ಪ್ರೀತಿಯ ನಾಯಿ ಎಂದು ಸಿಕ್ಕಿದ್ದೆಲ್ಲಾ ತಿನ್ನಿಸಿ ಸಾವಿಗೆ ಕಾರಣವಾದ ಮಹಿಳೆಗೆ ಜೈಲುಶಿಕ್ಷೆ

|

Updated on: Jul 30, 2024 | 12:08 PM

ಸಾಕುನಾಯಿಗೆ ಅತಿಯಾಗಿ ಆಹಾರ ನೀಡಿ ಅದರ ಸಾವಿಗೆ ಕಾರಣವಾದ ಮಹಿಳೆಗೆ ಜೈಲುಶಿಕ್ಷೆ ವಿಧಿಸಲಾಗಿದೆ. ಸಿಕ್ಕಿದ್ದೆಲ್ಲಾ ತಿನ್ನಿಸಿದ ಪರಿಣಾಮ ಅನೇಕ ರೋಗಗಳಿಗೆ ತುತ್ತಾಗಿ ಅದು ಸಾವನ್ನಪ್ಪಿದೆ.

ಪ್ರೀತಿಯ ನಾಯಿ ಎಂದು ಸಿಕ್ಕಿದ್ದೆಲ್ಲಾ ತಿನ್ನಿಸಿ ಸಾವಿಗೆ ಕಾರಣವಾದ ಮಹಿಳೆಗೆ ಜೈಲುಶಿಕ್ಷೆ
ನಾಯಿ
Follow us on

ಬಹುತೇಕರಿಗೆ ನಾಯಿ ಎಂದರೆ ಅಚ್ಚುಮೆಚ್ಚು, ಮನೆಯಲ್ಲಿ ಮೂರ್ನಾಲ್ಕು ನಾಯಿಗಳನ್ನು ಸಾಕುವವರಿದ್ದಾರೆ. ನಾಯಿಯನ್ನು ಮನೆಯ ಸದಸ್ಯರಂತೆಯೇ ಪರಿಗಣಿಸುತ್ತಾರೆ. ತಾವು ತಿನ್ನುವುದಕ್ಕಿಂತ ರುಚಿ ರುಚಿಯಾದ ಆಹಾರವನ್ನು ನಾಯಿಗೆ ಕೊಡುತ್ತಾರೆ. ಇಲ್ಲೊಬ್ಬ ಮಹಿಳೆ ತನ್ನ ಪ್ರೀತಿಯ ನಾಯಿಗೆ ಸಿಕ್ಕಿದ್ದೆಲ್ಲಾ ತಿನ್ನಿಸಿದ ಪರಿಣಾಮ ಕೊನೆಗೆ ನಾಯಿ ಕೊನೆಯುಸಿರೆಳೆದಿದೆ. ಇದೀಗ ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದ್ದು 2 ತಿಂಗಳ ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ನ್ಯೂಜಿಲೆಂಡ್​ನಲ್ಲಿ ನಡೆದಿದೆ.

ತನ್ನ ನಾಯಿಯ ವೈದ್ಯಕೀಯ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಲು ವಿಫಲರಾದ ಮಹಿಳೆಗೆ 720 ಡಾಲರ್​ ದಂಡ ವಿಧಿಸಲಾಯಿತು ಮತ್ತು ಒಂದು ವರ್ಷದವರೆಗೆ ನಾಯಿಯನ್ನು ಸಾಕದಂತೆ ನಿರ್ಬಂದ ಹೇರಲಾಗಿದೆ.

ದುಃಖಕರವೆಂದರೆ, ನಾವು ದಿನನಿತ್ಯದ ಕಡಿಮೆ ತೂಕ, ಹಸಿವಿನಿಂದ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪ್ರಾಣಿಗಳನ್ನು ನೋಡುತ್ತೇವೆ, ಆದರೆ ತೀವ್ರವಾಗಿ ಅತಿಯಾಗಿ ತಿನ್ನುವ ಅಸಹಾಯಕ ಪ್ರಾಣಿಯನ್ನು ನೋಡುವುದು ಅಷ್ಟೇ ಹೃದಯವಿದ್ರಾವಕವಾಗಿದೆ.

ಮತ್ತಷ್ಟು ಓದಿ: ನಾಯಿ ಮಾಂಸ ಮಾರಾಟ ಆರೋಪ: ಅಬ್ದುಲ್ ರಜಾಕ್​ಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ಶ್ರೀನಿವಾಸ್

2021ರಲ್ಲಿ ಪೊಲೀಸರು ಮಹಿಳೆ ಮನೆಗೆ ಹೋದಾಗ ನುಗ್ಗಿ ಎನ್ನುವ ನಾಯಿ ಅಲ್ಲಿತ್ತು, ಜತೆಗೆ ಇನ್ನೂ ಹಲವು ಶ್ವಾನಗಳಿದ್ದವು. ನುಗ್ಗಿ ಹೆಚ್ಚು ತೂಕ ಹೊಂದಿತ್ತು ಜತೆಗೆ ನಡೆದಾಡಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಆರಂಭದಲ್ಲಿ ನುಗ್ಗಿ 54 ಕೆಜಿಯಷ್ಟು ತೂಕವಿತ್ತು, ಎರಡು ತಿಂಗಳ ಅವಧಿಯಲ್ಲಿ 8.8 ಕೆಜಿಯಷ್ಟು ತೂಕನಷ್ಟ ಅನುಭವಿಸಿತು. ಜತೆಗೆ ಯಕೃತ್ತಿನಲ್ಲಿ ರಕ್ತಸ್ರಾವ ಶುರುವಾಗಿತ್ತು ಬಳಿಕ ಮೃತಪಟ್ಟಿದೆ.

ಶವಪರೀಕ್ಷೆಯಲ್ಲಿ ಕುಶಿಂಗ್ಸ್ ಕಾಯಿಲೆ ಮತ್ತು ಯಕೃತ್ತಿನ ಸಮಸ್ಯೆಗಳು ಸೇರಿದಂತೆ ಹೆಚ್ಚು ರೋಗಗಳಿರುವುದು ತಿಳಿದುಬಂದಿತ್ತು. ನುಗ್ಗಿಗೆ ಆಹಾರದ ಜತೆ ಪ್ರತಿದಿನ ಹತ್ತು ಚಿಕನ್ ತುಂಡುಗಳನ್ನು ಹಾಕಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ಜವಾಬ್ದಾರಿಯುತ ಮಾಲೀಕರಾದರೆ ನಾಯಿಗೆ ಸೂಕ್ತವಾದ ಆಹಾರವನ್ನು ಕೊಡುವುದಷ್ಟೇ ಅಲ್ಲದೆ ಅವುಗಳ ವ್ಯಾಯಾಮ, ಫಿಟ್​ನೆಸ್​ ಬಗೆಗೂ ಹೆಚ್ಚು ಗಮನಕೊಡುತ್ತಾರೆ. ಆದರೆ ಈ ನಾಯಿಯ ಮಾಲೀಕರು ಅದಕ್ಕೆ ಹೊಟ್ಟೆ ಬಿರಿಯುವಷ್ಟು ಆಹಾರವನ್ನು ತಿನ್ನಿಸಿ ಅದಕ್ಕೆ ನಡೆಯಲು ಶಕ್ತಿ ಇಲ್ಲದಂತೆ ಮಾಡಿದ್ದರು. ನುಗ್ಗಿ ತೂಕದಿಂದಾಗಿ ಅದರ ಹೃದಯಬಡಿತವನ್ನು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ