ಕಚೇರಿಯ ಅವಧಿಯಲ್ಲಿ ನಿತ್ಯ 6 ಗಂಟೆಗಳ ಕಾಲ ಟಾಯ್ಲೆಟ್ನಲ್ಲೇ ಕುಳಿತಿರುತ್ತಿದ್ದ ಉದ್ಯೋಗಿ, ಕೆಲಸದಿಂದ ವಜಾ
ಕಚೇರಿ ಅವಧಿಯಲ್ಲಿ 6 ಗಂಟೆಗಳ ಕಾಲ ಟಾಯ್ಲೆಟ್ನಲ್ಲಿ ಕೂತಿದ್ದ ವ್ಯಕ್ತಿಯನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ. ಆರೋಗ್ಯ ಸರಿ ಇಲ್ಲ ಎಂದು 6 ಗಂಟೆಗಳ ಕಾಲ ಕೆಲಸ ಬಿಟ್ಟು ಆತ ಟಾಯ್ಲೆಟ್ನಲ್ಲಿ ಕುಳಿತಿದ್ದ ಎನ್ನಲಾಗಿದೆ.
ಕಚೇರಿ ಅವಧಿಯಲ್ಲಿ 6 ಗಂಟೆಗಳ ಕಾಲ ಟಾಯ್ಲೆಟ್ನಲ್ಲಿ ಕೂತಿದ್ದ ವ್ಯಕ್ತಿಯನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ. ಆರೋಗ್ಯ ಸರಿ ಇಲ್ಲ ಎಂದು 6 ಗಂಟೆಗಳ ಕಾಲ ಕೆಲಸ ಬಿಟ್ಟು ಆತ ಟಾಯ್ಲೆಟ್ನಲ್ಲಿ ಕುಳಿತಿದ್ದ ಎನ್ನಲಾಗಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ. ಉದ್ಯೋಗಿ ವಾಂಗ್ ಆರೋಗ್ಯ ಸರಿ ಇಲ್ಲ ಎನ್ನುವ ಕಾರಣವನ್ನು ನೀಡಿದ್ದ, ಅನ್ಯಾಯವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೂ ಕೋರ್ಟ್ ಕಂಪನಿ ಪರವಾಗಿ ತೀರ್ಪು ನೀಡಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ , ಶ್ರೀ ವಾಂಗ್ ಅವರು ಏಪ್ರಿಲ್ 2006 ರಲ್ಲಿ ಕಂಪನಿಗೆ ಸೇರಿದ್ದರು ಮತ್ತು ಡಿಸೆಂಬರ್ 2014 ರಲ್ಲಿ ಅವರು ಪೈಲ್ಸ್ಗೆ ಚಿಕಿತ್ಸೆ ಪಡೆದರು, ಇದಾದ ಬಳಿಕ ಅವರು ಆಗಾಗ ಬಾತ್ ರೂಮ್ಗೆ ತೆರಳಬೇಕಾಗಿತ್ತು. ಅವರ ಚಿಕಿತ್ಸೆಯು ಯಶಸ್ವಿಯಾಗಿದ್ದರೂ ಸಹ, ವಾಂಗ್ ಅವರು ನಿರಂತರ ನೋವನ್ನು ಅನುಭವಿಸುತ್ತಿದ್ದರು, ಅಂದರೆ ಜುಲೈ 2015 ರಿಂದ ಟಾಯ್ಲೆಟ್ನಲ್ಲಿ ದಿನಕ್ಕೆ ಮೂರರಿಂದ ಆರು ಗಂಟೆಗಳ ಕಾಲ ಕುಳಿತುಕೊಳ್ಳುವುದು ಅನಿವಾರ್ಯವಾಗಿತ್ತು.
ಮತ್ತಷ್ಟು ಓದಿ: Piles: ಜೀವ ಹಿಂಡುವ ಮೂಲವ್ಯಾಧಿ ನಿವಾರಣೆಗೆ ಇಲ್ಲಿದೆ ಪವರ್‌ಫುಲ್ ಹಳ್ಳಿಮದ್ದುಗಳು!
ಔಟ್ಲೆಟ್ ವರದಿ ಮಾಡಿದ ಕಂಪನಿಯ ದಾಖಲೆಗಳ ಪ್ರಕಾರ, 2015 ರಲ್ಲಿ ಸೆಪ್ಟೆಂಬರ್ 7 ರಿಂದ 17 ರವರೆಗೆ, ವಾಂಗ್ ಪ್ರತಿ ಕೆಲಸದ ಶಿಫ್ಟ್ ಸಮಯದಲ್ಲಿ ರೆಸ್ಟ್ ರೂಂಗೆ ಎರಡು ಅಥವಾ ಮೂರು ಬಾರಿ ಹೋಗುತ್ತಿದ್ದರು. ಪ್ರತಿ ಸಲವೂ 47 ರಿಂದ 3 ಗಂಟೆಯವರೆಗೆ ಇರುತ್ತಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ