AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಲಾ ಸಿಲ್ವಾಗೆ ಚಾರಿತ್ರಿಕ ಜಯ; 4ನೇ ಬಾರಿ ಅಧಿಕಾರಕ್ಕೇರಿ ಇತಿಹಾಸ ನಿರ್ಮಿಸಿದ ಎಡಪಂಥೀಯ ನಾಯಕ

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು 4ನೇ ಬಾರಿಗೆ ಅಭೂತಪೂರ್ವ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಲುಲಾ ಅವರನ್ನು ಜಾಗತಿಕ ರಾಜಕೀಯದಲ್ಲಿ ವಿಶೇಷವಾಗಿ ಗುರುತಿಸುವಂತೆ ಮಾಡಿದ ಪ್ರಮುಖ ಮೈಲುಗಲ್ಲುಗಳು ಸ್ಥಾಪಿತವಾಗಿವೆ. ತಮ್ಮ ಪ್ರತಿಸ್ಪರ್ಧಿಯಾದ ಫ್ಲೇವಿಯೋ ಅವರಿಗೆ ಟ್ರಂಪ್ ಬೆಂಬಲ ಇದ್ದರೂ ಲುಲಾ ಗೆಲುವು ಸಾಧಿಸಿದ್ದಾರೆ.

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಲಾ ಸಿಲ್ವಾಗೆ ಚಾರಿತ್ರಿಕ ಜಯ; 4ನೇ ಬಾರಿ ಅಧಿಕಾರಕ್ಕೇರಿ ಇತಿಹಾಸ ನಿರ್ಮಿಸಿದ ಎಡಪಂಥೀಯ ನಾಯಕ
ಬ್ರೆಜಿಲ್ ಅಧ್ಯಕ್ಷ ಲುಲಾImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 26, 2026 | 12:27 PM

Share

ಬ್ರೆಜಿಲ್, ಅಕ್ಟೋಬರ್ 26: ಇಲ್ಲಿಯ ಜನಪ್ರಿಯ ನಾಯಕ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Ignacio Lula da Silva) ಅವರು ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಭಾರಿಸಿದ್ದಾರೆ. ಈ ಮೂಲಕ 4ನೇ ಬಾರಿಗೆ ಬ್ರೆಜಿಲ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಜಾಗತಿಕ ರಾಜಕೀಯ ಕ್ಷೇತ್ರದಲ್ಲಿ ಅವರ ಈ ಪುನರಾಗಮನವು ಭಾರಿ ಗಮನಸೆಳೆದಿದೆ.

ಬ್ರೆಜಿಲ್​ನ ಮಾಜಿ ಅಧ್ಯಕ್ಷ ಜೇರ್ ಬೋಲ್ಸೊನಾರೋ ಅವರ ಹಿರಿಯ ಮಗ ಫ್ಲೇವಿಯೋ ಬೋಲ್ಸೊನಾರೋ ವಿರುದ್ಧ ನಡೆದ ನೇರ ಮತ್ತು ಕಠಿಣ ಪೈಪೋಟಿಯಲ್ಲಿ ಲುಲಾ ಡ ಸಿಲ್ವಾ ಅವರು ಶೇ. 51.75 ಮತ ಗಳಿಸಿ ಚುನಾವಣೆ ಜಯಿಸಿದ್ದಾರೆ. ಬೋಲ್ಸೊನಾರೋ ಶೇ. 48.25ರಷ್ಟು ಮತ ಗಳಿಸಿದರು. ಈ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲಿ ಲುಲಾ ಸೋತರೂ ನಂತರ ಕಂಬ್ಯಾಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಬ್ರೆಜಿಲ್‌ನ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಾರಿ (4ನೇ ಬಾರಿ) ಪ್ರಜಾಸತ್ತಾತ್ಮಕವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಲುಲಾ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಒಂದೆಡೆ ಮಿಲಿಟರಿ ದಾಳಿಯ ಎಚ್ಚರಿಕೆ, ಮತ್ತೊಂದೆಡೆ ಒಪ್ಪಂದದ ಮಾತು: ಟ್ರಂಪ್ ಮಾತುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ತಳಮಳ

ಕಾರ್ಮಿಕ ನಾಯಕನಿಂದ ಜಾಗತಿಕ ನಾಯಕನವರೆಗೆ ಲುಲಾ ಪ್ರಯಾಣ

ಕಾರ್ಮಿಕ ಸಂಘಟನೆಯ ನಾಯಕರಾಗಿದ್ದ ಲುಲಾ, ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ (Bolsa Familia) ಮೂಲಕ ಬ್ರೆಜಿಲ್‌ನ ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದ ಧುರೀಣರಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಬ್ರೆಜಿಲ್​ನಲ್ಲಿ ಎಡಪಕ್ಷದ ಆಡಳಿತ ಮುಂದುವರಿಸಿದ್ದಾರೆ.

ಕಠಿಣ ಕಾನೂನು ಸವಾಲುಗಳು, ಜೈಲು ವಾಸ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸಿ, ಮತ್ತೆ ದೇಶದ ಅತ್ಯುನ್ನತ ಹುದ್ದೆಗೆ ಅತ್ಯಂತ ಜನಪ್ರಿಯ ಬೆಂಬಲದೊಂದಿಗೆ ಮರಳಿರುವುದು ಅವರ ರಾಜಕೀಯ ಸೌಧದ ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ.

ಲುಲಾ ಗೆಲುವು ಹಾಗೂ ಕೆಲ ದಾಖಲೆಗಳು

  1. ನಾಲ್ಕು ಗೆಲುವು ಇದೇ ಮೊದಲು: ಬ್ರೆಜಿಲ್​ನಲ್ಲಿ ನಾಲ್ಕು ಬಾರಿ ಅಧ್ಯಕ್ಷೀಯ ಚುನಾವಣೆ ಗೆದ್ದ ಮೊದಲ ವ್ಯಕ್ತಿ ಲುಲಾ. 2003ರಿಂದ 2010ರವರೆಗೆ ಎರಡು ಬಾರಿ, ಹಾಗೂ 2022ರಿಂದ ಇಲ್ಲಿಯವರೆಗೆ ಎರಡು ಬಾರಿ ಅವರು ಬ್ರೆಜಿಲ್ ಅಧ್ಯಕ್ಷರಾಗಿದ್ದಾರೆ.
  2. ಮೊದಲ ಸುತ್ತಿನಲ್ಲಿ ಸೋತರೂ ಚುನಾವಣೆ ಗೆದ್ದ ಮೊದಲಿಗ: ಲುಲಾ ಅವರು ಈ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಫ್ಲೇವಿಯೋ ಬೋಲ್ಸೊನಾರೋ ವಿರುದ್ಧ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರ ರನ್ ಆಫ್​ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಆ ದೇಶದಲ್ಲಿ ಆಗಿದ್ದು ಇದೇ ಮೊದಲು.
  3. ಅತ್ಯಂತ ಹಿರಿಯ ಬ್ರೆಜಿಲ್ ಅಧ್ಯಕ್ಷ: ಲಲಾ ಅವರ ವಯಸ್ಸು 81 ವರ್ಷ ಇದೆ. ಕಳೆದ ಬಾರಿ ಅವರು 77ರ ವಯಸ್ಸಿನಲ್ಲಿ ಅಧ್ಯಕ್ಷರಾಗಿದ್ದರು. ಬ್ರೆಜಿಲ್​ನ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷನೆಂಬ ದಾಖಲೆ ಮಾಡಿದ್ದರು. ಈಗ 81 ವರ್ಷ ವಯಸ್ಸಿನಲ್ಲಿರುವ ಅವರು ಆ ದಾಖಲೆಯನ್ನು ವಿಸ್ತರಿಸಿದ್ದಾರೆ. ಈ ಅಧ್ಯಕ್ಷ ಅವಧಿ ಮುಗಿದರೆ ಅವರ ವಯಸ್ಸು 85 ವರ್ಷ ಇರುತ್ತದೆ.

ಇದನ್ನೂ ಓದಿ: ಮೆಕ್ಕಾ, ಮದೀನಾ ಗುರಿಯಾಗಿಸಿ ದಾಳಿ ಎಂದ ಸೌದಿ ಅರೇಬಿಯಾ: ಆರೋಪ ನಿರಾಕರಿಸಿದ ಹೌತಿಗಳು

ಬಲಪಂಥೀಯರ ಮಧ್ಯೆ ಎಡಪಂಥೀಯ ಸರ್ಕಾರ…

ಲ್ಯಾಟಿನ್ ಅಮೆರಿಕ ಭಾಗದ ಬಹುತೇಕ ದೇಶಗಳಲ್ಲಿ ಬಲಪಂಥೀಯರ ನೇತೃತ್ವದ ಸರ್ಕಾರಗಳಿವೆ. ಆದರೆ, ಲುಲಾ ಅವರು ಎಡಪಂಥೀಯ ಪಕ್ಷದ ನಾಯಕರಾಗಿದ್ದಾರೆ. ಅಮೆರಿಕದ ಬಗುಲಲ್ಲೇ ಎರಡು ದಶಕಗಳ ಕಾಲ ಎಡಪಂಥೀಯ ಸರ್ಕಾರ ಸ್ಥಾಪಿಸಿದ್ದಾರೆ. ಈ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ಲೇವಿಯೋ ಬೋಲ್ಸೊನಾರೋ ಅವರನ್ನು ಪೂರ್ಣವಾಗಿ ಬೆಂಬಲಿಸಿದ್ದರು. ಆದರೂ ಕೂಡ ಲೂಲಾ ಗೆಲುವು ಸಾಧಿಸಿರುವುದು ಗಮನಾರ್ಹ ಸಂಗತಿ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ