ನವಾಜ್ ಷರೀಫ್ ಚುನಾವಣಾ ಪ್ರಚಾರಕ್ಕೆ ಹುಲಿ, ಸಿಂಹಗಳೇ ಸೆಲೆಬ್ರಿಟಿಗಳು

ಪಾಕಿಸ್ತಾನದಲ್ಲಿ ಚುನಾವಣೆ ಪ್ರಚಾರಕ್ಕೆ ಹುಲಿ ಸಿಂಹಗಳು ಬಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (nawaz sharif ) ಅವರು ನಡೆಸಿದ ಚುನಾವಣಾ ರ್ಯಾಲಿಯಲ್ಲಿ ಸಿಂಹ, ಹುಲಿಗಳು ಕಂಡು ಬಂದಿದೆ. ಮಂಗಳವಾರ ಲಾಹೋರ್‌ನಲ್ಲಿ ಅವರ ನೇತೃತ್ವದ ರ್ಯಾಲಿಯನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಬೆಂಬಲಿಗರು ರ್ಯಾಲಿಗೆ ಸಿಂಹ ಮತ್ತು ಹುಲಿಯನ್ನು ತಂದಿದ್ದಾರೆ.

ನವಾಜ್ ಷರೀಫ್ ಚುನಾವಣಾ ಪ್ರಚಾರಕ್ಕೆ ಹುಲಿ, ಸಿಂಹಗಳೇ ಸೆಲೆಬ್ರಿಟಿಗಳು

Updated on: Jan 25, 2024 | 3:10 PM

ಲಾಹೋರ್‌, ಜ.25: ಚುನಾವಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳ ಪರ ಪ್ರಚಾರ ಮಾಡಲು ಸೆಲೆಬ್ರಿಟಿಗಳನ್ನು ಕರೆದುಕೊಂಡು ಬರುವುದನ್ನು ನೋಡಿದ್ದೀರಾ, ಆದರೆ ಪಾಕಿಸ್ತಾನದಲ್ಲಿ (pakistan) ಚುನಾವಣೆ ಪ್ರಚಾರಕ್ಕೆ ಹುಲಿ ಸಿಂಹಗಳು ಬಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (nawaz sharif ) ಅವರು ನಡೆಸಿದ ಚುನಾವಣಾ ರ್ಯಾಲಿಯಲ್ಲಿ ಸಿಂಹ, ಹುಲಿಗಳು ಕಂಡು ಬಂದಿದೆ. ಮಂಗಳವಾರ ಲಾಹೋರ್‌ನಲ್ಲಿ ಅವರ ನೇತೃತ್ವದ ರ್ಯಾಲಿಯನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಬೆಂಬಲಿಗರು ರ್ಯಾಲಿಗೆ ಸಿಂಹ ಮತ್ತು ಹುಲಿಯನ್ನು ತಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಸ್ವಾಗತಿಸಲು ಪಕ್ಷದ ಚಿಹ್ನೆಯನ್ನು ಪ್ರತಿನಿಧಿಸುವ ಪ್ರಾಣಿಗಳನ್ನು ತಂದಿದ್ದಾರೆ ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದ್ದು, 130 ಕ್ಷೇತ್ರದಲ್ಲಿ ಭರದಿಂದ ಪಿಎಂಎಲ್-ಎನ್ ಪಕ್ಷ ಪ್ರಚಾರ ಮಾಡುತ್ತಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿರುವ ವಿಡಿಯೋದಲ್ಲಿ PML-N ಬೆಂಬಲಿಗರು, ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ಕಬ್ಬಿಣದ ಪಂಜರದ ಒಳಗೆ ಹಾಕಿರುವ ಸಿಂಹ ಮತ್ತು ಹುಲಿಯನ್ನು ಕಾಣಬಹುದು. ಈ ಸಮಯದಲ್ಲಿ ಅನೇಕರು ಸಿಂಹ ಮತ್ತು ಹುಲಿಯ ಜತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ಮೋಹಿನಿ ರಸ್ತೆಯಲ್ಲಿ ನಡೆದ ರ್ಯಾಲಿಗೆ ಸಿಂಹವನ್ನು ತೆಗೆದುಕೊಂಡು ಬಂದಿದ್ದಾರೆ. ಈ ಮೂಲಕ ನವಾಜ್ ಷರೀಫ್ ಅವರ ಗಮನ ಸೆಳೆದಿದ್ದಾರೆ. ನಂತರ ಷರೀಫ್ ಅವರ ಸೂಚನೆಯಂತೆ ಸಿಂಹ ಮತ್ತು ಹುಲಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗಿದೆ. ಇನ್ನು ಮುಂದೆ ನಮ್ಮ ಪಕ್ಷದ ಯಾವುದೇ ರ್ಯಾಲಿಯಲ್ಲಿ ಕಾಡು ಪ್ರಾಣಿಗಳನ್ನು ತೆಗೆದುಕೊಂಡು ಬರದಂತೆ ನವಾಜ್ ಷರೀಫ್ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್ ಸರ್ಕಾರದ ‘ಭಾರತ ವಿರೋಧಿ’ ನಿಲುವಿಗೆ ಅಲ್ಲಿನ ವಿರೋಧ ಪಕ್ಷಗಳು ಕೆಂಡಾಮಂಡಲ

ರ್ಯಾಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಪ್ರಧಾನಿ ಕಚೇರಿಯಿಂದ ನನ್ನನ್ನು ಒತ್ತಡ ಹಾಕಿ ಹೊರಗೆ ಹಾಕಲಾಗಿದೆ. ಪಾಕಿಸ್ತಾನವನ್ನು ಪರಮಾಣು ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ನನ್ನನ್ನು ಜೈಲಿಗೆ ಹಾಕಲಾಗಿತ್ತು ಎಂದು ಹೇಳಿದ್ದಾರೆ. ತನ್ನ ಮಗನಿಗಾಗಿ ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಅವರನ್ನು ಜೈಲಿಗೆ ಹಾಕಲಾಗಿತ್ತು. ಅಲ್ಲಿಂದ ಅವರು ಲಂಡನ್​​​ಗೆ ಪಲಾಯನ ಹೋಗಿದ್ದರು. ಇದೀಗ ಮತ್ತೆ ಪಾಕಿಸ್ತಾನಕ್ಕೆ ಬಂದಿದ್ದಾರೆ. ಈ ಮೂಲಕ ಪಾಕ್​​​ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 3:01 pm, Thu, 25 January 24