ಆಸ್ಟ್ರೇಲಿಯದ ಡಾರ್ಲಿಂಗ್ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವು; ವಿಡಿಯೋ ವೈರಲ್!

2018 ಮತ್ತು 2019 ರಲ್ಲಿ ಇದೇ ಪ್ರದೇಶದಲ್ಲಿ 10 ಲಕ್ಷ ಮೀನುಗಳು ಕಳಪೆ ನೀರಿನ ಹರಿವು, ಕಳಪೆ ನೀರಿನ ಗುಣಮಟ್ಟ ಮತ್ತು ಹಠಾತ್ ತಾಪಮಾನ ಬದಲಾವಣೆಗಳಿಂದ ಸತ್ತಿವೆ.

ಆಸ್ಟ್ರೇಲಿಯದ ಡಾರ್ಲಿಂಗ್ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವು; ವಿಡಿಯೋ ವೈರಲ್!
Australia fishes death
Image Credit source: Al Jazeera

Updated on: Mar 19, 2023 | 3:20 PM

ಸಿಡ್ನಿ: ಆಸ್ಟ್ರೇಲಿಯಾದ (Australia) ರಾಜಧಾನಿ ಸಿಡ್ನಿಯ (Sydney) ಪಶ್ಚಿಮಕ್ಕೆ ಸುಮಾರು 1,000km (620 ಮೈಲುಗಳು) ಮೆನಿಂಡಿ (Menindee) ಪಟ್ಟಣದ ಸಮೀಪವಿರುವ ಡಾರ್ಲಿಂಗ್ ನದಿಯಲ್ಲಿ ಈ ವಾರ ಸಾವಿರಾರು ಸತ್ತ ಮೀನುಗಳು ಕಂಡುಬಂದಿವೆ. ಆಸ್ಟ್ರೇಲಿಯಾದ ಎರಡನೇ ಅತಿ ಉದ್ದದ ನದಿಯಲ್ಲಿ ಕಡಿಮೆ ಮಟ್ಟದ ಆಮ್ಲಜನಕವು ನ್ಯೂ ಸೌತ್ ವೇಲ್ಸ್ ಭಾಗದಲ್ಲಿ ಲಕ್ಷಾಂತರ ಮೀನುಗಳು ಸಾಯಲು ಕಾರಣವಾಗಿದೆ ಎಂದು ಆಸ್ಟ್ರೇಲಿಯಾದ ಪರಿಸರ ಅಧಿಕಾರಿಗಳು ಹೇಳಿದ್ದಾರೆ. 2018 ಮತ್ತು 2019 ರಲ್ಲಿ ಇದೇ ಪ್ರದೇಶದಲ್ಲಿ 10 ಲಕ್ಷ ಮೀನುಗಳು ಕಳಪೆ ನೀರಿನ ಹರಿವು, ಕಳಪೆ ನೀರಿನ ಗುಣಮಟ್ಟ ಮತ್ತು ಹಠಾತ್ ತಾಪಮಾನ ಬದಲಾವಣೆಗಳಿಂದ ಸತ್ತಿವೆ.

NSW ಡಿಪಾರ್ಟ್‌ಮೆಂಟ್ ಆಫ್ ಪ್ಲಾನಿಂಗ್ ಅಂಡ್ ಎನ್ವಿರಾನ್‌ಮೆಂಟ್‌ನ ನೀರಿನ ವಿಭಾಗವು ಟ್ವಿಟ್ಟರ್‌ನಲ್ಲಿ “ಕರಗಿದ ಆಮ್ಲಜನಕದ ಮಟ್ಟಗಳಿಂದ ಮೀನಿನ ಆರೋಗ್ಯಕ್ಕೆ ಹಾನಿಯಾಗಿದೆ ” ಎಂದು ಹೇಳಿದೆ.

“ವೆಥೆರೆಲ್ ಸರೋವರ ಮತ್ತು ಮೆನಿಂಡಿ ಟೌನ್‌ಶಿಪ್ ನಡುವಿನ ಡಾರ್ಲಿಂಗ್ ನದಿಯಲ್ಲಿ ಹೆಚ್ಚಿನ ಸಂಖ್ಯೆಯ ಮೀನುಗಳು (ಪ್ರಧಾನವಾಗಿ ಬೋನಿ ಹೆರಿಂಗ್) ಸಾವನ್ನಪ್ಪಿದೆ” ಎಂದು ಸಂಸ್ಥೆ ಶುಕ್ರವಾರ (ಮಾರ್ಚ್ 17) ತಿಳಿಸಿದೆ.

ಆಸ್ಟ್ರೇಲಿಯಾ ಸರ್ಕಾರದ ಪ್ರಕಾರ ಇತ್ತೀಚಿನ ಪ್ರವಾಹದ ನಂತರ ಬೋನಿ ಹೆರಿಂಗ್ ಮತ್ತು ಕಾರ್ಪ್‌ನಂತಹ ಮೀನುಗಳ ಜನಸಂಖ್ಯೆಯು ನದಿಯಲ್ಲಿ ಹೆಚ್ಚಿದೆ, ಆದರೆ ಈಗ ಪ್ರವಾಹದ ನೀರು ಕಡಿಮೆಯಾದಂತೆ ದೊಡ್ಡ ಸಂಖ್ಯೆಯಲ್ಲಿ ಸಾಯುತ್ತಿವೆ.

ನದಿಯಲ್ಲಿ ಲಕ್ಷಾಂತರ ಸತ್ತ ಮೀನುಗಳು ಕಂಡುಬಂದಿವೆ ಮತ್ತು ಸಮಸ್ಯೆಯನ್ನು ನಿರ್ಣಯಿಸಲು ರಾಜ್ಯ ಮೀನುಗಾರಿಕೆ ಅಧಿಕಾರಿಗಳನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಶನಿವಾರ ವರದಿ ಮಾಡಿದೆ.

SBS ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ದೃಶ್ಯಾವಳಿಗಳು ನದಿಯ ಸಂಪೂರ್ಣ ಮೇಲ್ಮೈಯನ್ನು ಆವರಿಸಿರುವ ಸಾವಿರಾರು ಸತ್ತ ಮೀನುಗಳ ಮೂಲಕ ದೋಣಿ ನ್ಯಾವಿಗೇಟ್ ಮಾಡುವುದನ್ನು ತೋರಿಸಿದೆ.

ಇದನ್ನೂ ಓದಿ: ಶತ್ರುಗಳಲ್ಲಿ ಭಯ ಹುಟ್ಟಿಸಲು ಮತ್ತೆ ಸಮುದ್ರದ ಕಡೆಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ಮುಂದಿನ ವಾರ ವಾತಾವರಣ ತಂಪಾಗಾಗುವ ಮೊದಲು, ಸೂರ್ಯನ ಶಾಖ ಹೆಚ್ಚಾಗಿದ್ದರಿಂದ ನದಿಯ ಆಮ್ಲಜನಕದ ಮಟ್ಟವು ಈ ವಾರಾಂತ್ಯದಲ್ಲಿ ಮತ್ತಷ್ಟು ಕುಸಿಯಬಹುದು ಎಂದು ಆಸ್ಟ್ರೇಲಿಯಾದ ಯೋಜನೆ ಮತ್ತು ಪರಿಸರ ಸಂಸ್ಥೆ ಎಚ್ಚರಿಸಿದೆ.

Published On - 3:12 pm, Sun, 19 March 23