ಬಾಂಗ್ಲಾ ಮಹಿಳೆಯರನ್ನು ಮದುವೆಯಾಗಬೇಡಿ; ತನ್ನ ಪ್ರಜೆಗಳಿಗೆ ಚೀನಾ ಎಚ್ಚರಿಕೆ

ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಮ್ಯಾಚ್‌ಮೇಕಿಂಗ್ ಯೋಜನೆಗಳ ಬಗ್ಗೆ ಚೀನಾ ತನ್ನ ದೇಶದ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಡಾಕಾದಲ್ಲಿರುವ ಚೀನಾದ ರಾಯಭಾರ ಕಚೇರಿಯು ಬಾಂಗ್ಲಾದೇಶದಲ್ಲಿ ಗಡಿಯಾಚೆಗಿನ ವಿವಾಹಗಳ ವಿರುದ್ಧ ತನ್ನ ನಾಗರಿಕರಿಗೆ ಕಠಿಣ ಎಚ್ಚರಿಕೆ ನೀಡಿದೆ. ಬಾಂಗ್ಲಾದೇಶದ ಮಹಿಳೆಯರನ್ನು ಮದುವೆಯಾಗಬಾರದು, ಅವರೊಂದಿಗೆ ಸಂಬಂಧ ಬೆಳೆಸಬಾರದು ಎಂದು ಚೀನಾ ತನ್ನ ನಾಗರಿಕರಿಗೆ ಆದೇಶಿಸಿದೆ.

ಬಾಂಗ್ಲಾ ಮಹಿಳೆಯರನ್ನು ಮದುವೆಯಾಗಬೇಡಿ; ತನ್ನ ಪ್ರಜೆಗಳಿಗೆ ಚೀನಾ ಎಚ್ಚರಿಕೆ
Wedding

Updated on: May 26, 2025 | 3:40 PM

ನವದೆಹಲಿ, ಮೇ 26: ಢಾಕಾದಲ್ಲಿರುವ ಚೀನಾದ ರಾಯಭಾರ ಕಚೇರಿಯಿಂದ ನೀಡಲಾದ ಎಚ್ಚರಿಕೆಯಲ್ಲಿ ಬಾಂಗ್ಲಾದೇಶದ (Bangladesh) ಮಹಿಳೆಯರನ್ನು ಚೀನಾ ನಾಗರಿಕರು ಮದುವೆಯಾಗಬಾರದು ಎಂದು ಆದೇಶ ನೀಡಿದೆ. ಗಡಿಯಾಚೆಗಿನ ವಿವಾಹ ವ್ಯವಸ್ಥೆಗಳ ಬಗ್ಗೆ ಚೀನಾ ತನ್ನ ನಾಗರಿಕರಿಗೆ ತೀವ್ರ ಎಚ್ಚರಿಕೆ ನೀಡಿದೆ. ಬಾಂಗ್ಲಾದೇಶದಲ್ಲಿರುವ ಚೀನೀ ರಾಯಭಾರ ಕಚೇರಿ ಭಾನುವಾರ ಒಂದು ಸಲಹೆಯನ್ನು ನೀಡಿದ್ದು, ತನ್ನ ನಾಗರಿಕರು ಅಕ್ರಮ ಗಡಿಯಾಚೆಗಿನ ವಿವಾಹ ವ್ಯವಸ್ಥೆಗಳಿಂದ ದೂರವಿರಬೇಕು ಮತ್ತು ಆನ್‌ಲೈನ್ ವಿವಾಹ ಯೋಜನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಒತ್ತಾಯಿಸಿದೆ.

ನಿರ್ದಿಷ್ಟವಾಗಿ ಅಕ್ರಮ ಆನ್‌ಲೈನ್ ಮ್ಯಾಚ್‌ಮೇಕಿಂಗ್ ಏಜೆಂಟ್​ ಮತ್ತು ವಿದೇಶಿ ಮಹಿಳೆಯರನ್ನು ಮದುವೆಯಾಗುತ್ತಿರುವ ಅಪಾಯಕಾರಿ ಬೆಳವಣಿಗೆಯ ವಿರುದ್ಧ ಎಚ್ಚರಿಕೆ ನೀಡಿದೆ. ಚೀನೀ ಪ್ರಜೆಗಳು ಬಾಂಗ್ಲಾದೇಶದ ಅಕ್ರಮ ಮ್ಯಾಚ್​ಮೇಕಿಂಗ್ ಬಲೆಗೆ ಬೀಳಬಾರದು, ಡೇಟಿಂಗ್ ಆ್ಯಪ್​ಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು, ಬಾಂಗ್ಲಾದೇಶ ಮೂಲದವರನ್ನು ಮದುವೆಯಾಗುವಾಗ ಎಚ್ಚರಿಕೆ ಹೊಂದಬೇಕು, ಚೀನೀಯರು ಮೋಸಕ್ಕೆ ಒಳಗಾಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: India vs China-Bangla: ಪಾಕಿಸ್ತಾನದ ಗಡಿಯಲ್ಲಿ ಭಾರತದ್ದು ಉಕ್ಕಿನ ಕೋಟೆ; ಚೀನಾ, ಬಾಂಗ್ಲಾ ಗಡಿಯಲ್ಲಿ ಅಕ್ಷರಶಃ ಅಭೇದ್ಯ ಕೋಟೆ

ಇದನ್ನೂ ಓದಿ
ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿದವರನ್ನು ಹೊಸಕಿ ಹಾಕಿದ್ದೇವೆ: ಮೋದಿ
ತನ್ನ ಅಸ್ತಿತ್ವಕ್ಕೆ ಭಾರತವೇ ದೊಡ್ಡ ಬೆದರಿಕೆ ಎಂದುಕೊಂಡಿದೆ ಪಾಕಿಸ್ತಾನ
ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ
ಪಾಕ್​ ಸರ್ಕಾರದೊಂದಿಗೆ ಮಾತನಾಡುವುದು ನಿಷ್ಪ್ರಯೋಜಕ: ಇಮ್ರಾನ್ ಖಾನ್

ಚೀನಾದಲ್ಲಿ ತೀವ್ರ ಲಿಂಗ ಅಸಮತೋಲನ ಉಂಟಾಗಿದೆ. ಇದುವರೆಗೂ ಒಂದೇ ಮಗುವನ್ನು ಹೊಂದಬೇಕೆಂನ ನೀತಿಯನ್ನು ಚೀನಾ ಜಾರಿ ಮಾಡಿತ್ತು. ಅದರ ಪರಿಣಾಮವನ್ನು ಇಂದಿನ ಪೀಳಿಗೆಯವರು ಎದುರಿಸುತ್ತಿದ್ದಾರೆ. ಗಂಡು ಮಕ್ಕಳಿಗೆ ಸಮನಾಗಿ ಚೀನಾದಲ್ಲಿ ಮಹಿಳಾ ಅನುಪಾತವಿಲ್ಲ. ಇದರಿಂದಾಗಿ 30 ಮಿಲಿಯನ್ ಪುರುಷರು ಚೀನಾದಲ್ಲಿ ಸಂಗಾತಿಯನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ಹೀಗಾಗಿ, ನೆರೆಯ ದೇಶವಾದ ಬಾಂಗ್ಲಾದೇಶದಿಂದ ಮದುವೆ ಮಾಡಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿತ್ತು. ಚೀನಾದಲ್ಲಿ ಹೆಚ್ಚಾಗಿರುವ ವಿದೇಶಿ ವಧುಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶದಲ್ಲಿ ಮ್ಯಾಚ್​ ಫಿಕ್ಸಿಂಗ್ ಏಜೆಂಟುಗಳ ದಂಧೆಯೇ ಶುರುವಾಗಿತ್ತು.

ಇದನ್ನೂ ಓದಿ: India vs China: ಪಾಕಿಸ್ತಾನದ ಮಿತ್ರನಾದರೂ ಭಾರತವನ್ನು ಎದುರುಹಾಕಿಕೊಳ್ಳುವಷ್ಟು ದಡ್ಡನಲ್ಲ ಚೀನಾ; ಯಾಕೆ ಹೀಗೆ?

ಚೀನಾದ ಕಾನೂನಿನ ಪ್ರಕಾರ, ವಿವಾಹ ಸಂಸ್ಥೆಗಳು ಗಡಿಯಾಚೆಗಿನ ವಿವಾಹ ಸೇವೆಗಳನ್ನು ಸುಗಮಗೊಳಿಸುವುದನ್ನು ಅಥವಾ ಮರೆಮಾಚುವುದನ್ನು ನಿಷೇಧಿಸಲಾಗಿದೆ. ವ್ಯಕ್ತಿಗಳು ಆರ್ಥಿಕ ಲಾಭಕ್ಕಾಗಿ ಅಥವಾ ಮೋಸಗೊಳಿಸುವ ವಿಧಾನಗಳ ಮೂಲಕ ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಅಕ್ರಮ ಗಡಿಯಾಚೆಗಿನ ವಿವಾಹಗಳಲ್ಲಿ ತೊಡಗಿರುವುದು ಕಂಡುಬಂದರೆ ಯಾವುದೇ ಚೀನೀ ಪ್ರಜೆ ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ರಾಯಭಾರ ಕಚೇರಿ ಎಚ್ಚರಿಸಿದೆ. ಬಾಂಗ್ಲಾದೇಶದ ಮ್ಯಾಚ್ ಫಿಕ್ಸಿಂಗ್ ಏಜೆಂಟ್​ಗಳ ಇದೇ ರೀತಿಯ ಜಾಲಗಳು ಬಾಂಗ್ಲಾದೇಶದ ಮಹಿಳೆಯರನ್ನು ಭಾರತಕ್ಕೂ ಕಳ್ಳಸಾಗಣೆ ಮಾಡಿವೆ.

ಬಾಂಗ್ಲಾದೇಶದ ಮಾನವ ಕಳ್ಳಸಾಗಣೆ ವಿರೋಧಿ ಕಾಯ್ದೆ ಮತ್ತು ದಂಡ ಸಂಹಿತೆಯು ಮಾನವ ಕಳ್ಳಸಾಗಣೆ ಸಂಘಟಕರಿಗೆ ಕನಿಷ್ಠ 7 ವರ್ಷಗಳವರೆಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಗಳನ್ನು ವಿಧಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ