ಗುರುವಾರ ಸ್ವೀಡನ್‌ನ ಒರೆಬ್ರೊ ಬಳಿ ವಿಮಾನ ಪತನವಾಗಿದೆ. ವಿಮಾನದಲ್ಲಿದ್ದ 8 ಸ್ಕೈಡೈವರ್ಸ್, ಓರ್ವ ಪೈಲಟ್ ಸೇರಿ ಎಲ್ಲಾ ಒಂಬತ್ತು ಜನರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ವೀಡಿಷ್ ಪೊಲೀಸರು ತಿಳಿಸಿದ್ದಾರೆ.
“ಇದು ತುಂಬಾ ತೀವ್ರವಾದ ಅಪಘಾತ” ಎಂದು ಸ್ವೀಡಿಷ್ ಪೊಲೀಸರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. “ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.” ಡಿಎಚ್‌ಸಿ -2 ಟರ್ಬೊ ಬೀವರ್ ಎಂಬ ವಿಮಾನದಲ್ಲಿ ಎಂಟು ಸ್ಕೈಡೈವರ್‌ಗಳು ಮತ್ತು ಒಬ್ಬ ಪೈಲಟ್ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ ಅದು ಒರೆಬ್ರೊ ವಿಮಾನ ನಿಲ್ದಾಣದ ರನ್ ವೇ ಮೇಲೆ ಚಲಿಸುವಾಗ ಅಪ್ಪಳಿಸಿದೆ. ಈ ಪರಿಣಾಮಕ್ಕೆ ಬೆಂಕಿ ಕಾಣಿಸಿಕೊಂಡಿದೆ.
ಒರೆಬ್ರೊದಲ್ಲಿ ನಡೆದ ವಿಮಾನ ಅಪಘಾತದ ಬಗ್ಗೆ ನನಗೆ ದುರಂತ ಮಾಹಿತಿ ಬಂದಿರುವುದು ಬಹಳ ದುಃಖದ ಸಂಗತಿ ಎಂದು ಪ್ರಧಾನಿ ಸ್ಟೀಫನ್ ಲೋಫ್ವೆನ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ನನ್ನ ಆಲೋಚನೆಗಳು ಈ ಕಷ್ಟದ ಸಮಯದಲ್ಲಿ ಬಲಿಯಾದವರ ಕುಟುಂಬಗಳು ಮತ್ತು ಪ್ರೀತಿಪಾತ್ರರ ಜೊತೆ ಇವೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಇದೇ ರೀತಿಯ ಅಪಘಾತದಲ್ಲಿ, 2019 ರಲ್ಲಿ ಉತ್ತರ ಸ್ವೀಡನ್‌ನಲ್ಲಿ ಒಂಬತ್ತು ಜನರು ಸ್ಕೈಡೈವರ್‌ಗಳನ್ನು ಹೊತ್ತ ವಿಮಾನ ಟೇಕ್‌ಆಫ್ ಆದ ಕೆಲವೇ ಸಮಯದಲ್ಲಿ ಅಪಘಾತಕ್ಕೀಡಾಗಿತು. ಇನ್ನು ಈ ಬಗ್ಗೆ ತನಿಖೆ ಕೈಗೊಂಡಾಗ ವಿಮಾನವನ್ನು ಸರಿಯಾಗಿ ಲೋಡ್ ಮಾಡದಿದ್ದ ಕಾರಣ ಈ ಅಪಘಾತ ಸಂಭವಿಸಿತ್ತು ಎಂದ ವರದಿಗಳಲ್ಲಿ ತಿಳಿದುಬಂದಿತ್ತು.
All nine people (eight skydivers and one pilot) onboard were found dead in the crash of an airplane outside Orebro, Sweden, on Thursday, Swedish police said: Reuters
— ANI (@ANI) July 9, 2021
ಇದನ್ನೂ ಓದಿ: ಫಿಲಿಪೈನ್ಸ್ ಸೇನಾ ವಿಮಾನ ಅಪಘಾತ; 17 ಯೋಧರ ಮರಣ, 40 ಮಂದಿಯ ರಕ್ಷಣೆ-ಸಾವಿನ ಸಂಖ್ಯೆ ಏರುವ ಸಾಧ್ಯತೆ
Published On - 7:05 am, Fri, 9 July 21