Philadelphia Mass Shooting: ಫಿಲಡೆಲ್ಫಿಯಾದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ ಮಕ್ಕಳು ಸೇರಿ ನಾಲ್ವರು ಬಲಿ

|

Updated on: Jul 04, 2023 | 9:35 AM

ಫಿಲಡೆಲ್ಫಿಯಾದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ(Mass Shooting) ಯಲ್ಲಿ ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Philadelphia Mass Shooting: ಫಿಲಡೆಲ್ಫಿಯಾದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ ಮಕ್ಕಳು ಸೇರಿ ನಾಲ್ವರು ಬಲಿ
ಸಾಮೂಹಿಕ ಗುಂಡಿನ ದಾಳಿ
Image Credit source: BBC
Follow us on

ಫಿಲಡೆಲ್ಫಿಯಾದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ(Mass Shooting) ಯಲ್ಲಿ ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಶಂಕಿತನನ್ನು ಬಂಧಿಸಲಾಗಿದೆ. ಡೇಟಾಬೇಸ್ ಪ್ರಕಾರ 2006 ರಿಂದ 550 ಕ್ಕೂ ಹೆಚ್ಚು ಸಾಮೂಹಿಕ  ಗುಂಡಿನ ದಾಳಿ ನಡೆದಿವೆ, ಇದರಲ್ಲಿ ಕನಿಷ್ಠ 2,900 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 2,000 ಜನರು ಗಾಯಗೊಂಡಿದ್ದಾರೆ.

ಇತ್ತೀಚೆಗೆ ಬಾಲ್ಟಿಮೋರ್‌ನಲ್ಲಿ ಬ್ಲಾಕ್ ಪಾರ್ಟಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಡೆದು ಇಬ್ಬರು ಮೃತಪಟ್ಟು 28 ಮಂದಿ ಗಾಯಗೊಂಡಿದ್ದರು.
ಗನ್ ವಯಲೆನ್ಸ್ ಆರ್ಕೈವ್ ಪ್ರಕಾರ, ಈ ವರ್ಷ ಇಲ್ಲಿಯವರೆಗೆ ಅಮೆರಿಕದಲ್ಲಿ 339 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ.

ಮತ್ತಷ್ಟು ಓದಿ: US Mass Shooting: ಅಮೆರಿಕದಲ್ಲಿ ಮ್ಯೂಸಿಕ್​ ಫೆಸ್ಟಿವಲ್​ ವೇಳೆ ಸಾಮೂಹಿಕ ಗುಂಡಿನ ದಾಳಿ, ಇಬ್ಬರು ಸಾವು, 3 ಮಂದಿಗೆ ಗಾಯ

ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ ನಡೆದಿದ್ದು ಮಾಸ್ ಶೂಟಿಂಗ್
ವಾಷಿಂಗ್ಟನ್​ನಲ್ಲಿ ಎಲೆಕ್ಟ್ರಾನಿಕ್ ಡ್ಯಾನ್ಸ್​ ಮ್ಯೂಸಿಲ್​ ಫೆಸ್ಟಿವಲ್ ಸಮಯದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಜಾರ್ಜ್ ಪಟ್ಟಣದ ಸಮೀಪವಿರುವ ಕ್ಯಾಂಪ್ ಗ್ರೌಂಡ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ ಶೂಟರ್ ಸೇರಿದಂತೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ಎಂದು ಸಿಎನ್‌ಎನ್ ವರದಿ ಮಾಡಿತ್ತು.
ಗಾರ್ಜ್ ಆಂಫಿಥಿಯೇಟರ್ ಬಿಯಾಂಡ್ ವಂಡರ್‌ಲ್ಯಾಂಡ್ ಎಂಬ ಎರಡು ದಿನಗಳ ಸಂಗೀತ ಉತ್ಸವವನ್ನು ಆಯೋಜಿಸಿತ್ತು ಪ್ರದೇಶದಲ್ಲಿ ಸಾವಿರಾರು ಮಂದಿ ನೆರೆದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:34 am, Tue, 4 July 23