ಲಂಡನ್: ಲಾಹೋರ್‌ನ ಕೊನೆಯ ಸಿಖ್ ಮಹಾರಾಜ ದುಲೀಪ್ ಸಿಂಗ್ ಅವರ ಮಗ ಪ್ರಿನ್ಸ್ ವಿಕ್ಟರ್ ಸಿಂಗ್ ಅವರ ಲಂಡನ್‌ನ ಮನೆ 150 ಕೋಟಿಗೆ ಮಾರಾಟವಾಗಿದೆ.
ಹೌದು ಅವಿಭಜಿತ ಭಾರತದಲ್ಲಿ ಲಾಹೋರ್‌ನ ಸಿಖ್ ರಾಜಮನೆತನದ ಕೊನೆಯ ರಾಜನಾಗಿದ್ದ ಮಹಾರಾಜ ದುಲೀಪ್ ಸಿಂಗ್ ದೇಶದಿಂದ ಗಡಿಪಾರಾಗಿದ್ದಾಗ ಲಂಡನ್‌ನಲ್ಲಿ ನೆಲೆಸಿದ್ದರು. ಅವರ ನಂತರ ಅವರ ಮಗ ಪ್ರಿನ್ಸ್ ವಿಕ್ಟರ್ ಅಲ್ಬರ್ಟ್ ಜೇ ಸಿಂಗ್ ಲಂಡನ್‌ನಲ್ಲಿ ನೆಲೆಸಿದ್ದ ಲಿಟಲ್ ಬೋಲ್ಟನ್ಸ್ ಮನೆ ಈಗ ಮಾರಾಟವಾಗಿದೆ.
ಐದು ಬೆಡ್‌ರೂಮ್‌ಗಳ ಈ ಐಸಾರಾಮಿ ಮನೆಯಲ್ಲಿ ಸರ್ ದುಲೀಪ್ ಸಿಂಗ್ ನಂತರ ಅವರ ಮಗ ವಿಕ್ಟರ್ ತಮ್ಮ ಬ್ರಿಟಿಷ್ ಪತ್ನಿ ಌನ್ ಕೋವೆಂಟ್ರಿ ಜತೆ ಇಲ್ಲಿಯೇ ನೆಲೆಸಿದ್ದರು. ಆದರೆ ಕಾಲಾನಂತರ ಅತಿಯಾದ ವೈಭವದ ಜೀವನ ನಡೆಸಿದ್ದ ಪ್ರಿನ್ಸ್ ದಿವಾಳಿಯಾಗಿದ್ದರು. ಆದ್ರೆ ಈಸ್ಟ್ ಇಂಡಿಯಾ ಕಂಪನಿಯಿಂದ ಬಳುವಳಿಯಾಗಿ ಬಂದಿದ್ದ ಈ ಮನೆಯನ್ನು ಹಾಗೇಯೇ ಉಳಿಸಿಕೊಳ್ಳಲಾಗಿತ್ತು.
2010ರಲ್ಲಿ ಈ ಮನೆಯನ್ನು ಸಾಂಪ್ರದಾಯಿಕ ಶೈಲಿಯಿಂದ ಆಧುನಿಕ ಜೀವನ ಶೈಲಿಗೆ ಮಾರ್ಪಡಿಸಲಾಗಿತ್ತು. ಆಗಿನಿಂದ ಒಬ್ಬ ಶ್ರೀಮಂತ ವ್ಯಕ್ತಿಯ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಅತ್ಯಾಧುನಿಕ ಶೈಲಿಯ ರೀತಿಯಲ್ಲಿ ಪರಿಸ್ಕರಿಸಿದ್ದ ಈ ಮನೆ ಈಗ 15,.5 ಮಿಲಿಯನ್ ಪೌಂಡ್ಸ್ ಅಂದ್ರೆ ಸುಮಾರು 150 ಕೋಟಿ ರೂ.ಗಳಿಗೆ ಮಾರಾಟವಾಗಿದೆ.
ಅಂದ ಹಾಗೇ ಈ ಮನೆಯಲ್ಲಿ ವಾಸವಾಗಿದ್ದ ಪ್ರಿನ್ಸ್ ವಿಕ್ಟರ್ ಇಂಗ್ಲೆಂಡ್‌ನ ಮಹಾರಾಣಿಯ ವಂಶಸ್ಥೆ ಌನ್ ಕೋವೆಂಟ್ರಿಯನ್ನು ಮದುವೆಯಾಗಿದ್ದ. ಆ ಕಾಲದಲ್ಲಿ ನಡೆದ ಕೆಲವೇ ಕೆಲ ಅಂತರ್ ವರ್ಣೀಯರ ನಡುವೆ ನಡೆದ ಮದುವೆ ಇದಾಗಿತ್ತು. ಇದಕ್ಕೆ ಕೆಲ ಬ್ರಿಟನ್‌ನ ಬಿಳಿಯ ವರ್ಣವಾದದ ಕೆಲ ಸೋಶಿಯಲೈಟ್ಸ್ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಬ್ರಿಟನ್ನಿನ ಆಗಿನ ಯುವರಾಜನಾಗಿದ್ರ ಎಡ್ವರ್ಡ್‌ನ ಬೆಂಬಲ ಇದ್ದುದರಿಂದ ಉಳಿದವರು ಸುಮ್ಮನಾಗಿದ್ದರು.
Published On - 7:08 pm, Mon, 24 August 20