ಬಸ್​ ಬ್ರೇಕ್​ ಫೇಲ್​ ಆದಾಗ ಡ್ರೈವರ್​ನ ಐಡಿಯಾಕ್ಕೆ 60 ಜನರು ಸೇಫ್, ನಿಟ್ಟುಸಿರು ಬಿಟ್ಟ ಪ್ರಯಾಣಿಕರು

Updated on: Apr 27, 2025 | 4:22 PM

ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ KSRTC ಬಸ್​ ಬ್ರೇಕ್​ ಫೇಲ್​ ಆಗಿದೆ. ಕೂಡಲೇ ಎಚ್ಚೆತ್ತ ಡ್ರೈವರ್​​​ ಉಪಾಯದಿಂದ ಬಸ್​​ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಇದರಿಂದ ಬಸ್​ ನಿಂತುಕೊಂಡಿದ್ದು, ಅದೃಷ್ಟವಶಾತ್ ಬಸ್​ನಲ್ಲಿ 60ಕ್ಕೂ ಹೆಚ್ಚು ಜನರು ಬಚಾವ್ ಆಗಿದ್ದಾರೆ. KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್, ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು.

ಚಾಮರಾಜನಗರ, (ಏಪ್ರಿಲ್ 27): ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ KSRTC ಬಸ್​ ಬ್ರೇಕ್​ ಫೇಲ್​ ಆಗಿದೆ. ಕೂಡಲೇ ಎಚ್ಚೆತ್ತ ಡ್ರೈವರ್​​​ ಬಸ್​​ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಇದರಿಂದ ಬಸ್​ ನಿಂತುಕೊಂಡಿದ್ದು, ಅದೃಷ್ಟವಶಾತ್ ಬಸ್​ನಲ್ಲಿ 60ಕ್ಕೂ ಹೆಚ್ಚು ಜನರು ಬಚಾವ್ ಆಗಿದ್ದಾರೆ. KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್, ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ಈ ವೇಳೆ ಮಲೆ ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದೆ. ಬ್ರೇಕ್ ಫೇಲ್ ಆಗ್ತಿದ್ದಂತೆ ಬಸ್​ಅನ್ನು ಡಿವೈಡರ್ ಮೇಲೆ ಏರಿಸಿದ್ದಾನೆ. ಆಗ ಬಸ್ ನಿಂತುಕೊಂಡಿದೆ. ಒಂದು ವೇಳೆ ಚಾಲಕ ಬಸ್​ ಅನ್ನು ಡಿವೈಡರ್​ಗೆ ಹತ್ತಿಸದಿದ್ದರೆ ಏನು ಅನಾಹುತ ಆಗುತ್ತಿತ್ತು. ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಐಡಿಯಾಕ್ಕೆ ಪ್ರಯಾಣಿಕರು ಕೃತಜ್ಞತೆ ತಿಳಿಸಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More