ಕ್ಯಾಲಿಫೋರ್ನಿಯಾ ಶಾಲೆಗಳಲ್ಲಿ ಚೀಟೋಸ್ ಮತ್ತು ಡೊರಿಟೋಸ್ ನಿಷೇಧಕ್ಕೆ ಚಿಂತನೆ

|

Updated on: Mar 18, 2024 | 1:19 PM

ಮಸೂದೆ ಜಾರಿಗೊಳಿಸಿದರೆ, "ಕೆಂಪು 40, ಹಳದಿ 5, ಹಳದಿ 6, ನೀಲಿ 1, ನೀಲಿ 2, ಮತ್ತು ಹಸಿರು 3" ಸೇರಿದಂತೆ ಆರು ಸಿಂಥೆಟಿಕ್ ಆಹಾರ ಬಣ್ಣಗಳನ್ನು ಹೊಂದಿರುವ ಆಹಾರವನ್ನು ಶಾಲೆಯಲ್ಲಿ ತಿನ್ನುವಂತಿಲ್ಲ. ಇದಲ್ಲದೆ, ಟೈಟಾನಿಯಂ ಡೈಆಕ್ಸೈಡ್ ಎಂದು ಕರೆಯಲ್ಪಡುವ ಸೌಂದರ್ಯವರ್ಧಕಗಳು ಮತ್ತು ಪೇಂಟ್​​ಗಳಲ್ಲಿ ಸಾಮಾನ್ಯವಾಗಿ ಬಳಸುವ ಕಲರಿಂಗ್ ಏಜೆಂಟ್ ಅನ್ನು ಸಹ ನಿಷೇಧಿಸಲಾಗುವುದು

ಕ್ಯಾಲಿಫೋರ್ನಿಯಾ ಶಾಲೆಗಳಲ್ಲಿ ಚೀಟೋಸ್ ಮತ್ತು ಡೊರಿಟೋಸ್ ನಿಷೇಧಕ್ಕೆ ಚಿಂತನೆ
ಡೊರಿಟೋಸ್
Follow us on

ಕ್ಯಾಲಿಫೋರ್ನಿಯಾ ಮಾರ್ಚ್ 18: ಹೊಸ ಮಸೂದೆಯ ಪ್ರಕಾರ ಕ್ಯಾಲಿಫೋರ್ನಿಯಾದ (California) ಪಬ್ಲಿಕ್ ಸ್ಕೂಲ್​​​ಗಳಲ್ಲಿ ಅಮೆರಿಕದಲ್ಲಿ ಹೆಚ್ಚು ಇಷ್ಟಪಡುವ ಕೆಲವು ತಿಂಡಿಗಳನ್ನು ಶೀಘ್ರದಲ್ಲೇ ನಿಷೇಧಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಸಿಬಿಎಸ್ ನ್ಯೂಸ್‌ನಲ್ಲಿನ ವರದಿಯ ಪ್ರಕಾರ ಕೃತಕ ರಾಸಾಯನಿಕಗಳು ಮತ್ತು ಆಹಾರ ಬಣ್ಣಗಳನ್ನು ಒಳಗೊಂಡಿರುವ ತಿಂಡಿಗಳನ್ನು ಶಾಲೆಗಳಲ್ಲಿ ನಿಷೇಧಿಸುವ ಗುರಿ ಹೊಂದಿರುವ ಪ್ರಸ್ತಾವಿತ ಮಸೂದೆಯು ಫ್ಲಾಮಿನ್ ಹಾಟ್ ಚೀಟೋಸ್ (Flamin’ Hot Cheetos), ಡೋರಿಟೋಸ್ (Doritos) ಮತ್ತು ಟಕಿ ಮೊದಲಾದ ಕುರುಕುರು ತಿಂಡಿಗಳನ್ನು ನಿಷೇಧಿಸುವ ಸಾಧ್ಯತೆ ಇದೆ.

ಮಸೂದೆ ಜಾರಿಗೊಳಿಸಿದರೆ, “ಕೆಂಪು 40, ಹಳದಿ 5, ಹಳದಿ 6, ನೀಲಿ 1, ನೀಲಿ 2, ಮತ್ತು ಹಸಿರು 3” ಸೇರಿದಂತೆ ಆರು ಸಿಂಥೆಟಿಕ್ ಆಹಾರ ಬಣ್ಣಗಳನ್ನು ಹೊಂದಿರುವ ಆಹಾರವನ್ನು ಶಾಲೆಯಲ್ಲಿ ತಿನ್ನುವಂತಿಲ್ಲ. ಇದಲ್ಲದೆ, ಟೈಟಾನಿಯಂ ಡೈಆಕ್ಸೈಡ್ ಎಂದು ಕರೆಯಲ್ಪಡುವ ಸೌಂದರ್ಯವರ್ಧಕಗಳು ಮತ್ತು ಪೇಂಟ್​​ಗಳಲ್ಲಿ ಸಾಮಾನ್ಯವಾಗಿ ಬಳಸುವ ಕಲರಿಂಗ್ ಏಜೆಂಟ್ ಅನ್ನು ಸಹ ನಿಷೇಧಿಸಲಾಗುವುದು. ಹಳದಿ ಮತ್ತು ಕೆಂಪು ಬಣ್ಣಗಳನ್ನು ಫ್ರೂಟಿ ಪೆಬಲ್ಸ್ ಮತ್ತು ಫ್ರೂಟ್ ಲೂಪ್‌ಗಳಂತಹ ಧಾನ್ಯಗಳಲ್ಲಿ ಕಾಣಬಹುದು, ಹಾಗೆಯೇ ಫ್ಲಾಮಿನ್ ಹಾಟ್ ಚೀಟೋಸ್ ಮತ್ತು ಡೋರಿಟೋಸ್‌ನಂತಹ ಚಿಪ್ಸ್‌ಗಳಲ್ಲಿ ಕಾಣಬಹುದು.

ಸಿಬಿಎಸ್ ನ್ಯೂಸ್ ಪ್ರಕಾರ, ಕ್ಯಾಲಿಫೋರ್ನಿಯಾ ಸ್ಟೇಟ್ ಅಸೆಂಬ್ಲಿಯ ಡೆಮಾಕ್ರಟಿಕ್ ಸದಸ್ಯ ಜೆಸ್ಸಿ ಗೇಬ್ರಿಯಲ್ ಅವರು ಮಂಗಳವಾರ, ಮಾರ್ಚ್ 12 ರಂದು AB 2316 ಶಾಸನವನ್ನು ಪ್ರಸ್ತಾಪಿಸಿದರು. ಮಸೂದೆಯ ಪ್ರಕಟಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾಯಿತು. ಈ ತಿಂಡಿಗಳಲ್ಲಿನ ಪದಾರ್ಥಗಳು ಪ್ರಮುಖ ಆರೋಗ್ಯ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಗೇಬ್ರಿಯಲ್ ಹೇಳಿದ್ದಾರೆ.

ವಿಜ್ಞಾನವು ಸಂಕೀರ್ಣವಾಗಿದೆ ಆದರೆ ಮಸೂದೆಯ ಉದ್ದೇಶ ಅಲ್ಲ. ಇದು ಮಕ್ಕಳಿಗೆ ಹಾನಿ ಮಾಡುವ ಮತ್ತು ಅವರ ಕಲಿಕೆಯ ಸಾಮರ್ಥ್ಯಕ್ಕೆ ಅಡ್ಡಿಪಡಿಸುವ ರಾಸಾಯನಿಕಗಳಿಂದ ನಮ್ಮ ವಿದ್ಯಾರ್ಥಿಗಳನ್ನು ರಕ್ಷಿಸುವುದಕ್ಕಾಗಿದೆ ಎಂದು ಜೆಸ್ಸಿ ಗೇಬ್ರಿಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ಇದು ಆಹಾರದ ನಿಷೇಧವಲ್ಲ. ಕ್ಯಾಲಿಫೋರ್ನಿಯಾದಲ್ಲಿ ಫ್ಲಾಮಿನ್ ಹಾಟ್ ಚೀಟೊಸ್ ನಿಷೇಧದ ಬಗ್ಗೆ ಅಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಕ್ಯಾಲಿಫೋರ್ನಿಯಾ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯು 2021 ರಲ್ಲಿ ಸಂಶೋಧನೆ ನಡೆಸಿದೆ. ಗೇಬ್ರಿಯಲ್ ಪ್ರಕಾರ, “ಸಿಂಥೆಟಿಕ್ ಆಹಾರ ಬಣ್ಣಗಳ ಸೇವನೆಯು ಕೆಲವು ಮಕ್ಕಳಲ್ಲಿ ಹೈಪರ್​​ಆ್ಯಕ್ಟಿವಿಟಿ ಮತ್ತು ಇತರ ನರ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಮೂರು ಮಕ್ಕಳ ತಂದೆಯೂ ಆಗಿರುವ ಗೇಬ್ರಿಯಲ್, ಎಡಿಎಚ್‌ಡಿ ಇರುವ ವ್ಯಕ್ತಿ ಮತ್ತು ಇದೇ ರೋಗವನ್ನು ಹೊಂದಿರುವ ಮಕ್ಕಳನ್ನು ಬೆಳೆಸುತ್ತಿರುವ ಕಾರಣ, ಸಮಸ್ಯೆಯು ತನಗೆ “ವೈಯಕ್ತಿಕ” ಆಗಿತ್ತು ಎಂದಿದ್ದಾರೆ. ಹೆಚ್ಚುವರಿಯಾಗಿ, ಈ ತಿಂಡಿಯನ್ನು ಅತಿಯಾಗಿ ಸೇವಿಸುವುದರಿಂದ ಇದು ಪ್ರತಿರಕ್ಷಣಾ ವ್ಯವಸ್ಥೆಯ ಹಾನಿ ಮತ್ತು ಕ್ಯಾನ್ಸರ್​​ಗೆ ಕಾರಣವಾಗುತ್ತದೆ ಎಂದು ಅವರ ಕಚೇರಿ ಪ್ರತಿಪಾದಿಸಿದೆ.

“ಶಾಸಕರಾಗಿ, ಪೋಷಕರಾಗಿ ಮತ್ತು ADHD ಯೊಂದಿಗೆ ಹೋರಾಡಿದ ವ್ಯಕ್ತಿಯಾಗಿ, ಕ್ಯಾನ್ಸರ್, ಹೈಪರ್ಆಕ್ಟಿವಿಟಿ ಮತ್ತು ನರ ವರ್ತನೆಯ ಹಾನಿಗಳಿಗೆ ಸಂಬಂಧಿಸಿರುವ ಆಹಾರವನ್ನು ನೀಡಲು ನಾವು ಶಾಲೆಗಳಿಗೆ ಅವಕಾಶ ನೀಡುವುದು ಸ್ವೀಕಾರಾರ್ಹವಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಈ ಮಸೂದೆಯು ಶಾಲೆಗಳಿಗೆ ಆರೋಗ್ಯವನ್ನು ಉತ್ತಮವಾಗಿ ರಕ್ಷಿಸಲು ಅಧಿಕಾರ ನೀಡುತ್ತದೆ. ನಮ್ಮ ಮಕ್ಕಳ ಯೋಗಕ್ಷೇಮ ಮತ್ತು ಈ ಅಪಾಯಕಾರಿ ವಸ್ತುಗಳ ಬಳಸುವುದನ್ನು ನಿಲ್ಲಿಸಲು ತಯಾರಕರನ್ನು ಪ್ರೋತ್ಸಾಹಿಸಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ಎಸ್​ಬಿಐಗೆ ಸುಪ್ರೀಂ ಗಡುವು

ಪ್ರಸ್ತುತ ಕ್ಯಾಲಿಫೋರ್ನಿಯಾ ರಾಜ್ಯದ ಶಾಸನದ ಪ್ರಕಾರ, ಶಿಶುವಿಹಾರದಿಂದ ಹನ್ನೆರಡನೆಯ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಉಚಿತ ಊಟ ಮತ್ತು ಉಪಹಾರವನ್ನು ಪಡೆಯಬೇಕು. ಅವರಿಗೆ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಅಥವಾ ಪ್ರೋಟೀನ್‌ಗಳನ್ನು ಒದಗಿಸಬೇಕೆಂದು ರಾಜ್ಯ ನಿಯಮಗಳು ಕಡ್ಡಾಯಗೊಳಿಸುತ್ತವೆ. ಈ ನಿಯಮಗಳು ಕೆಲವು ವಸ್ತುಗಳಲ್ಲಿ ನೀಡಬಹುದಾದ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬುಗಳ ಪ್ರಮಾಣವನ್ನು ಸಹ ಸೂಚಿಸುತ್ತವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ