ತನ್ನ ಸೇನಾ ಕಮಾಂಡರ್ ಮೊಹಮ್ಮದ್ ಡೀಫ್ ಇದ್ದಾನೆ ಎಂಬ ಇಸ್ರೇಲ್ ಹೇಳಿಕೆಯನ್ನು ಹಮಾಸ್ ತಿರಸ್ಕರಿಸಿದೆ.

ಸಾವಿರಾರು ಪ್ಯಾಲೆಸ್ತೀನಿಯರು ಸುರಕ್ಷಿತ ಎಂದು ಸೇನೆ ಘೋಷಿಸಿದ್ದ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಡೀಫ್ ಮತ್ತು ಹಮಾಸ್‌ನ ಎರಡನೇ ಕಮಾಂಡರ್ ರಾಫಾ ಸಲಾಮಾ ಸಾವನ್ನಪ್ಪಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಕ್ಟೋಬರ್ 7 ರ ದಾಳಿಯ ಪ್ರಮುಖ ಸಂಚುಕೋರ ಮೊಹಮ್ಮದ್ ದೀಫ್ ಎಂದು ಹೇಳಲಾಗುತ್ತದೆ. ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ದಾಳಿಯಲ್ಲಿ 1,200 ಮಂದಿ ಸಾವನ್ನಪ್ಪಿದ್ದರು.ನಂತರ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾಯಿತು.

ಮತ್ತಷ್ಟು ಓದಿ: ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ, 200ಕ್ಕೂ ಅಧಿಕ ಶವಗಳು ಪತ್ತೆ

ಡೀಫ್ ಹಲವಾರು ವರ್ಷಗಳಿಂದ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಹಿಂದೆ ಹಲವಾರು ಇಸ್ರೇಲಿ ದಾಳಿಗಳಿಂದ ತಪ್ಪಿಸಿಕೊಂಡಿದ್ದಾರೆ. ದಾಳಿಯಲ್ಲಿ ಕನಿಷ್ಠ 90 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 300 ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇತ್ತೀಚೆಗಷ್ಟೇ ಗಾಜಾದಲ್ಲಿ 70ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿರುವುದು ಗಮನಾರ್ಹ.
ಇಸ್ರೇಲ್‌ಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ ಅರ್ಜೆಂಟೀನಾ ಶುಕ್ರವಾರ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು. ಪ್ಯಾಲೆಸ್ತೀನ್ ಗುಂಪಿಗೆ ಸಂಬಂಧಿಸಿದ ಹಣಕಾಸು ಆಸ್ತಿಗಳನ್ನು ಫ್ರೀಜ್ ಮಾಡಲು ಸಹ ಆದೇಶಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ