ಅಧ್ಯಕ್ಷರಾಗಿ ಜೋ ಬೈಡೆನ್: ಅಧಿಕೃತವಾಗಿ ಘೋಷಿಸಿದ ಅಮೆರಿಕ ಸಂಸತ್

|

Updated on: Jan 07, 2021 | 7:12 PM

ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಪ್ರತಿಭಟನೆಯ ನಡುವೆಯೇ ಅಮೇರಿಕಾ ಕಾಂಗ್ರೆಸ್ 46 ನೇ ಅಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.

ಅಧ್ಯಕ್ಷರಾಗಿ ಜೋ ಬೈಡೆನ್: ಅಧಿಕೃತವಾಗಿ ಘೋಷಿಸಿದ ಅಮೆರಿಕ ಸಂಸತ್
ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್
Follow us on

ವಾಷಿಂಗ್ಟನ್ ಡಿ ಸಿ: ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಜೋ ಬೈಡೆನ್​ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್​ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಅಮೆರಿಕ ಸಂಸತ್ ಸಭೆಯ ಅಧಿಕೃತ ಘೋಷಣೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ 306 ಮತಗಳಿಸಿದ್ದು, ಡೊನಾಲ್ಟ್ ಟ್ರಂಪ್ ಬಣ 232 ಮತ ಗಳಿಸಲಷ್ಟೇ ಶಕ್ತವಾಗಿದೆ. ಡೊನಾಲ್ಟ್ ಟ್ರಂಪ್ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಕಟ್ಟಡದೊಳಗೆ ನುಗ್ಗಿ ವಿರೋಧಿಸಿದ ಕೆಲ ಹೊತ್ತಿನ ನಂತರ ಅಮೆರಿಕ ಕಾಂಗ್ರೆಸ್ ಜೋ ಬೈಡೆನ್ ಆಯ್ಕೆಯನ್ನು ಪ್ರಮಾಣೀಕರಿಸಿದೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರ ಹಿಂಸಾತ್ಮಕ ಪ್ರತಿಭಟನೆಯನ್ನು ಖಂಡಿಸಿರುವ ನಿಯೋಜಿತ ಅಧ್ಯಕ್ಷ ಜೋ ಬೈಡೆನ್, ‘ಅಮೆರಿಕದ ಇತಿಹಾಸದಲ್ಲೆ ಇದೊಂದು ಕರಾಳ ಕ್ಷಣ ಎಂದಿದ್ದಾರೆ.

ಪೆನ್​ಸಿಲ್ವೇನಿಯಾ ಮತ್ತು ಅರಿಜೊನಾದ ಫಲಿತಾಂಶದ ಕುರಿತು ರಿಪಬ್ಲಿಕನ್ನರು ಎತ್ತಿದ ಆಕ್ಷೇಪವನ್ನು ತಳ್ಳಿಹಾಕಿರುವ ಅಮೆರಿಕ ಸಂಸತ್​ ಘೋಷಣೆಯ ಪ್ರಕಾರ ಜನವರಿ 20ರಂದುಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಲಿದ್ದಾರೆ.

ಜನವರಿ 20ರಂದು ಅಧಿಕಾರ ಹಸ್ತಾಂತರಿಸುವೆ: ಡೊನಾಲ್ಡ್ ಟ್ರಂಪ್
ಚುನಾವಣಾ ಫಲಿತಾಂಶವನ್ನು ಒಪ್ಪದಿದ್ದರೂ ಅಮೆರಿಕ ಅಧ್ಯಕ್ಷ ಸ್ಥಾನವನ್ನು ಜನವರಿ 20ರಂದು ಹಸ್ತಾಂತರಿಸುವುದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆದರೆ, ಚುನಾವಣೆಯು ಪ್ರಾಮಾಣಿಕ ಫಲಿತಾಂಶ ನೀಡಿದೆ ಎಂದು ಒಪ್ಪವುದಿಲ್ಲ ಎಂದು ಅವರು ಹೇಳಿದ್ದಾರೆ.

78 ವರ್ಷದ ಜೋ ಬೈಡೆನ್ ಅಮೆರಿಕ ಸಂಯುಕ್ತ ಸಂಸ್ಥಾನದ 46 ನೇ ಅಧ್ಯಕ್ಷರಾಗಲಿದ್ದು, ಅವರು ಅಧಿಕಾರ ಘೋಷಣೆಗೂ ಮುನ್ನ ಅಮೆರಿಕ ಕ್ಯಾಪಿಟಲ್ ಕಟ್ಟಡ 4 ಸಾವಿಗೆ ಸಾಕ್ಷಿಯಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಬರಾಕ್ ಓಬಾಮಾ, ಜಾರ್ಜ್ ಡಬ್ಲ್ಯು ಬುಷ್, ಬಿಲ್ ಕ್ಲಿಂಟನ್ ಮತ್ತು ಜಿಮ್ಮಿ ಕಾರ್ಟರ್ ಈ ಹಿಂಸಾಚಾರವನ್ನು ಬಲವಾಗಿ ಖಂಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ವೇಳೆ ಹಿಂಸಾಚಾರ: ಮಹಿಳೆ ಸೇರಿ ನಾಲ್ವರು ಸಾವು


Published On - 6:52 pm, Thu, 7 January 21