ರಾಜಕುಮಾರ ಹ್ಯಾರಿ ತನ್ನ 20M ಬಾಂಬ್‌ಶೆಲ್ ಎಂಬ ಆತ್ಮಚರಿತ್ರೆಯ ಪುಸ್ತಕವನ್ನು ಬಿಡುಗಡೆ ಮಾಡದಿದ್ದರೆ , ಕಿಂಗ್ ಚಾರ್ಲ್ಸ್ III ಅವರು ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಅವರ ಮಕ್ಕಳಿಗೆ HRH ಎಂಬ ರಾಜಮನೆತನದ ಬಿರುದುಗಳ (ಹೆಸರು) ನೀಡಬಹುದೆಂದು ವದಂತಿಗಳು ಎಲ್ಲ ಕಡೆ ಗಮನ ಸೆಳೆದಿದೆ. ಆದರೆ ಕಿಂಗ್ ಚಾರ್ಲ್ಸ್ III ಅವರು ಬಾಂಬ್ ಶೆಲ್ ಮೆಮೊಯಿರ್ ಪುಸ್ತಕವನ್ನು ರದ್ದುಗೊಳಿಸಿದರೆ ಮಾತ್ರ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ಗೆ ರಾಜಮನೆತನದ ಬಿರುದು ನೀಡುವುದಾಗಿ ಹೇಳಿದರೆಂದು ವರದಿ ಮಾಡಲಾಗಿದೆ.
ರಾಣಿ ಎಲಿಜಬೆತ್ II ರ ಮರಣದ ನಂತರ ಕಿಂಗ್ ಚಾರ್ಲ್ಸ್ III ರಾಜನಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅವರ ಮಕ್ಕಳಿಗೆ ರಾಜಮನೆತನದ ಬಿರುದುಗಳನ್ನು ನೀಡುವ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ. ಅರಮನೆಯು ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ಹೊಸ ರಾಜಮನೆತನದ ಬಿರುದುಗಳನ್ನು ಘೋಷಿಸಲು ತುಂಬಾ ಹಾತೊರೆಯುತ್ತಿದ್ದಾರೆ. ಹೊಸ ರಾಜಕುಮಾರ ಮತ್ತು ವೇಲ್ಸ್ ರಾಜಕುಮಾರಿ ಪ್ರಶಸ್ತಿಗಳಿಗಾಗಿ ತಮ್ಮ ಡ್ಯೂಕ್ ಮತ್ತು ಡಚೆಸ್ ಆಫ್ ಕೇಂಬ್ರಿಡ್ಜ್ ಎಂಬ ಬಿರುದು ಬದಲಾಯಿಸಿಕೊಂಡಿದ್ದಾರೆ. ಅವರ ಮಕ್ಕಳು ಪ್ರಿನ್ಸ್ ಜಾರ್ಜ್ ಆಫ್ ವೇಲ್ಸ್, ವೇಲ್ಸ್ ರಾಜಕುಮಾರಿ ಚಾರ್ಲೊಟ್, ಮತ್ತು ಪ್ರಿನ್ಸ್ ಲೂಯಿಸ್ ಆಫ್ ವೇಲ್ಸ್, ಹ್ಯಾರಿ ಮತ್ತು ಮೇಘನ್ ಅವರ ಮಕ್ಕಳ ಬಿರುದುಗಳ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅರಮನೆಯ ಮೂಲಗಳು ತಿಳಿಸಿಲ್ಲ.
ವರದಿಗಳ ಪ್ರಕಾರ, ಸಸೆಕ್ಸ್‌ನ ಡ್ಯೂಕ್ ಮತ್ತು ಡಚೆಸ್ ಅವರ ಮಕ್ಕಳು ಮೂರು ವರ್ಷದ ಮಗ ಆರ್ಚೀ ಮತ್ತು ಒಂದು ವರ್ಷದ ಮಗಳು ಲಿಲಿಬೆಟ್, ಅವರ ಅಜ್ಜ ಸಿಂಹಾಸನವನ್ನು ಪಡೆದಾಗಿನಿಂದ ರಾಜಕುಮಾರ ಮತ್ತು ರಾಜಕುಮಾರಿ ಎಂದು ಕರೆಯುವ ಹಕ್ಕನ್ನು ಪಡೆದಿದ್ದಾರೆ, ಆದರೆ ಈ ಬಗ್ಗೆ ಅರಮನೆ ಯಾವುದೇ ಅಧಿಕೃತ ಸ್ಪಷ್ಟನೆಯನ್ನು ನೀಡಿಲ್ಲ. ಅವರು ಜನವರಿ 2020 ನಂತರ ಅವರ ಪೋಷಕರು ರಾಜಮನೆತನದಲ್ಲಿ ಕೆಲಸ ಮಾಡದ ಕಾರಣ ಅವರಿಗೆ HRH ಬಿರುದುಗಳನ್ನು ಸಹ ನೀಡಲಾಗುತ್ತದೆ. ಉದಾಹರಣೆಗೆ, ಪ್ರಿನ್ಸ್ ಹ್ಯಾರಿಯನ್ನು ಇನ್ನು ಮುಂದೆ ಹಿಸ್ ರಾಯಲ್ ಹೈನೆಸ್ ಎಂದು ಕರೆಯಲಾಗುವುದಿಲ್ಲ.
ಆದರೆ ಇವರ ಮಕ್ಕಳಿಗೆ HRH ಬಿರುದುಗಳನ್ನು ನೀಡಲು ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಒಪ್ಪಿಲ್ಲ ಎಂದು ವರದಿಗಳು ಹೇಳಿದೆ. ಇದೀಗ ಈ ವಿಚಾರವಾಗಿ ಅನೇಕ ಚರ್ಚೆಗಳು ನಡೆಯುತ್ತಿದೆ. ರಾಜ ಮನೆತನದ ಮಕ್ಕಳಿಗೆ ಯಾವ ಬಿರುದುಗಳನ್ನು ನೀಡಬೇಕು ಅಥವಾ ಅವರು ರಾಜಮನೆತನದ ಆಸ್ತಿ 20 ಮಿಲಿಯನ್ ಪಡೆದುಕೊಳ್ಳವ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆಯ್ಕೆ ಅವರ ಕೈಯಲ್ಲಿದೆ ಎಂದು ಅರಮನೆ ಹೇಳಿದೆ ಎಂದು ಮೂಲಗಳು ತಿಳಿಸಿದೆ.
ರಾಯಲ್ ತಜ್ಞ ಕೇಟಿ ನಿಕೋಲ್ ಅವರು ಟ್ರೂ ರಾಯಲ್ಟಿ ಟಿವಿಯ ದಿ ರಾಯಲ್ ಬೀಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಆತ್ಮಚರಿತ್ರೆಯನ್ನು ಉದ್ದೇಶಿಸಿ , ರಾಜ ಮತ್ತು ಹೊಸ ರಾಜಕುಮಾರನ ಹೊರತಾಗಿಯೂ ಆರ್ಚೀ ಮತ್ತು ಲಿಲಿಬೆಟ್ ಇಬ್ಬರೂ ಇನ್ನೂ ಅಧಿಕೃತ ರಾಯಲ್ ಫ್ಯಾಮಿಲಿ ವೆಬ್‌ಸೈಟ್‌ನಲ್ಲಿ ಮಾಸ್ಟರ್ ಮತ್ತು ಮಿಸ್ ಎಂದು ಪಟ್ಟಿ ಮಾಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ. ಮತ್ತು ಪ್ರಿನ್ಸೆಸ್ ಆಫ್ ವೇಲ್ಸ್ ಬಿರುದುಗಳನ್ನು ಈಗಾಗಲೇ ನವೀಕರಿಸಲಾಗಿದೆ.
ಪ್ರಿನ್ಸ್ ಹ್ಯಾರಿ ಅವರು $20M ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರೆ ರಾಜಮನೆತನವು ತನ್ನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ತಿಳಿದಿರುತ್ತದೆ, ಆದರೆ ಅವರು ಆ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಈಗಾಗಲೇ ಹಾಕಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಈ ವಿಚಾರ ಅರಮನೆಯ ರಾಜನ ಅಲ್ಟಿಮೇಟಮ್‌ಗೆ ಇಳಿದಿದೆ ಎಂದು ಸುಳಿವು ನೀಡುತ್ತಿದ್ದಾರೆ.
ರಾಣಿ ಎಲಿಜಬೆತ್ ಸಾವಿನ ನಂತರ ಆಕೆಯ ಮಗ ಕಿಂಗ್ ಚಾರ್ಲ್ಸ್ ತನ್ನ ಆಳ್ವಿಕೆಯನ್ನು ಉನ್ನತ ಮಟ್ಟದಲ್ಲಿ ಇರುಬೇಕು ಎಂಬ ಆಸೆಯನ್ನು ಹೊಂದಿದ್ದರು. ಆದರೆ ಈ ಪುಸ್ತಕ ಅವರಿಗೆ ದೊಡ್ಡ ತಲೆನೋವಾಗಿದೆ. ಈ ವಿಚಾರವಾಗಿ ಕಿಂಗ್ ಚಾರ್ಲ್ಸ್ಗೆ ತುಂಬಾ ಭಯವಿದೆ ಎಂದು ವರದಿ ಹೇಳಿದೆ. ಇದೀಗ ಈ ಪುಸ್ತಕ ಬಿಡುಗಡೆಗೊಂಡರೆ ಖಂಡಿತ ಕಿಂಗ್ ಚಾರ್ಲ್ಸ್ ಮೇಲೆ ಪರಿಣಾಮ ಬೀಳಬಹುದು ಎಂದು ಮೂಲಗಳು ಹೇಳುತ್ತದೆ.
Published On - 6:12 pm, Wed, 28 September 22