ಅಮೆರಿಕ ಅಧ್ಯಕ್ಷೀಯ ಚುನಾವಣೆ: ಉಮೇದುವಾರಿಕೆ ಸಲ್ಲಿಸಿದ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಇಂದು, ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸುವ ಫಾರ್ಮ್‌ಗಳಿಗೆ ಸಹಿ ಮಾಡಿದ್ದೇನೆ. ಪ್ರತಿ ಮತವನ್ನು ಗಳಿಸಲು ನಾನು ಶ್ರಮಿಸುತ್ತೇನೆ. ಜನಪರವಾದ ನಮ್ಮ ಅಭಿಯಾನಕ್ಕೆ ನವೆಂಬರ್‌ನಲ್ಲಿ ಗೆಲುವು ಆಗಲಿದೆ ಎಂದು ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಅಧಿಕೃತವಾಗಿ ತಮ್ಮ ಉಮೇದುವಾರಿಕೆಯನ್ನು ಘೋಷಿಸುವ ಕಡತಗಳಿಗೆ ಸಹಿ ಹಾಕುತ್ತಿರುವ ಫೋಟೊವನ್ನು ಕಮಲಾ ಹ್ಯಾರಿಸ್ ಪೋಸ್ಟ್ ಮಾಡಿದ್ದಾರೆ.
ವಾಷಿಂಗ್ಟನ್, ಡಿಸಿ ಜುಲೈ 27: ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris )ಅವರು ಯುಎಸ್ ಅಧ್ಯಕ್ಷೀಯ ಚುನಾವಣೆಗೆ (US presidential elections) ಅಧಿಕೃತವಾಗಿ ತಮ್ಮ ಉಮೇದುವಾರಿಕೆಯನ್ನು ಘೋಷಿಸುವ ಕಡತಗಳಿಗೆ ಸಹಿ ಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಕಡತಗಳಿಗೆ ಸಹಿ ಹಾಕುತ್ತಿರುವ ಫೋಟೊ ಪೋಸ್ಟ್ ಮಾಡಿದ ಕಮಲಾ ಹ್ಯಾರಿಸ್, “ಇಂದು, ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸುವ ಫಾರ್ಮ್‌ಗಳಿಗೆ ಸಹಿ ಮಾಡಿದ್ದೇನೆ. ಪ್ರತಿ ಮತವನ್ನು ಗಳಿಸಲು ನಾನು ಶ್ರಮಿಸುತ್ತೇನೆ. ಜನಪರವಾದ ನಮ್ಮ ಅಭಿಯಾನಕ್ಕೆ ನವೆಂಬರ್‌ನಲ್ಲಿ ಗೆಲುವು ಆಗಲಿದೆ ಎಂದು ಹೇಳಿದ್ದಾರೆ.
ನವೆಂಬರ್ 5 ರಂದು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಹಿಂದೆ ಸರಿದ ನಂತರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
Today, I signed the forms officially declaring my candidacy for President of the United States.
I will work hard to earn every vote.
And in November, our people-powered campaign will win. pic.twitter.com/nIZLnt9oN7
— Kamala Harris (@KamalaHarris) July 27, 2024
ಏತನ್ಮಧ್ಯೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಯುಎಸ್ ಅಧ್ಯಕ್ಷೀಯ ಹುದ್ದೆಗೆ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರನ್ನು ಸಾರ್ವಜನಿಕವಾಗಿ ಅನುಮೋದಿಸಿದರು.
ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಥಮ ಮಹಿಳೆ ಮಿಷೆಲ್ ಒಬಾಮಾ ಅವರು ಕಮಲಾ ಹ್ಯಾರಿಸ್‌ಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ. ಹಾಲಿ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಬರಾಕ್ ಒಬಾಮಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನಲ್ಲಿ ಅವರು “ಈ ವಾರದ ಹಿಂದೆ, ಮಿಷೆಲ್ ಮತ್ತು ನಾನು ನಮ್ಮ ಸ್ನೇಹಿತೆ ಕಮಲಾ ಹ್ಯಾರಿಸ್‌ಗೆ ಕರೆ ಮಾಡಿದ್ದೇವೆ. ಅವರು ಯುನೈಟೆಡ್ ಸ್ಟೇಟ್ಸ್‌ನ ಅದ್ಭುತ ಅಧ್ಯಕ್ಷರಾಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ನಾವು ಅವರಿಗೆ ಹೇಳಿದ್ದೇವೆ. ನಮ್ಮ ದೇಶಕ್ಕೆ ಇದುನಿರ್ಣಾಯಕ ಕ್ಷಣ. ನವೆಂಬರ್‌ನಲ್ಲಿ ಆಕೆ ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಮಲಾ ಅವರು ಅಧ್ಯಕ್ಷರಾಗಿ ಚುನಾಯಿತರಾದರೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಕಪ್ಪುವರ್ಣೀಯ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಂತರ ‘ಎಲ್ಲಿದ್ದಿಯಪ್ಪಾ ಜೋ’ ಅಂತ ಕೇಳುತ್ತಿದ್ದಾರೆ ನೆಟ್ಟಿಗರು
ಕಮಲಾ ಹ್ಯಾರಿಸ್‌ಗೆ ಬೈಡನ್ ಅನುಮೋದನೆ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಅಧ್ಯಕ್ಷ ಜೋ ಬೈಡನ್, ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ್ದಾರೆ. ಜೋ ಬೈಡನ್ ಅವರ ಅನುಮೋದನೆ ಪಡೆದಿರುವುದು ಗೌರವದ ವಿಚಾರ. ಈ ಚುನಾವಣೆಯನ್ನು ಗೆಲ್ಲುವುದು ನನ್ನ ಗುರಿ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ