ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇತರರಿಗೆ ತೋರಿಸುವ ಹಂಬಲ/ತುಡಿತ ಬಹಳಷ್ಟು ಮಂದಿಗೆ ಇರುತ್ತೆ, ನಿಜಾ! ಅದಕ್ಕೆ ಅನುಗುಣವಾಗಿ Tik Tok, ಯೂಟ್ಯೂಬ್ಗಳಲ್ಲದೆ ಆ ಚಾಲೆಂಜ್ -ಈ ಚಾಲೆಂಜ್ ಅಂತಾ ಹತ್ತು ಹಲವಾರು ಮಾಧ್ಯಮಗಳನ್ನು ಬಳಸಿ ತಮ್ಮ ಟ್ಯಾಲೆಂಟ್ ಪ್ರದರ್ಶನಕ್ಕೆ ಮುಂದಾಗ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ತನ್ನ ಇಡೀ ದೈನಂದಿನ life ಅನ್ನೇ ಲೈವ್ ಸ್ಟ್ರೀಮಿಂಗ್ ಮುಖಾಂತರ ನೆಟ್ಟಿಗರ ವೀಕ್ಷಣೆಗೆ ಬಿಟ್ಟಿದ್ದಾನೆ!
ಎಲ್ಲಾ.. ಖುಲ್ಲಂ ಖುಲ್ಲಾ!!!
ಹೌದು, ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟ ಮೈಕಲ್ ಜೆರಿ ಅನ್ನೋ ಆಸಾಮಿ ಕಳೆದ ವರ್ಷ ತನ್ನ ಇಡೀ ದಿನಚರ್ಯೆಯನ್ನು ಇಂಟರ್ನೆಟ್ನಲ್ಲಿ ಸ್ಟ್ರೀಮಿಂಗ್ ಮುಖಾಂತರ ಲೈವ್ ಆಗಿ ಸಾರ್ವಜನಿಕ ವೀಕ್ಷಣೆಗೆ ಬಿಟ್ಟಿದ್ದಾನೆ. ಅಂದ ಹಾಗೆ, ಈತನ ಇಡೀ ದಿನಚರ್ಯೆ ಅಂದರೆ ಅದರಲ್ಲಿ ಮೈಕಲ್ ಶೌಚಾಲಯದಲ್ಲಿ ಇರೋದು ಮತ್ತು ಗೆಳತಿಯೊಬ್ಬಳೊಂದಿದೆ ಸೆಕ್ಸ್ ಮಾಡುವುದನ್ನು ಸಹ ತೋರಿಸಿಬಿಟ್ಟಿದ್ದಾನೆ. ಫುಲ್ ಓಪನ್ ಆಗಿ.. ಯಾವುದೇ ಫಿಲ್ಟರ್ ಇಲ್ಲದೇ!
ಇದಲ್ಲದೆ, ಕಂಠಪೂರ್ತಿ ಕುಡಿದು ಫುಲ್ ಟೈಟ್ ಆಗಿ ತನ್ನ ಸ್ನೇಹಿತರ ಜೊತೆ ಕಿತ್ತಾಡುವುದು ಹಾಗೂ ಅಪರಿಚಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸೋದನ್ನು ಸಹ ತೋರಿಸಿದ್ದಾನೆ ಈ ಮೈಕಲ್!