ಯೆಮನ್: ಕೇರಳ ಮೂಲದ 30 ವರ್ಷದ ನರ್ಸ್ ನಿಮಿಷಪ್ರೀಯಾಳಿಗೆ ಯೇಮನ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದು ಮೆಹದಿಯನ್ನು ಮತ್ತು ಬರಿಸುವ ಔಷಧಿ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ಈಕೆಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ನರ್ಸ್ ನಿಮಿಷಪ್ರೀಯಾ ಆತ ನನಗೆ ಸಿಕ್ಕಾ ಪಟ್ಟೆ ಟಾರ್ಚರ್ ನೀಡುತ್ತಿದ್ದ. ಹಾಗೇನೆ ನನ್ನ ಪಾಸ್‌ಪೋರ್ಟ್ ಅನ್ನು ಬಚ್ಚಿಟ್ಟಿದ್ದ. ಅವನಿಂದ ನನ್ನ ಪಾಸ್‌ಪೋರ್ಟ್ ಪಡೆಯಲು ನಾನು ಅವನಿಗೆ ಮತ್ತು ಬರಿಸುವ ಔಷಧಿ ನೀಡಿದ್ದೆ ಅಷ್ಟೇ. ಆತನನ್ನು ಕೊಲ್ಲುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾಳೆ.
ಈ ನಡುವೆ ಮೆಹದಿಯ ಕುಟುಂಬಸ್ಥರು ಒಂದು ವೇಳೆ ನಿಮಿಷಪ್ರೀಯಾ ಮೆಹದಿಯನ್ನು ಕೊಂದಿದ್ದಕ್ಕೆ 70ಲಕ್ಷರೂ.ಗಳನ್ನು ಬ್ಲಡ್‌ಮನಿಯಾಗಿ ನೀಡಿದರೆ ಅವಳನ್ನು ಕ್ಷಮಿಸುವುದಾಗಿ ಹೇಳಿದೆ.