AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆದುಳಿನಲ್ಲಿ ರಕ್ತಸ್ರಾವ, ಕೋಮಾದಲ್ಲಿದ್ದಾರಾ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್? ವೈರಲ್ ಆಗಿರುವ ಸುದ್ದಿಯಲ್ಲೇನಿದೆ?

ಕಿಮ್ ಜಾಂಗ್ ಉನ್ ಅವರಿಗೆ ತೀವ್ರ ಮೆದುಳಿನ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿವೆ. ಬೀಜಿಂಗ್ ಆಸ್ಪತ್ರೆಗೆ ದಾಖಲು, ಉತ್ತರಾಧಿಕಾರಿ ಚರ್ಚೆಗಳೂ ಮುನ್ನೆಲೆಗೆ ಬಂದಿವೆ. ಆದರೆ, ಉತ್ತರ ಕೊರಿಯಾ ಅಥವಾ ಚೀನಾದಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಈ ಹಿಂದೆ ಕೂಡ ಇಂತಹ ವದಂತಿಗಳು ಹಬ್ಬಿದ್ದವು. ಪ್ರಸ್ತುತದ ಸುದ್ದಿಗಳು ಆಧಾರರಹಿತ ಸಾಮಾಜಿಕ ಮಾಧ್ಯಮ ಊಹಾಪೋಹಗಳಾಗಿವೆ ಎಂದು ತಜ್ಞರು ಹೇಳಿದ್ದಾರೆ.

ಮೆದುಳಿನಲ್ಲಿ ರಕ್ತಸ್ರಾವ, ಕೋಮಾದಲ್ಲಿದ್ದಾರಾ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್? ವೈರಲ್ ಆಗಿರುವ ಸುದ್ದಿಯಲ್ಲೇನಿದೆ?
ಕಿಮ್ ಜಾಂಗ್ ಉನ್ Image Credit source: Britannica
ನಯನಾ ರಾಜೀವ್
|

Updated on: Oct 20, 2026 | 10:49 AM

Share

ಪ್ಯೋಂಗ್ಯಾಂಗ್, ಅಕ್ಟೋಬರ್ 20: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ತೀವ್ರ ಮೆದುಳಿನ ರಕ್ತಸ್ರಾವ ಉಂಟಾಗಿದ್ದು, ಅವರು ಕೋಮಾಗೆ ಜಾರಿದ್ದಾರೆ ಎಂಬ ಸುದ್ದಿಗಳು ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮ ವರದಿಗಳಲ್ಲಿ ತೀವ್ರವಾಗಿ ಹರಿದಾಡುತ್ತಿವೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕಿಮ್ ಅವರನ್ನು ತುರ್ತು ಚಿಕಿತ್ಸೆಗಾಗಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿರುವ ಖ್ಯಾತ ‘ಪೀಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜ್ ಆಸ್ಪತ್ರೆ’ಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಈ ಸುದ್ದಿಯ ಬೆನ್ನಲ್ಲೇ ಉತ್ತರ ಕೊರಿಯಾದ ಪ್ರಜೆಗಳು ಆಘಾತಕ್ಕೊಳಗಾಗಿದ್ದಾರೆ ಎಂದು ನೆಟ್ಟಿಗರು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮೆದುಳಿನ ರಕ್ತಸ್ರಾವ ಮತ್ತು ಕೋಮಾ: ಕಿಮ್ ಜಾಂಗ್ ಉನ್ ಗಂಭೀರ ಸೆರೆಬ್ರಲ್ ಹೆಮರೇಜ್‌ಗೆ ಒಳಗಾಗಿ ಕೋಮಾಗೆ ಜಾರಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅನಾಮಧೇಯ ಮೂಲಗಳು ಹೇಳಿಕೊಂಡಿವೆ. ಪ್ಯೊಂಗ್‌ಯಾಂಗ್‌ನಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳ ಕೊರತೆಯಿದೆ ಎಂಬ ಕಾರಣಕ್ಕೆ ಅವರನ್ನು ಚೀನಾದ ಬೀಜಿಂಗ್‌ಗೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.

ಉತ್ತರಾಧಿಕಾರಿಯ ಚರ್ಚೆ: ಕಿಮ್ ಅವರ ಆರೋಗ್ಯ ಗಂಭೀರವಾಗಿದೆ ಎಂಬ ವದಂತಿಯ ಬೆನ್ನಲ್ಲೇ, ಅವರ ಪುತ್ರಿ ಕಿಮ್ ಜು-ಏ ಅಥವಾ ಸೋದರಿ ಕಿಮ್ ಯೋ ಜಾಂಗ್ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಉತ್ತರ ಕೊರಿಯಾದ ಅಧಿಕೃತ ಸರ್ಕಾರಿ ಮಾಧ್ಯಮವಾಗಲಿ (KCNA) ಅಥವಾ ಚೀನಾ ಸರ್ಕಾರವಾಗಲಿ ಕಿಮ್ ಅವರ ಅನಾರೋಗ್ಯ ಅಥವಾ ಬೀಜಿಂಗ್ ಆಸ್ಪತ್ರೆ ಪ್ರವೇಶದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ:

Russia Ukraine War: ಕೊರಿಯಾದಂತೆ ಉಕ್ರೇನ್​ ದೇಶವೂ ವಿಭಜನೆ ಸಾಧ್ಯತೆ: ಹೊಸ ಆತಂಕ

ಈ ವದಂತಿ ಹೊಸದೇನಲ್ಲ

ಕಿಮ್ ಜಾಂಗ್ ಉನ್ ಕೆಲ ದಿನಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದಾಗಲೆಲ್ಲಾ ಅವರು ಕೋಮಾಗೆ ಜಾರಿದ್ದಾರೆ, ಶಸ್ತ್ರಚಿಕಿತ್ಸೆಯ ವೇಳೆ ಸಾವನ್ನಪ್ಪಿದ್ದಾರೆ ಎಂಬಂತಹ ವದಂತಿಗಳು ಹರಡುವುದು ಸಾಮಾನ್ಯವಾಗಿದೆ. 2020 ರಲ್ಲೂ ಇದೇ ರೀತಿಯ ಸುಳ್ಳು ಸುದ್ದಿಗಳು ಹಬ್ಬಿದ್ದವು, ನಂತರ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಮತ್ತು ತಜ್ಞರ ಪ್ರಕಾರ, ಪ್ರಸ್ತುತ ಹರಿದಾಡುತ್ತಿರುವ ಸುದ್ದಿಗಳಿಗೆ ಯಾವುದೇ ದೃಢವಾದ ಆಧಾರಗಳಿಲ್ಲ. ಇದು ಕೇವಲ ಸಾಮಾಜಿಕ ಮಾಧ್ಯಮಗಳ ಊಹಾಪೋಹ ಎಂದು ವಿಶ್ಲೇಷಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More