ಅಮೆರಿಕದಲ್ಲಿ ಭಾರತೀಯ ರಾಯಭಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಖಲಿಸ್ತಾನಿಗಳು

|

Updated on: Nov 27, 2023 | 2:14 PM

ಅಮೆರಿಕಾದ ನ್ಯೂಯಾರ್ಕ್​​​ನ ಗುರುದ್ವಾರದಲ್ಲಿ ಭಾರತೀಯ ರಾಯಭಾರಿ ಅಧಿಕಾರಿ ಸಂಧು ಅವರು ಮೇಲೆ ಖಲಿಸ್ತಾನಿ ಪರವಾದಿಗಳು ಹಲ್ಲೆ ನಡೆಸಿದ್ದಾರೆ.

ಅಮೆರಿಕದಲ್ಲಿ ಭಾರತೀಯ ರಾಯಭಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಖಲಿಸ್ತಾನಿಗಳು
ಭಾರತೀಯ ರಾಯಭಾರಿ ಅಧಿಕಾರಿ ಸಂಧು
Follow us on

ನ್ಯೂಯಾರ್ಕ್, ನ.27: ಅಮೆರಿಕಾದ ನ್ಯೂಯಾರ್ಕ್​​​ನ ಗುರುದ್ವಾರದಲ್ಲಿ ಭಾರತೀಯ ರಾಯಭಾರಿ ಅಧಿಕಾರಿ ಸಂಧು ಅವರ ಮೇಲೆ ಖಲಿಸ್ತಾನಿ ಪರವಾದಿಗಳು ಹಲ್ಲೆ ನಡೆಸಿದ್ದಾರೆ. ತರಂಜಿತ್ ಸಿಂಗ್ ಸಂಧು ಅವರು ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಹಿಕ್ಸ್‌ವಿಲ್ಲೆ ಗುರುದ್ವಾರಕ್ಕೆ ಭೇಟಿ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ತರಂಜಿತ್ ಸಿಂಗ್ ಸಂಧು ಅವರು ಗುರುದ್ವಾರಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು ಎಂದು ಹೇಳಲಾಗಿದೆ.

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಲದಲ್ಲಿ ವೈರಲ್​​​ ಆಗಿದೆ. ಭಾರತ ಉಗ್ರರ ಪಟ್ಟಿಯಲ್ಲಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಾಗೂ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಬಗ್ಗೆ ಭಾರತ ಸರ್ಕಾರದ ವಿರೋಧಿ ನೀತಿ ಬಗ್ಗೆ ಅಸಮಾಧನಗೊಂಡಿರುಬ ಖಲಿಸ್ತಾನಿ ಪರವಾದಿಗಳು ಈ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಗುರುದ್ವಾರದ ಆವರಣದ ಬಳಿ ಭಾರತೀಯ ರಾಯಭಾರಿ ಅಧಿಕಾರಿ ತರಂಜಿತ್ ಸಿಂಗ್ ಸಂಧು ಅವರ ಕಾರು ಪ್ರವೇಶಿಸುತ್ತಿದ್ದಂತೆ ಒಬ್ಬ ವ್ಯಕ್ತಿ ಖಲಿಸ್ತಾನಿ ಧ್ವಜವನ್ನು ಹಿಡಿದುಕೊಂಡು ಅವರ ಮುಂದೆ ಪ್ರತಿಭಟನೆ ಮಾಡಿದ್ದಾನೆ. ಇದರ ಜತೆಗೆ ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಕೆನಡಾ, ಯುಕೆ, ಆಸ್ಟ್ರೇಲಿಯಾ ಮತ್ತು ಯುಎಸ್‌ಯಲ್ಲಿ ಉಗ್ರ ಸಂಘಟನೆಗಳ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಭಾರತದ ಹೇಳಿದೆ.

ಇದನ್ನೂ ಓದಿ: ಪಂಜಾಬ್, ಹರ್ಯಾಣದಲ್ಲಿ ಖಲಿಸ್ತಾನಿ ಉಗ್ರರ ನಂಟಿರುವ 15 ಸ್ಥಳಗಳಲ್ಲಿ ಎನ್​ಐಎ ದಾಳಿ

ಕೆನಡಾದಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್​​​ ಹತ್ಯೆ ನಂತರ ಅನೇಕ ಕಡೆ ಇಂತಹ ಘಟನೆಗಳು ಹೆಚ್ಚಾಗಿದೆ. ಭಾರತದ ಮೇಲೆ ಕಾರಣಗಳಿಲ್ಲದೆ ದಾಳಿಯನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್​​​ನ ಮೇಲೆ ಇರುವ ಭಾರತದ ಧ್ವಜವನ್ನು ಇಳಿಸಸಿ ಪ್ರತಿಭಟನೆಯನ್ನು ನಡೆಸಿತ್ತು. ನಂತರ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್​​​ಗೆ ಬೆಂಕಿಯನ್ನು ಹಚ್ಚಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:41 am, Mon, 27 November 23