Milk Production: ಗೋಮಾತೆಗೆ ನಮೋ ನಮಃ, ಹಾಲು ಉತ್ಪಾದನೆಯಲ್ಲಿ ಭಾರತದ ಚೊಚ್ಚಲ ಸ್ಥಾನ ಅಬಾಧಿತ

| Updated By: ಸಾಧು ಶ್ರೀನಾಥ್​

Updated on: Aug 27, 2022 | 4:53 PM

ಭಾರತದಲ್ಲಿ ಗೋಮಾತೆಗೆ ಅಗ್ರಸ್ಥಾನ ನಿಡಲಾಗಿದೆ. ಇನ್ನು ಹಾಲು ಉತ್ಪಾದನೆಯಲ್ಲಿಯೂ ವಿಶ್ವದಲ್ಲಿ ಭಾರತದ ಅಗ್ರ ಸ್ಥಾನ ಅಬಾಧಿತವಾಗಿ ಮುಂದುವರಿದಿದೆ.

Milk Production: ಗೋಮಾತೆಗೆ ನಮೋ ನಮಃ, ಹಾಲು ಉತ್ಪಾದನೆಯಲ್ಲಿ ಭಾರತದ ಚೊಚ್ಚಲ ಸ್ಥಾನ ಅಬಾಧಿತ
ಗೋಮಾತೆಗೆ ನಮೋ ನಮಃ, ಹಾಲು ಉತ್ಪಾದನೆಯಲ್ಲಿ ಭಾರತದ ಚೊಚ್ಚಲ ಸ್ಥಾನ ಅಬಾಧಿತ
Follow us on

ಹಾಲು ಉತ್ಪಾದನೆ: ಹಾಲು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. 2021 ರಲ್ಲಿ 209.96 ಮಿಲಿಯನ್ ಟನ್‌ಗಳನ್ನು ಉತ್ಪಾದನೆಯಾಗಿದೆ. ವಿಶ್ವದಲ್ಲಿ ಭಾರತದ ಡೈರಿ ಉತ್ಪನ್ನಗಳ ಪಾಲು ಶೇಕಡಾ 21 ರಷ್ಟಿದೆ. 2020-21ರಲ್ಲಿ ತಲಾ ಬಳಕೆ ದಿನಕ್ಕೆ 427 ಗ್ರಾಂ. ನಷ್ಟಿದೆ.

ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬುದು ಗಮನಾರ್ಹ. ಪ್ರಧಾನಿ ನರೇಂದ್ರ ಮೋದಿ 305 ಕೋಟಿ ರೂ ವೆಚ್ಚದಲ್ಲಿ ಗುಜರಾತ್‌ನ ಹಿಮ್ಮತ್‌ನಗರ ಪಟ್ಟಣದ ಬಳಿ ಸಬರಕಾಂತ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸೇರಿದ ಹಾಲು ಉತ್ಪಾದನಾ ಘಟಕ ಡೈರಿಯನ್ನು ಇತ್ತೀಚೆಗೆ ಉದ್ಘಾಟಿಸಿದರು. ಇದು ಅಮುಲ್ ಬ್ರಾಂಡ್ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ತಯಾರಿಸುತ್ತದೆ.