ಮೆಕ್ಸಿಕೋದ ಕಂದಕವೊಂದರಲ್ಲಿ ಮಾನವರ ಮೃತದೇಹಗಳಿರುವ 45 ಚೀಲಗಳು ಪತ್ತೆ, ಬೆಚ್ಚಿಬಿದ್ದ ಜನತೆ

|

Updated on: Jun 02, 2023 | 11:32 AM

ಮೆಕ್ಸಿಕೋMexico)ದ ಕಂದಕವೊಂದರಲ್ಲಿ ಮಾನವರ ಮೃತದೇಹವಿರುವ 45 ಚೀಲಗಳು ಪತ್ತೆಯಾಗಿದ್ದು, ಜನರ ನಿದ್ದೆಗೆಡಿಸಿದೆ. ಕಳೆದ ವಾರ ನಾಪತ್ತೆಯಾಗಿದ್ದ 7 ಯುವಕರ ಹುಡುಕಾಟಕ್ಕೆಂದು ತೆರಳಿದ್ದ ಪೊಲೀಸರಿಗೆ ಪಶ್ಚಿಮ ಮೆಕ್ಸಿಕನ್ ರಾಜ್ಯವಾದ ಜಲಿಸ್ಕೋದ ಕಂದಕದಲ್ಲಿ 45 ಚೀಲಗಳು ಪತ್ತೆಯಾಗಿವೆ.

ಮೆಕ್ಸಿಕೋದ ಕಂದಕವೊಂದರಲ್ಲಿ ಮಾನವರ ಮೃತದೇಹಗಳಿರುವ 45 ಚೀಲಗಳು ಪತ್ತೆ, ಬೆಚ್ಚಿಬಿದ್ದ ಜನತೆ
ಮೃತದೇಹ
Follow us on

ಮೆಕ್ಸಿಕೋMexico)ದ ಕಂದಕವೊಂದರಲ್ಲಿ ಮಾನವರ ಮೃತದೇಹವಿರುವ 45 ಚೀಲಗಳು ಪತ್ತೆಯಾಗಿದ್ದು, ಜನರ ನಿದ್ದೆಗೆಡಿಸಿದೆ. ಕಳೆದ ವಾರ ನಾಪತ್ತೆಯಾಗಿದ್ದ 7 ಯುವಕರ ಹುಡುಕಾಟಕ್ಕೆಂದು ತೆರಳಿದ್ದ ಪೊಲೀಸರಿಗೆ ಪಶ್ಚಿಮ ಮೆಕ್ಸಿಕನ್ ರಾಜ್ಯವಾದ ಜಲಿಸ್ಕೋದ ಕಂದಕದಲ್ಲಿ 45 ಚೀಲಗಳು ಪತ್ತೆಯಾಗಿವೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಮನುಷ್ಯರ ದೇಹಗಳಿದ್ದವು. ಪುರುಷರು ಮಾತ್ರವಲ್ಲ ಮಹಿಳೆಯರ ಮೃತದೇಹಗಳೂ ಇವೆ, ಮೇ 20 ರಿಂದ ನಾಪತ್ತೆಯಾಗಿರುವ ಸುಮಾರು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರಿಗಾಗಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು.

ಎಲ್ಲರೂ ಒಂದೇ ಕಾಲ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದರು, ಕಾಣೆಯಾದವರ ಬಗ್ಗೆ ಬೇರೆ ಬೇರೆ ದಿನ ದೂರು ದಾಖಲಾಗಿತ್ತು. ಈಗ ಮಾನವ ದೇಹಗಳು ಪತ್ತೆಯಾಗಿರುವ ಪ್ರದೇಶದಲ್ಲಿಯೇ ಕಾಲ್​ ಸೆಂಟರ್​ ಕೂಡ ಇದೆ. ವಿಧಿವಿಜ್ಞಾನ ತಜ್ಞರು ಮೃತರ ಸಂಖ್ಯೆ ಮತ್ತು ಅವರ ಗುರುತುಗಳನ್ನು ಇನ್ನೂ ಪತ್ತೆಹಚ್ಚಬೇಕಿದೆ.

ಕಾಲ್ ಸೆಂಟರ್ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ಪ್ರಾಥಮಿಕ ವಿಚಾರಣೆಗಳು ಸೂಚಿಸಿವೆ. 2021 ರಲ್ಲಿ, ಜಲಿಸ್ಕೋದ ಟೋನಾಲಾದಲ್ಲಿ, 11 ಜನರ ಮಾನವ ಅವಶೇಷಗಳಿದ್ದ ಸುಮಾರು 70 ಚೀಲಗಳು ಕಂಡುಬಂದಿದ್ದವು.

ಮತ್ತಷ್ಟು ಓದಿ: Kenya: ಪಾದ್ರಿ ಮಾತು ನಂಬಿ ಜೀವಂತ ಸಮಾಧಿಯಾದವರ ಸಂಖ್ಯೆ 200ಕ್ಕೆ ಏರಿಕೆ, ಇನ್ನೂ 600 ಮಂದಿ ನಾಪತ್ತೆ

ಮತ್ತು 2019 ರಲ್ಲಿ, ಜಪೋಪಾನ್‌ನ ಜನನಿಬಿಡ ಪ್ರದೇಶದಲ್ಲಿ 119 ಚೀಲಗಳಲ್ಲಿ 29 ಜನರ ಶವಗಳು ಪತ್ತೆಯಾಗಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ವರ್ಷದ ಮೊದಲ ಎರಡು ತಿಂಗಳಲ್ಲಿ, 33 ಜನರ ಅವಶೇಷಗಳು ಗ್ವಾಡಲಜಾರಾ ಪ್ರದೇಶದಲ್ಲಿ ಕಂಡುಬಂದಿತ್ತು.