Moscow Terror Attack: ಮಾಸ್ಕೋದಲ್ಲಿ ಭಯೋತ್ಪಾದಕ ದಾಳಿ, ಶೌಚಾಲಯದಲ್ಲಿ 28 ಶವಗಳು ಪತ್ತೆ

ರಷ್ಯಾದ ಮಾಸ್ಕೋದಲ್ಲಿ ಕನ್ಸರ್ಟ್​ ಹಾಲ್​ನಲ್ಲಿ ನಡೆದ ಉಗ್ರರ ದಾಳಿ ಇಡಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇದುವರೆಗೆ 150ಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿದ್ದು, 107 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 28 ಮಂದಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. 4 ಬಂದೂಕುಧಾರಿಗಳು ಸೇರಿದಂತೆ 11 ಜನರನ್ನು ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ. 14 ಮೃತ ದೇಹಗಳು ಮೆಟ್ಟಿಲುಗಳ ಮೇಲೆ ಬಿದ್ದಿರುವುದು ಕಂಡುಬಂದಿದೆ.

Moscow Terror Attack: ಮಾಸ್ಕೋದಲ್ಲಿ ಭಯೋತ್ಪಾದಕ ದಾಳಿ, ಶೌಚಾಲಯದಲ್ಲಿ 28 ಶವಗಳು ಪತ್ತೆ
ಭಯೋತ್ಪಾದಕ ದಾಳಿ

Updated on: Mar 24, 2024 | 11:25 AM

ರಷ್ಯಾದ ಮಾಸ್ಕೋದಲ್ಲಿ ಕನ್ಸರ್ಟ್​ ಹಾಲ್​ನಲ್ಲಿ ನಡೆದ ಉಗ್ರರ ದಾಳಿ ಇಡಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇದುವರೆಗೆ 150ಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿದ್ದು, 107 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 28 ಮಂದಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. 4 ಬಂದೂಕುಧಾರಿಗಳು ಸೇರಿದಂತೆ 11 ಜನರನ್ನು ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ. 14 ಮೃತ ದೇಹಗಳು ಮೆಟ್ಟಿಲುಗಳ ಮೇಲೆ ಬಿದ್ದಿರುವುದು ಕಂಡುಬಂದಿದೆ.

ದಾಳಿ ನಡೆದ 24 ಗಂಟೆಗಳ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಪತ್ರಿಕಾಗೋಷ್ಠಿ ನಡೆಸಿ ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾರೇನು ಮಾಡಿದರೂ ರಷ್ಯಾವನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ. ರಷ್ಯಾದ ಭದ್ರತಾ ಮುಖ್ಯಸ್ಥರು ತಮ್ಮ ತಂಡವು ಬಿಳಿ ಕಾರಿನಲ್ಲಿ ಪರಾರಿಯಾಗುತ್ತಿದ್ದ 4 ಶಂಕಿತರನ್ನು ಹಿಡಿದಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಭಯೋತ್ಪಾದಕನೊಬ್ಬ ಗಾಯಗೊಂಡ ವ್ಯಕ್ತಿಯ ಕತ್ತು ಸೀಳುತ್ತಿರುವುದು ಕಂಡುಬಂದಿದೆ. ಈ ಭಯಾನಕ ದೃಶ್ಯ ಸಭಾಂಗಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಯೋತ್ಪಾದಕರು ಕನ್ಸರ್ಟ್ ಹಾಲ್‌ಗೆ ಪೆಟ್ರೋಲ್ ಬಳಸಿ ಸ್ಫೋಟಿಸಿ ಬೆಂಕಿ ಹಚ್ಚಿದ್ದರು.

ಮತ್ತಷ್ಟು ಓದಿ: Russia Concert Hall Attack: ಮಾಸ್ಕೋ ಮುಂಬೈ ಮಾದರಿ ದಾಳಿಯಲ್ಲಿ ಮೃತರ ಸಂಖ್ಯೆ 150ಕ್ಕೆ ಏರಿಕೆ

ದಾಳಿಕೋರರು ಪೆಟ್ರೋಲ್ ಬಾಂಬ್ ಎಸೆದು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವಿಟಾಲಿ ಹೇಳಿದ್ದಾರೆ. ಇದ್ದಕ್ಕಿದ್ದಂತೆ ದಾಳಿಕೋರರು ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು ಮತ್ತು ಸ್ವಲ್ಪ ಸಮಯದೊಳಗೆ ಮೃತದೇಹಗಳ ರಾಶಿ ಕಂಡುಬಂದಿದೆ. 5 ಮಂದಿ ದಾಳಿಕೋರರಿದ್ದು, ಅವರು ಸೇನಾ ಸಮವಸ್ತ್ರ ಧರಿಸಿದ್ದರು ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ