Nobel Prize in Chemistry 2023: ಕ್ವಾಂಟಮ್ ಡಾಟ್‌ಗಳ ಅನ್ವೇಷಣೆ, ಸಂಶ್ಲೇಷಣೆಗಾಗಿ ಮೂವರಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

|

Updated on: Oct 04, 2023 | 4:23 PM

ಕ್ವಾಂಟಮ್ ಡಾಟ್‌ಗಳ ಅನ್ವೇಷಣೆ ಮತ್ತು ಸಂಶ್ಲೇಷಣೆಗಾಗಿ ಮೌಂಗಿ ಜಿ ಬವೆಂಡಿ, ಲೂಯಿಸ್ ಇ ಬ್ರಸ್ ಮತ್ತು ಅಲೆಕ್ಸಿ ಐ ಎಕಿಮೊವ್​ಗೆ 2023ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

Nobel Prize in Chemistry 2023: ಕ್ವಾಂಟಮ್ ಡಾಟ್‌ಗಳ ಅನ್ವೇಷಣೆ, ಸಂಶ್ಲೇಷಣೆಗಾಗಿ ಮೂವರಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ
ಮೌಂಗಿ ಜಿ ಬವೆಂಡಿ, ಲೂಯಿಸ್ ಇ ಬ್ರಸ್ ಮತ್ತು ಅಲೆಕ್ಸಿ ಐ ಎಕಿಮೊವ್
Follow us on

ಮೌಂಗಿ ಜಿ ಬವೆಂಡಿ, ಲೂಯಿಸ್ ಇ ಬ್ರಸ್ ಮತ್ತು ಅಲೆಕ್ಸಿ ಐ ಎಕಿಮೊವ್, ಈ ಮೂವರಿಗೆ 2023ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು (Nobel Prize in Chemistry )ನೀಡಲಾಗಿದೆ. ಈ ಪ್ರಶಸ್ತಿಯನ್ನು “ಕ್ವಾಂಟಮ್ ಡಾಟ್‌”ಗಳ ಅನ್ವೇಷಣೆ ಮತ್ತು ಸಂಶ್ಲೇಷಣೆಗಾಗಿ ನೀಡಲಾಗಿದೆ. ಇನ್ನು ಈ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯು ಈ ವಾರದದಲ್ಲಿ ನೀಡಲಾದ ಮೂರನೇ ಪ್ರಶಸ್ತಿಯಾಗಿದೆ. ಮಂಗಳವಾರ, ಫ್ರಾನ್ಸ್‌ನ ಪಿಯರೆ ಅಗೋಸ್ಟಿನಿ, ಹಂಗೇರಿಯನ್-ಆಸ್ಟ್ರಿಯನ್ ಫೆರೆಂಕ್ ಕ್ರೌಸ್ಜ್ ಮತ್ತು ಫ್ರಾಂಕೋ-ಸ್ವೀಡನ್ ಆನ್ನೆ ಎಲ್’ಹುಲ್ಲಿಯರ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅದಕ್ಕೂ ಮೊದಲು, ಹಂಗೇರಿಯನ್ ವಿಜ್ಞಾನಿ ಕ್ಯಾಟಲಿನ್ ಕರಿಕೊ ಮತ್ತು ಅವರ ಅಮೇರಿಕನ್ ಸಹೋದ್ಯೋಗಿ ಡ್ರೂ ವೈಸ್ಮನ್ ಅವರಿಗೆ ನೊಬೆಲ್ ಮೆಡಿಸಿನ್ ಪ್ರಶಸ್ತಿಯನ್ನು ನೀಡಲಾಯಿತು.

ರಸಾಯನಶಾಸ್ತ್ರ ಪ್ರಶಸ್ತಿಯನ್ನು ಅಕ್ಟೋಬರ್ 5, 6 ಮತ್ತು 9 ರಂದು ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ವರ್ಷದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರನ್ನು ಘೋಷಿಸಿರಬಹುದು ಎಂದು ಸ್ವೀಡಿಷ್ ಮಾಧ್ಯಮ ಈ ಮೊದಲೇ ವರದಿ ಮಾಡಿತ್ತು.

ಇನ್ನು ಕ್ವಾಂಟಮ್ ಡಾಟ್​​ಗಳ ಅನ್ವೇಷಣೆ ಮತ್ತು ಸಂಶ್ಲೇಷಣೆಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಕ್ವಾಂಟಮ್ ಚುಕ್ಕೆಗಳು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ಇದು ದೂರದರ್ಶನ ಪರದೆಗಳು ಮತ್ತು ಎಲ್ಇಡಿ ದೀಪಗಳಿಂದ ತಮ್ಮ ಬೆಳಕನ್ನು ಹರಡುತ್ತವೆ. ನಂತರ ಇವುಗಳು ರಾಸಾಯನಿಕ ಪ್ರತಿಕ್ರಿಯೆಗಳನ್ನು ವೇಗವರ್ಧನೆ ಮಾಡುತ್ತದೆ. ಸ್ಪಷ್ಟ ಬೆಳಕುಗಳ ಮೂಲಕ ಶಸ್ತ್ರಚಿಕಿತ್ಸಕರಿಗೆ ಯಾವುದೇ ಶಸ್ತ್ರಚಿಕಿತ್ಸೆಗಳು ಗೋಚರಿಸುವಂತೆ ಮಾಡುತ್ತದೆ ಎಂದು ಅಕಾಡೆಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್’ಹುಲ್ಲಿಯರ್​​ಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ಈ ಮೂರು ಸಂಶೋಧಕರು ಬಣ್ಣದ ಬೆಳಕನ್ನು ರಚಿಸಲು ಪ್ರಾಥಮಿಕವಾಗಿ ಕ್ವಾಂಟಮ್ ಡಾಟ್‌ಗಳನ್ನು ಬಳಸಿದ್ದಾರೆ. ಇದರ ಜತೆಗೆ ಮುಂದಿನ ಅಂದರೆ ಭವಿಷ್ಯದಲ್ಲಿ ಕ್ವಾಂಟಮ್ ಡಾಟ್‌ಗಳು ಹೊಂದಿಕೊಳ್ಳುವ ಎಲೆಕ್ಟ್ರಾನಿಕ್ಸ್, ಮಿನಿಸ್ಕ್ಯೂಲ್ ಸೆನ್ಸರ್‌ಗಳು, ಸ್ಲಿಮ್ಮರ್ ಸೌರ ಕೋಶಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಕ್ವಾಂಟಮ್ ಸಂವಹನಕ್ಕೆ ಕೊಡುಗೆ ನೀಡಬಹುದು ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:34 pm, Wed, 4 October 23