ಅಪ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ: ಸೈನ್ಯ ಹಿಂಪಡೆಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ ಜೋ ಬೈಡನ್​

| Updated By: Lakshmi Hegde

Updated on: Aug 11, 2021 | 5:31 PM

ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಹೋರಾಟಗಾರರು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದೊಂದು ಯುದ್ಧಭೂಮಿಯಂತಾಗಿದ್ದು, ಈಗಾಗಲೇ ಹಲವು ಗಣ್ಯರ ಜೀವ ಹೋಗಿದೆ.

ಅಪ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ: ಸೈನ್ಯ ಹಿಂಪಡೆಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ ಜೋ ಬೈಡನ್​
ಜೋ ಬೈಡನ್​
Follow us on

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು (Taliban Fighters) ತಮ್ಮ ಬಾಹುಳ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಹೊತ್ತಲ್ಲಿ, ಯುಎಸ್​ ಅಧ್ಯಕ್ಷ ಜೋ ಬೈಡನ್​ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಅಫ್ಘಾನಿಸ್ತಾನ (Afghanistan)ದಿಂದ ತಮ್ಮ ಸೇನೆಯನ್ನು ಹಿಂಪಡೆಯುವ ತೀರ್ಮಾನವನ್ನು ಬದಲಿಸುವುದಿಲ್ಲ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ಸೆಪ್ಟೆಂಬರ್​ 11ರೊಳಗೆ ಯುಎಸ್​ ಸೇನೆ (US Military)ಯನ್ನು ಹಿಂಪಡೆಯಬೇಕು ಎಂದು ಅಧ್ಯಕ್ಷ ಜೋ ಬೈಡನ್​ ಆದೇಶಿಸಿದ್ದಾರೆ. ಹಾಗೇ, ಯುದ್ಧ ಸನ್ನಿವೇಶ ಇರುವ ಅಫ್ಘಾನಿಸ್ತಾನದಿಂದ ಈಗಾಗಲೇ ಶೇ.90ರಷ್ಟು ಸೈನಿಕರನ್ನು ವಾಪಸ್ ಕರೆಸಿಕೊಂಡಿದ್ದಾಗಿ, ಯುಎಸ್​ ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗನ್​ ತಿಳಿಸಿದೆ.

ನಾವು ಕಳೆದ 20ವರ್ಷಗಳಲ್ಲಿ 3 ಲಕ್ಷಕ್ಕೂ ಅಧಿಕ ಅಫ್ಘಾನ್​ ಸೈನಿಕರಿಗೆ ತರಬೇತಿ ನೀಡಿದ್ದೇವೆ..ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದೇವೆ. ಅದಕ್ಕಾಗಿ ಟ್ರಿಲಿಯನ್ಸ್​ ಡಾಲರ್​ಗಳಷ್ಟು ಹಣ ವ್ಯಯಿಸಿದ್ದೇವೆ. ಅಮೆರಿಕ ಸೇನಾಪಡೆಯ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಜೋ ಬೈಡನ್​ ಹೇಳಿದ್ದಾರೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದಲ್ಲಿ ಉನ್ನತ ರಾಜಕೀಯ ಪಕ್ಷಗಳು ಒಂದಾಗಬೇಕು ಎಂದೂ ತಿಳಿಸಿದ್ದಾರೆ.

ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಹೋರಾಟಗಾರರು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದೊಂದು ಯುದ್ಧಭೂಮಿಯಂತಾಗಿದ್ದು, ಈಗಾಗಲೇ ಹಲವು ಗಣ್ಯರ ಜೀವ ಹೋಗಿದೆ. ಈ ಮಧ್ಯೆ ಬೈಡನ್​ ತಾವು ಸೇನೆ ವಾಪಸ್​ ಪಡೆಯುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ನಮ್ಮ ಕಡೆಯಿಂದ ಅಗತ್ಯ ಸಹಕಾರ ಇದ್ದೇ ಇರುತ್ತದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಭೇಟಿ ಆಗಲಿರುವ ಸಚಿವ ಆನಂದ್ ಸಿಂಗ್; ಅಸಾಮಾಧಾನ ಬಗೆಹರಿಸುವ ವಿಶ್ವಾಸದಲ್ಲಿ ಬಸವರಾಜ ಬೊಮ್ಮಾಯಿ

Published On - 5:25 pm, Wed, 11 August 21