AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೊನಾಲ್ಡ್​ ಟ್ರಂಪ್ ಕಿವಿಗೆ ತಾಗಿದ್ದು ಬುಲೆಟ್​ ಅಲ್ಲ, ಗಾಜಿನ ಚೂರುಗಳು

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕಿವಿಗೆ ತಾಗಿದ್ದು ಬುಲೆಟ್​ ಅಲ್ಲ ಗಾಜಿನ ಚೂರುಗಳು ಎನ್ನುವ ಮಾಹಿತಿ ಲಭ್ಯವಾಗಿದೆ. ದಾಳಿಕೋರ ರೈಫಲ್​ ಹಿಡಿದು ಕಟ್ಟಡದ ಮೇಲೆ ಕುಳಿತು ಗುಂಡು ಹಾರಿಸಿದ್ದ, ದಾಳಿ ಕೆಲವೇ ಸೆಕೆಂಡುಗಳಲ್ಲಿ ದಾಳಿಕೋರನನ್ನು ಹತ್ಯೆಗೈಯಲಾಗಿದೆ. ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ತನ್ನ ಮೇಲಿನ ದಾಳಿಯನ್ನು ವಿವರಿಸಿದ್ದ ಟ್ರಂಪ್ ಕಿವಿಗೆ ಗುಂಡು ಚುಚ್ಚಿದಂತೆ ಭಾಸವಾಗಿತ್ತು ಎಂದು ಹೇಳಿದ್ದರು.

ಡೊನಾಲ್ಡ್​ ಟ್ರಂಪ್ ಕಿವಿಗೆ ತಾಗಿದ್ದು ಬುಲೆಟ್​ ಅಲ್ಲ, ಗಾಜಿನ ಚೂರುಗಳು
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Jul 14, 2024 | 12:34 PM

Share

ಅಮೆರಿಕದ ಪನ್ಸಿಲ್ವೇನಿಯಾದ​ ರ‍್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೂ ಗಾಯಗಳಾಗಿವೆ ಆದರೆ ಅವರಿಗೆ ತಗುಲಿದ್ದು ಬುಲೆಟ್​ ಅಲ್ಲ ಗಾಜಿನ ಚೂರುಗಳು ಎನ್ನುವ ಮಾಹಿತಿ ಲಭ್ಯವಾಗಿದೆ. ದಾಳಿಕೋರ ರೈಫಲ್​ ಹಿಡಿದು ಕಟ್ಟಡದ ಮೇಲೆ ಕುಳಿತು ಗುಂಡು ಹಾರಿಸಿದ್ದ, ದಾಳಿ ಕೆಲವೇ ಸೆಕೆಂಡುಗಳಲ್ಲಿ ದಾಳಿಕೋರನನ್ನು ಹತ್ಯೆಗೈಯಲಾಗಿದೆ.

ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ತನ್ನ ಮೇಲಿನ ದಾಳಿಯನ್ನು ವಿವರಿಸಿದ್ದ ಟ್ರಂಪ್ ಕಿವಿಗೆ ಗುಂಡು ಚುಚ್ಚಿದಂತೆ ಭಾಸವಾಗಿತ್ತು ಎಂದು ಹೇಳಿದ್ದರು ಆದರೆ ಕೆಲವು ವರದಿಗಳು ಟ್ರಂಪ್ ಅವರ ಕಿವಿಗೆ ಗಾಜಿನ ಚೂರುಗಳು ತಗುಲಿ ಗಾಯವಾಗಿದೆ ಎಂದು ಹೇಳಿವೆ.

ಕೆಲವು ವರದಿಗಳು ಟ್ರಂಪ್​ರನ್ನು ಹತ್ಯೆ ಮಾಡುವುದಕ್ಕಾಗಿಯೇ ದಾಳಿ ನಡೆದಿತ್ತು ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ ಗಾಜಿನ ಚೂರುಗಳಿಂದ ಟ್ರಂಪ್ ಗಾಯಗೊಂಡಿದ್ದಾರೆ. ಬುಲೆಟ್​ ಟ್ರಂಪ್​ಗೆ ತಾಗಲಿಲ್ಲ ಆದರೆ ಟೆಲಿಪ್ರಾಂಪ್ಟರ್​ಗೆ ತಗುಲಿತ್ತು, ಅದರ ಗಾಜು ಒಡೆದು ಟ್ರಂಪ್​ ಕಿವಿಗೆ ಚುಚ್ಚಿಕೊಂಡಿತ್ತು ಎನ್ನಲಾಗಿದೆ. ಕಾರ್ಯಕ್ರಮ ನಡೆಯುತ್ತಿದ್ದ 200-300 ಯಾರ್ಡ್ ದೂರದಿಂದ ಗುಂಡಿನ ದಾಳಿ ನಡೆದಿದೆ. ಎತ್ತರದ ಕಟ್ಟಡದ ಮೇಲೆ ಕುಳಿತು ಏರ್ ಗನ್ ಮೂಲಕ ದಾಳಿ ನಡೆಸಲಾಗಿದೆ.

ಒಟ್ಟು 8 ಸುತ್ತಿನ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಸಾರ್ವಜನಿಕ ಹತ್ಯೆಯಾಗಿರೋ ಮಾಹಿತಿ ಲಭ್ಯವಾಗಿದೆ. ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಖಂಡಿಸಿದ್ದಾರೆ.

ಮತ್ತಷ್ಟು ಓದಿ: ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ಯುವಕನಿಗೆ ಬರೀ 20 ವರ್ಷ: ಎಫ್‌ಬಿಐ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಮಾರಣಾಂತಿಕ ದಾಳಿಯಿಂದ ನಾನು ತೀವ್ರ ಕಳವಳಗೊಂಡಿದ್ದೇನೆ. ಇಂತಹ ಕೃತ್ಯಗಳನ್ನು ಬಲವಾಗಿ ಖಂಡಿಸಬೇಕು. ಅವರ ಶೀಘ್ರ ಮತ್ತು ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ರಾಹುಲ್ ಗಾಂಧಿ ಹಾರೈಸಿದ್ದಾರೆ.

ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಟ್ರಂಪ್ ಮೇಲೆ ಬುಲೆಟ್ ಹಾರಿದ ತಕ್ಷಣ, ಭದ್ರತಾ ಪಡೆಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಪ್ರತಿದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಶೂಟರ್‌ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ