ಕಮಲಾ ಹ್ಯಾರಿಸ್ ಭಾರತೀಯ ಅಥವಾ ಕಪ್ಪು ವರ್ಣೀಯ, ಡೊನಾಲ್ಡ್​ ಟ್ರಂಪ್ ಪ್ರಶ್ನೆ

|

Updated on: Aug 01, 2024 | 9:48 AM

ಕಮಲಾ ಹ್ಯಾರಿಸ್ ತಮ್ಮ ಜನಾಂಗವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಸಂದರ್ಶನವೊಂದರಲ್ಲಿ ಟ್ರಂಪ್, ಕಮಲಾ ಹ್ಯಾರಿಸ್ ಕಪ್ಪು ವರ್ಣೀಯರೋ ಅಥವಾ ಭಾರತೀಯರೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಭಾರತೀಯ ಅಥವಾ ಕಪ್ಪು ವರ್ಣೀಯ, ಡೊನಾಲ್ಡ್​ ಟ್ರಂಪ್ ಪ್ರಶ್ನೆ
ಕಮಲಾ ಹ್ಯಾರಿಸ್
Follow us on

ಅಮೆರಿಕದ ಅಧ್ಯಕ್ಷಗಾದಿಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್​ ಜನಾಂಗದ ಕುರಿತು ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪ್ರಶ್ನೆ ಮಾಡಿದ್ದಾರೆ. ದೇಶವನ್ನು ನಿರಂಕುಶಾಧಿಕಾರದತ್ತ ಕೊಂಡೊಯ್ಯುವ ಡೊನಾಲ್ಡ್​ ಟ್ರಂಪ್ ಅವರನ್ನು ತಡೆಯುವ ಶಕ್ತಿ ಇರುವುದು ಕಮಲಾ ಹ್ಯಾರಿಸ್​ಗೆ ಮಾತ್ರ ಎಂದು ಎಲ್ಲರೂ ಹೇಳುವ ಹೊತ್ತಲ್ಲಿ ಡೊನಾಲ್ಡ್​ ಟ್ರಂಪ್ ಕಮಲಾ ಹ್ಯಾರಿಸ್​ನ ಪ್ರಶ್ನೆ ಮಾಡಿದ್ದಾರೆ.

ನೀವು ಭಾರತೀಯರೋ ಅಥವಾ ಕಪ್ಪು ವರ್ಣೀಯರೋ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಭಾರತೀಯಳೋ ಅಥವಾ ಕಪ್ಪು ವರ್ಣೀಯರೋ ಎಂಬುದು ನನಗೆ ತಿಳಿದಿಲ್ಲ ಆದರೆ ನಾನು ಎರಡನ್ನೂ ಗೌರವಿಸುತ್ತೇನೆ, ಆದರೆ ಆಕೆಯೇ ಈ ಬಗ್ಗೆ ಸ್ಪಷ್ಟವಾಗಿಲ್ಲ, ಮೊದಲಿನಿಂದಲೂ ತಾನು ಭಾರತೀಯಳು ಎಂದು ಹೇಳುತ್ತಾ ಬಂದು ಈಗ ಕಪ್ಪು ವರ್ಣೀಯಳಾಗಿದ್ದಾಳೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ಬಹುಶಃ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರ ಜನಪ್ರಿಯತೆಯ ಬಗ್ಗೆ ಟ್ರಂಪ್ ಆತಂಕಗೊಂಡಿದ್ದಾರೆ.

ಮತ್ತಷ್ಟು ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ: ಉಮೇದುವಾರಿಕೆ ಸಲ್ಲಿಸಿದ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಕಮಲಾ ಹ್ಯಾರಿಸ್ ತನ್ನನ್ನು ಕಪ್ಪು ಮತ್ತು ದಕ್ಷಿಣ ಏಷ್ಯಾದ ಅಮೆರಿಕನ್ ಎಂದು ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತ ಭವನವು ಟ್ರಂಪ್ ಅವರು ನೀಡಿರುವ ಹೇಳಿಕೆ ಅಸಹ್ಯ ಹಾಗೂ ಅತಿರೇಕವಾದದ್ದು ಎಂದು ಹೇಳಿದೆ.
ಏಳು ಸ್ವಿಂಗ್ ರಾಜ್ಯಗಳ ಪೈಕಿ ಆರರಲ್ಲಿ ಅವರ ಬೆಂಬಲಿಗರು ಹೆಚ್ಚಿದ್ದಾರೆ.

ಇದರೊಂದಿಗೆ ಮಿಚಿಗನ್, ಅರಿಜೋನಾ, ವಿಸ್ಕಾನ್ಸಿನ್ ಮತ್ತು ನೆವಾಡಾದಲ್ಲಿ ಕಮಲಾ ಮುಂದಿದ್ದರೆ, ಪೆನ್ಸಿಲ್ವೇನಿಯಾ ಮತ್ತು ಉತ್ತರ ಕೆರೊಲಿನಾದಲ್ಲಿ ಟ್ರಂಪ್ ಮುಂದಿದ್ದಾರೆ. ಜಾರ್ಜಿಯಾದಲ್ಲಿ ಇಬ್ಬರೂ ಸಮಾನವಾಗಿದ್ದಾರೆ.

ಜೋ ಬೈಡನ್ ಕಣದಿಂದ ಹಿಂದೆ ಸರಿದ ಬಳಿಕ 59 ವರ್ಷದ ಕಮಲಾ ಅವರು ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಪಕ್ಷ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಮುಂದಿನ ತಿಂಗಳು ಘೋಷಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಸದ್ಯ ಒಂದು ವಿಶೇಷ ವಾತಾವರಣವಿದೆ, ಕಳೆದೊಂದು ವಾರದಲ್ಲಿ ಅಮೆರಿಕ ರಾಜಕಾರಣದಲ್ಲಿ ಪರಿವರ್ತನೆಯಾಗಿದೆ.

ಮಹಿಳಾ ನಾಯಕತ್ವವನ್ನು ಈಗ ವಿಭಿನ್ನ ರೂಪದಲ್ಲಿ ನೋಡಲಾಗುತ್ತಿದೆ. ಜನಾಂಗೀಯ ವಿಷಯಗಳನ್ನು ಈಗ ಧನಾತ್ಮಕವಾಗಿ ಚರ್ಚಿಸಲಾಗುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ