Tipu Sultan Gold Sword Auction: ಮೈಸೂರು ಟಿಪ್ಪು ಸುಲ್ತಾನ್ ಚಿನ್ನದ ಖಡ್ಗ ಲಂಡನ್ ಮನೆಯಲ್ಲಿ ಶೀಘ್ರದಲ್ಲೇ ಹರಾಜು, ಬೆಲೆ ಎಷ್ಟಿರಬಹುದು?

|

Updated on: May 15, 2023 | 4:45 PM

ಟಿಪ್ಪು ಸುಲ್ತಾನ್ ಕೊನೆಯದಾಗಿ ಬಳಸಿದ ಈ ಖಡ್ಗವನ್ನು ಈ ಹಿಂದೆ ಹರಾಜು ಮಾಡಲಾಗಿತ್ತು. ಮದ್ಯದ ದೊರೆ ವಿಜಯ ಮಲ್ಯ 2004 ರಲ್ಲಿ ಅದನ್ನು ಖಾಸಗಿ ಹರಾಜಿನಲ್ಲಿ 1.5 ಕೋಟಿ ರೂ.ಗೆ ಖರೀದಿಸಿದ್ದರು.

Tipu Sultan Gold Sword Auction: ಮೈಸೂರು ಟಿಪ್ಪು ಸುಲ್ತಾನ್ ಚಿನ್ನದ ಖಡ್ಗ ಲಂಡನ್ ಮನೆಯಲ್ಲಿ ಶೀಘ್ರದಲ್ಲೇ ಹರಾಜು, ಬೆಲೆ ಎಷ್ಟಿರಬಹುದು?
ಮೈಸೂರು ಟಿಪ್ಪು ಸುಲ್ತಾನ್ ಚಿನ್ನದ ಖಡ್ಗ ಲಂಡನ್ ಮನೆಯಲ್ಲಿ ಹರಾಜು
Follow us on

ಮುಂದಿನ ಮಂಗಳವಾರ ಮೇ 23 ರಂದು ಲಂಡನ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ (auction) ಇತಿಹಾಸದ (history) ಮಹತ್ವದ ತುಣುಕೊಂದು ಹರಾಜಿಗೆ ಬರಲಿದೆ. ಮೈಸೂರಿನ ಹುಲಿ (Mysore Tiger) ಎಂದೇ ಖ್ಯಾತರಾದ ಟಿಪ್ಪು ಸುಲ್ತಾನ್ (Tipu Sultan)ಗೆ ಸೇರಿದ ಅಮೂಲ್ಯವಾದ ಚಿನ್ನಾಭರಣದ ಖಡ್ಗ ಅದಾಗಿದೆ. ಅದನ್ನು ಟಿಪ್ಪು ಸುಲ್ತಾನ್ ತನ್ನ ಶಯ್ಯ ಕೋಣೆಗಳಲ್ಲಿ ಇಡುತ್ತಿದ್ದನಂತೆ. ಇತಿಹಾಸದ ಬಗ್ಗೆ ಅಪಾರ ಉತ್ಸಾಹ ಹೊಂದಿರುವ ಶ್ರೀಮಂತ ವ್ಯಕ್ತಿಯೊಬ್ಬರ ಮನೆಯಲ್ಲಿ ಈ ಖಡ್ಗವನ್ನು ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ. ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ನ ಚಿನ್ನದ ಕತ್ತಿ ಹರಾಜಿಗೆ ಬರಲಿದ್ದು, ಸದ್ಯಕ್ಕೆ ಅದನ್ನು ಗಾಜಿನ ಪೆಟ್ಟಿಗೆಯಲ್ಲಿ ಅವರ ಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಉಕ್ಕಿನ ಖಡ್ಗದ ಮೇಲಿನ ಚಿನ್ನದ ಹಿಡಿಕೆಯನ್ನು ರಾಜಸ್ಥಾನದ ಬುಡಕಟ್ಟು ಜನಾಂಗದ ರಾಜರ ಆಯುಧದ ಕಲೆಯಿಂದ ಕೆತ್ತನೆ ಮಾಡಲಾಗಿದೆ. ಕೋಫ್ಟಗರಿ ಅಲಂಕಾರಿಕ ಕುಸುರಿ ಕೆಲಸವೆಂದು (koftgari ornamental work) ಗುರುತಿಸಲಾಗಿದೆ. 1782 ರಲ್ಲಿ ತನ್ನ ತಂದೆಯ ಮರಣದ ನಂತರ ಅಧಿಕಾರಕ್ಕೆ ಏರಿದ ಟಿಪ್ಪುವಿನ ವಶದಲ್ಲಿ ಆ ಖಡ್ಗವಿತ್ತು. ರಾಜನು 1782 ರಿಂದ 1799 ರವರೆಗೆ ಇದನ್ನು ತನ್ನ ಸುಪರ್ದಿಯಲ್ಲಿ ಹೊಂದಿದ್ದನೆಂದು ಇತಿಹಾಸ ತಿಳಿಸುತ್ತದೆ.

ಖಡ್ಗದಲ್ಲಿ ಕತ್ತಿಯ ಹಿಡಿತದ ತುದಿಯಿಂದ ಕತ್ತಿಯ ಮೊನಚಿನವರೆಗೂ ತುಳುತ್ (thuluth), ಬುಬ್ರಿ ಮೋಟಿಫ್‌ಗಳನ್ನು (bubri motifss) ಕೆತ್ತಲಾಗಿದೆ. ಇದು ಸುಮಾರು 100 ಸೆಂ.ಮೀ. ಉದ್ದವಾಗಿದೆ ಮತ್ತು ಭಾರತೀಯ ಇತಿಹಾಸದ ಅಮೂಲ್ಯವಾದ ತುಣುಕು ಎಂದು ಪರಿಗಣಿಸಲಾಗಿದೆ. ವಿವಾದಗಳ ಹೊರತಾಗಿಯೂ ಟಿಪ್ಪು ಸುಲ್ತಾನ್ ಭಾರತೀಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿ ಉಳಿದಿದ್ದಾರೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಹೋರಾಡಿ ಹೆಸರುವಾಸಿಯಾಗಿದ್ದಾರೆ.

ಈ ಹಿಂದೆ ಹರಾಜಿನಲ್ಲಿ ಟಿಪ್ಪು ಖಡ್ಗವನ್ನು ವಿಜಯ್ ಮಲ್ಯ ಖರೀದಿಸಿದ್ದರುಮ ಅದರಿಂದ ಲತ್ತೆ ಬಡಿಯಿತಂತೆ!

ಟಿಪ್ಪು ಸುಲ್ತಾನ್ ಕೊನೆಯದಾಗಿ ಬಳಸಿದ ಈ ಖಡ್ಗವನ್ನು ಈ ಹಿಂದೆ ಹರಾಜು ಮಾಡಲಾಗಿತ್ತು. ಮದ್ಯದ ದೊರೆ ವಿಜಯ ಮಲ್ಯ 2004 ರಲ್ಲಿ ಅದನ್ನು ಖಾಸಗಿ ಹರಾಜಿನಲ್ಲಿ 1.5 ಕೋಟಿ ರೂ.ಗೆ ಖರೀದಿಸಿದ್ದರು.

ಆದರೆ, ಅಷ್ಟು ಬೆಲೆಬಾಳುವ ಖಡ್ಗ ಈಗ ಎಲ್ಲಿದೆ ಎಂಬುದು ತಿಳಿದುಬಂದಿಲ್ಲ. 2018 ರಲ್ಲಿ ಲಂಡನ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಲ್ಯ ಅವರ ವಕೀಲರು ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸುತ್ತಾ ಅವರು (ಮಲ್ಯ) ಐತಿಹಾಸಿಕ ಖಡ್ಗವನ್ನು ಮಾರಾಟ ಮಾಡಿಬಿಟ್ಟರು. ಏಕೆಂದರೆ ಅದು ತಮ್ಮ ಕುಟುಂಬಕ್ಕೆ ದುರಾದೃಷ್ಟವನ್ನು ತರುತ್ತಿದೆ ಎಂದು ಮಲ್ಯ ನಂಬಿದ್ದರು ಎಂದು ತಿಳಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:15 pm, Mon, 15 May 23