Video: ಹಿಜ್ಬುಲ್ಲಾ ಸದಸ್ಯರ ಅಂತ್ಯಕ್ರಿಯೆ ವೇಳೆ ವಾಕಿ-ಟಾಕಿಗಳು ಸ್ಫೋಟ

ಲೆಬನಾನ್ ನಾದ್ಯಂತ ಹಿಜ್ಬುಲ್ಲಾಗಳು ಬಳಕೆ ಮಾಡುತ್ತಿದ್ದ ಪೇಜರ್ ಗಳು ಸ್ಫೋಟಗೊಂಡ ಬೆನ್ನಲ್ಲೇ ವಾಕಿ-ಟಾಕಿಗಳೂ ಸ್ಫೋಟಗೊಳ್ಳಲು ಆರಂಭವಾಗಿವೆ. ಲೆಬನಾನ್ ಹಾಗೂ ಸಿರಿಯಾಗಳಲ್ಲಿ ಹಿಜ್ಬುಲ್ಲಾ ಸಂಘಟನೆಯ ನೂರಾರು ಮಂದಿ ಪೇಜರ್, ವಾಕಿ-ಟಾಕಿ ಸ್ಫೋಟಗೊಂಡು ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಈ ಗೌಪ್ಯ ದಾಳಿಯ ಹಿಂದೆ ಇಸ್ರೇಲ್ ಕೈವಾಡ ಇರುವ ಶಂಕೆ ವ್ಯಕ್ತವಾಗತೊಡಗಿದೆ.

Video: ಹಿಜ್ಬುಲ್ಲಾ ಸದಸ್ಯರ ಅಂತ್ಯಕ್ರಿಯೆ ವೇಳೆ ವಾಕಿ-ಟಾಕಿಗಳು ಸ್ಫೋಟ
ಸ್ಫೋಟ
Image Credit source: BBC

Updated on: Sep 19, 2024 | 8:03 AM

ಲೆಬನಾನ್​ನಲ್ಲಿ ಹಿಜ್ಬುಲ್ಲಾ(Hezbollah)ಗಳು ಬಳಸುತ್ತಿದ್ದ ಪೇಜರ್​ಗಳ ಸ್ಫೋಟ ಬೆನ್ನಲ್ಲೇ ಅವರ ವಾಕಿ-ಟಾಕಿಗಳು ಕೂಡ ಸ್ಫೋಟಗೊಂಡಿದ್ದು 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲೆಬನಾನ್​ನಲ್ಲಿ ಹಿಜ್ಬುಲ್ಲಾ ಬಳಸುತ್ತಿದ್ದ ಪೇಜರ್​ಗಳ ಸರಣಿ ಸ್ಫೋಟದಿಂದ 9ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಿಜ್ಬುಲ್ಲಾ ಸದಸ್ಯರ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ವಾಕಿ-ಟಾಕಿಗಳು ಕೂಡ ಸ್ಫೋಟಗೊಂಡಿವೆ.

ದೇಶದ ಅನೇಕ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಂಡಿರುವ ಇತ್ತೀಚಿನ ಪ್ರಕರಣಗಳಲ್ಲಿ 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸರ್ಕಾರ ದೃಢಪಡಿಸಿದೆ. ಹಿಜ್ಬುಲ್ಲಾಗಳು ಹೊಂದಿದ್ದ ಪೇಜರ್​ ಸಾಧನಗಳು ದೇಶದಾದ್ಯಂತ ಸ್ಫೋಟಗೊಂಡು 2,800 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಬೆರಳುಗಳು ದೇಹದಿಂದ ಬೇರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ.

ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ. ಮೃತರದಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು, ಸಂಸದರೊಬ್ಬರ ಪುತ್ರ ಕೂಡ ಸೇರಿದ್ದಾನೆ.

ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್‌ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್‌ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್‌ ಬಳಸದೇ ಸಂವಹನಕ್ಕಾಗಿ ಪೇಜರ್‌ ಬಳಸುತ್ತಿತ್ತು.

ಮತ್ತಷ್ಟು ಓದಿ: Video: ಲೆಬನಾನ್​ನಲ್ಲಿ ಪೇಜರ್ಸ್ ಸ್ಫೋಟ, 9 ಮಂದಿ ಸಾವು, 2,800 ಜನರಿಗೆ ಗಾಯ

ಹೊಸ ಮಾಡೆಲ್‌ನ ಪೇಜರ್‌ಗಳನ್ನು ಇರಾನ್‌ನಿಂದ ತಂದು ಲೆಬನಾನ್‌ನಲ್ಲಿ ಬಳಕೆ ಮಾಡಲಾಗಿದೆ. ಇಸ್ರೇಲ್ ಜೊತೆ ಇರಾನ್‌ನ ಪೇಜರ್ ಕಂಪನಿ ಕೈಜೋಡಿಸಿರಬಹುದು ಎಂದು ಹೇಳಲಾಗುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ