ನಾಲ್ಕು ದಿನಗಳ ಕದನ ವಿರಾಮ: 17 ಇಸ್ರೇಲಿ ಒತ್ತೆಯಾಳುಗಳ 3ನೇ ಗುಂಪನ್ನು ಬಿಡುಗಡೆ ಮಾಡಿದ ಹಮಾಸ್

Israel-Hamas Conflict: ಹಮಾಸ್​ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದವರ ಪೈಕಿ ಮತ್ತೆ 17 ಇಸ್ರೇಲಿಗಳನ್ನು ಭಾನುವಾರ ಸಂಜೆ ಬಿಡುಗಡೆ ಮಾಡಿದೆ. ಒಟ್ಟು 240 ಮಂದಿಯನ್ನು ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದರು, ಭಾನುವಾರ 17 ಇಸ್ರೇಲಿ ಒತ್ತೆಯಾಳುಗಳ ಮೂರನೇ ಗುಂಪನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದ ಅಡಿಯಲ್ಲಿ, 50 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರೆ 150 ಪ್ಯಾಲೆಸ್ತೀನ್ ಕೈದಿಗಳನ್ನು ಇಸ್ರೇಲ್​ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಹಾಗಾಗಿ ನಾಲ್ಕು ದಿನಗಳ ಕದನ ವಿರಾಮಕ್ಕೆ ಹಮಾಸ್ ಹಾಗೂ ಇಸ್ರೇಲ್​ ಒಪ್ಪಿಗೆ ಸೂಚಿಸಿತ್ತು.

ನಾಲ್ಕು ದಿನಗಳ ಕದನ ವಿರಾಮ: 17 ಇಸ್ರೇಲಿ ಒತ್ತೆಯಾಳುಗಳ 3ನೇ ಗುಂಪನ್ನು ಬಿಡುಗಡೆ ಮಾಡಿದ ಹಮಾಸ್
ಇಸ್ರೇಲ್Image Credit source: NDTV
Follow us
ನಯನಾ ರಾಜೀವ್
|

Updated on: Nov 27, 2023 | 8:03 AM

ಹಮಾಸ್(Hamas)​ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದವರ ಪೈಕಿ ಮತ್ತೆ 17 ಇಸ್ರೇಲಿಗಳನ್ನು ಭಾನುವಾರ ಸಂಜೆ ಬಿಡುಗಡೆ ಮಾಡಿದೆ. ಒಟ್ಟು 240 ಮಂದಿಯನ್ನು ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದರು, ಭಾನುವಾರ 17 ಇಸ್ರೇಲಿ ಒತ್ತೆಯಾಳುಗಳ ಮೂರನೇ ಗುಂಪನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದ ಅಡಿಯಲ್ಲಿ, 50 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರೆ 150 ಪ್ಯಾಲೆಸ್ತೀನ್ ಕೈದಿಗಳನ್ನು ಇಸ್ರೇಲ್​ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಹಾಗಾಗಿ ನಾಲ್ಕು ದಿನಗಳ ಕದನ ವಿರಾಮಕ್ಕೆ ಹಮಾಸ್ ಹಾಗೂ ಇಸ್ರೇಲ್​ ಒಪ್ಪಿಗೆ ಸೂಚಿಸಿತ್ತು.

ಹಮಾಸ್ 13 ಇಸ್ರೇಲಿಗಳು ಮತ್ತು ನಾಲ್ಕು ವಿದೇಶಿ ಪ್ರಜೆಗಳ ಮೂರನೇ ಬ್ಯಾಚ್ ಅನ್ನು ರೆಡ್ ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದೆ ಎಂದು ಹೇಳಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರ (ನವೆಂಬರ್ 24) ರಂದು ಪ್ರಾರಂಭವಾಯಿತು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಗಾಜಾ ಪಟ್ಟಿಗೆ ತೆರಳಿ ಸೈನಿಕರಿಗೆ ಸ್ಫೂರ್ತಿ ತುಂಬಿದರು. ಮೊದಲು ಹಮಾಸ್​ ಅನ್ನು ನಾಶ ಮಾಡುವುದು ಹಾಗೂ ಎರಡನೆಯದು ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಮರಳಿ ತರುವುದು ನಮ್ಮ ಮೂಲ ಉದ್ದೇಶ ಎಂದರು.

ಕೆಲವು ದಿನಗಳ ಹಿಂದೆ ಹಮಾಸ್​ ಅನ್ನು ಹತ್ತಿಕ್ಕುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂದು ಹೇಳಿದ್ದರು, ಹಾಗೆಯೇ ಯುದ್ಧವನ್ನು ನಾವು ಪ್ರಾರಂಭಿಸಿಲ್ಲ, ಆದರೆ ಅಂತ್ಯ ಮಾತ್ರ ನಮ್ಮಿಂದಲೇ ಆಗಲಿದೆ ಎಂದು ಹೇಳಿದ್ದರು.

ಮತ್ತಷ್ಟು ಓದಿ: Israel Hamas Conflict: ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ 5000 ರಾಕೆಟ್​ಗಳಿಂದ ದಾಳಿ ನಡೆಸಿತ್ತು, ಅದಾದ ಬಳಿಕ ಇಸ್ರೇಲ್ ಪ್ರತಿಯಾಗಿ ಗಾಜಾ ಮೇಲೆ ದಾಳಿ ನಡೆಸುತ್ತಿದೆ. ಎರಡೂ ಕಡೆಯೂ ಸೇರಿ ಸುನಾರು 11 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ