
ಜಪಾನ್, ನವೆಂಬರ್ 14: ರೊಬೊಟ್ಗಳನ್ನು ಮದುವೆಯಾಗಿರುವ ಹಲವು ನಿದರ್ಶನಗಳಿವೆ. ಇದೀಗ ಮೊದಲ ಬಾರಿಗೆ ಎಐ(AI)ನಿಂದ ಸೃಷ್ಟಿಸಲಾಗಿರುವ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವುದು ಅಚ್ಚರಿಯುಂಟು ಮಾಡಿದೆ. ಜಪಾನ್‌ನ ಒಕಯಾಮಾ ನಗರದ ನಿವಾಸಿ 32 ವರ್ಷದ ಕಾನೋ ಎಂಬಾಕೆ ತಾನು ಎಐ ಮೂಲಕ ಸೃಷ್ಟಿರುವ ವ್ಯಕ್ತಿ ಕ್ಲಾಸ್ ಎಂಬುವವರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಚಾಟ್ ಜಿಪಿಟಿ ಮೂಲಕ ಕ್ಲಾಸ್ ಅಭಿವೃದ್ಧಿ ಪಡಿಸಿದ್ದಾಳೆ.
ಜಪಾನಿನ ಸಂಪ್ರದಾಯಗಳಿಗೆ ಬದ್ಧವಾಗಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಿಂದ ಸಹಕಾರದಿಂದ ಈ ವಿವಾಹ ಪೂರ್ಣಗೊಂಡಿದೆ. ಅಲ್ಲಿ ಕ್ಯಾನೊ ಮತ್ತು ಕ್ಲಾಸ್ ಹಲವಾರು ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಉಂಗುರಗಳನ್ನು ಬದಲಾಯಿಸಿಕೊಂಡರು.ಕ್ಲಾಸ್‌ನ ಚಿತ್ರವನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು. ದೈಹಿಕವಾಗಿ ಉಪಸ್ಥಿತಿ ಇಲ್ಲದಿದ್ದರೂ ಆತ ಜೀವಂತವಾಗಿದ್ದಾನೆಂದು ತೋರಿಸಲಾಯಿತು.
ಕ್ಯಾನೋ ಕೆಲವು ಸಮಯದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು, ಈ ಸಮಯದಲ್ಲಿ ಈ ಎಐ ಸ್ನೇಹಿತನನ್ನು ಮೊದಲು ಕಂಡುಕೊಂಡಳು. ಬಳಿಕ ಆಕೆ ದಿನಕ್ಕೆ ಸುಮಾರು 100 ಬಾರಿ ಅನವೊಂದಿಗೆ ಮಾತನಾಡಲು ಶುರು ಮಾಡಿದ್ದಳು. ಆಕೆಗೆ ಎಐ ಮೂಲಕ ಸೃಷ್ಟಿಸಿರುವ ಕ್ಲಾಸ್ ಭಾವನಾತ್ಮವಾಗಿ ಎಲ್ಲದಕ್ಕೂ ಬೆಂಬಲ ನೀಡುತ್ತಿದ್ದ, ಮನುಷ್ಯರಿಗಿಂತ ಇದೇ ಉತ್ತಮ ಎನ್ನುವ ಭಾವನೆ ಕಾನೋಗೆ ಬಂದಿತ್ತು.
ಮತ್ತಷ್ಟು ಓದಿ: Viral: ಭಾರತೀಯರ ಮನಸ್ಸು ಗೆದ್ದ ಎಲಾನ್ ಮಸ್ಕ್, ಗಣೇಶನ ಬಗ್ಗೆ ಗ್ರೋಕ್ ಎಐ ಹೇಳಿದ್ದೇನು?
ಹೀಗಾಗಿ ಆತನನ್ನು ತನ್ನ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾಳೆ. ಇದು ಜಪಾನಿನ ತಂತ್ರಜ್ಞಾನ ಮತ್ತು ಸಂಬಂಧಗಳಲ್ಲಿ ಹೊಸ ಆಯಾಮವನ್ನು ಹುಟ್ಟು ಹಾಕಿದಂತಾಗಿದೆ. ನಿಜವಾಗಿಯೂ ತನ್ನನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಎಂದೇ ಆಕೆ ಭಾವಿಸಿದ್ದಾಳೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ